Ad imageAd image

“ಬನ್ನಿ ತಗೊಂಡು ನಾವು ನೀವು ಬಂಗಾರದಂಗ ಇರೋಣ”

Bharath Vaibhav
“ಬನ್ನಿ ತಗೊಂಡು ನಾವು ನೀವು ಬಂಗಾರದಂಗ ಇರೋಣ”
WhatsApp Group Join Now
Telegram Group Join Now

ಚಿಕ್ಕೋಡಿ.:-ಇದು ನಮ ಉತ್ತರ ಕರ್ನಾಟಕದ ದಸರಾ ಹಬ್ಬದಂದು ಸಂಜೆಯಾಗುತ್ತಲೇ ಎಲ್ಲರ ಹೃದಯಂತರಾಳದೊಳಗಿನ ಆತ್ಮೀಯತೆಯ ಭಾವ ದ್ವನಿ ಮಾದ್ಯಮದ ಮೂಲಕ ಹೋರ ಬರುವ, ಬೆಲೆಕಟ್ಟಲಾಗದ ಸಂದರ್ಭ!

ಅದೇಷ್ಟೋ ದಿನಗಳಿಂದ ಪರಸ್ಪರ ದ್ವೇಷ ಮತ್ಸರ ಭಾವಗಳನ್ನು ತುಂಬಿಕೊಂಡ ಮಾನವ ಮುಖಗಳನ್ನು ಒಂದು ಮಾಡುತ್ತೆ ದಸರಾ ಹಬ್ಬದ ಆತ್ಮೀಯ ಈ ಫೇಮಸ್ ಡೈಲಾಗ್.ದೇಶದಲ್ಲಿ ನಾನ ಭಾಗಗಳಲ್ಲಿ ವಿಧವಿಧವಾದ ಹಬ್ಬಗಳಿದ್ದರೂ, ಅವೆಲ್ಲವುಗಳಲ್ಲಿ ನಮ್ಮ ನಾಡ ಹಬ್ಬವಾದ ದಸರಾ ಹಬ್ಬದಲ್ಲಿಯೇ ವೈವಿಧ್ಯತೆಯ ಗೂಡು ಪ್ರೀತಿ ಮಮತೆ ಸ್ನೇಹ-ವಾಸ್ತಲ್ಯಗಳಿಂದ ಅಲಂಕಾರಗೊಳ್ಳುತ್ತೆ.

ಇನ್ನು ಈ ಹಬ್ಬದ ಒಂಭತ್ತು ದಿನಗಳ ನವರಾತ್ರಿಯ ಆಚರಣೆಯ ಸಂದರ್ಭದಲ್ಲಂತೂ ಎಲ್ಲರ ಮನೆ-ಮನೆಗಳಲ್ಲಿಯೂ ಬಗೆ ಬಗೆಯ ತಿಂಡಿ ತಿನಿಸುಗಳ ಖಾದ್ಯ ತಯಾರಿಯ ಸಡಗರ, ಅದಕ್ಕಿಂತಲೂ ಮುಂಚೆ ಮನೆಯನ್ನೆಲ್ಲಾ ಸ್ವಚ್ಛವಾಗಿ ಗುಡಿಸಿ ಬಣ್ಣ ಹೊಡೆಯುವ ತ್ರಾಸಂತು ಹೇಳಕೂಡದು. ಮನೆಯ ಪಾಲಕರಿಗೆಲ್ಲ ಇದೊಂದು ಪುರುಸೊತ್ತಿಲ್ಲದ ಕೆಲಸವಾದರೆ ಮನೆಮಕ್ಕಳಿಗಂತೂ “ಮನೆ ಸ್ವಚ್ಛ ಮಾಡುವಾಗ ಸಿಗುವ ತಮ್ಮ ಹಳೆ ಆಟಿಗೆ ಸಾಮಾನುಗಳು, ಅಲ್ಲಲ್ಲಿ ಹರಿದ ಹಳೆ ಬಟ್ಟೆಗಳು, ಬ್ಲಾಕ್ ಅಂಡ್ ವೈಟ್ ಫೋಟೋಗಳು, ಹಳೆ ಟ್ರಂಕು ಕಾಪಾಟು ಇಟ್ಟಿರುವ ಮೂಲೆಗಳಿಂದ ಹೊರಬರುವ ಚೇಳು ಹಲ್ಲಿಗಳು ಇನ್ನೂ ಇಲಿರಾಯನ ಬೇಟೆಗಾಗಿ ಒಳಬಂದು ಬುಸುಗುಡುತ್ತಾ ಕುಂತಿರುವ ನಾಗರಾಜ” ಹೀಗೆ ಎಲ್ಲರಿಗೂ ಬೇಕಾದ ಬೇಡವಾದ ಅತಿಥಿಗಳ ದರ್ಶನ ವಾಗುವುದು ಈ ದಿನಗಳಲ್ಲಿಯೇ

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!