Ad imageAd image

ಅರವಿಂದ್ ಘಟ್ಟಿ ಪರೋಪಕಾರದಿಂದ ನೆಮ್ಮದಿ

Bharath Vaibhav
ಅರವಿಂದ್ ಘಟ್ಟಿ ಪರೋಪಕಾರದಿಂದ ನೆಮ್ಮದಿ
WhatsApp Group Join Now
Telegram Group Join Now

ಚಿಕ್ಕೋಡಿ:– ಒಳ್ಳೆಯ ಕೆಲಸ  ಮಾಡಲಾಗದಿದ್ದರೂ ಬೇರೆಯವರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು. ಪರೋಪಕಾರದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ. ಶ್ರೀಮಂತಿಕೆ ಇದ್ದವರು ಜನರ ಕಷ್ಟಕ್ಕೆ ನೆರವಾಗಬೇಕು ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಅರ್ಜುನ ನಾಯಕವಾಡಿ ಹೇಳಿದರು.

ಚಿಕ್ಕೋಡಿ ಪಟ್ಟಣದಲ್ಲಿ ಎಐಜಿ ಫೌಂಡೇಶನ್ ವತಿಯಿಂದ ತೆರೆಯಲಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರಂತೆ ಜನಪ್ರತಿನಿಧಿಗಳು,ಅಧಿಕಾರಿಗಳು.ಯುವಕರು,ಪರೋಪಕಾರಿಗಳಾಗಬೇಕು ಎಂದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜು ವಡ್ಡರ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಎಂ ಆರ್ ಮುನ್ನೋಳಿಕರ, ಆಕಾಶ ಘಟ್ಟಿ ಮುಂತಾದವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.ಎಐಜಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅರವಿಂದ ಘಟ್ಟಿ, ಡಿವೈಎಸ್ಪಿ ಸುಲೇಮಾನ ತಹಶೀಲ್ದಾರ, ಜ್ಯೋತಿರ್ಲಿಂಗ ಹೊನಕಟ್ಟಿ, ಪ್ರೋ ಎಸ್ ಎಮ್ ಹುಲ್ಲನ್ನವರ, ಸುರೇಖಾ ಘಟ್ಟಿ, ವಿನೋದ ಚಿತಳೆ ಸ್ವಾಗತಿಸಿದರು. ಸಿದ್ದಾರ್ಥ ಗಾಯಗೋಳ ನಿರೂಪಿಸಿದರು. ಅರ್ಜುನ ಮಾನೆ ವಂದಿಸಿದರು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!