ಬಾಗೇಪಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಕಮೀಷನ್ ದಂಧೆ…!
ಕೃಷಿ ಉತ್ಪನ್ನ ಮಾರುಕಟ್ಟೆಯ ಅವ್ಯವಸ್ಥೆಗಳ ಬಗ್ಗೆ ಕೇಳುವವರೇ ಗತಿ ಇಲ್ಲ…
ಪಿ.ಎನ್.ಶಾಂತಮೂರ್ತಿ ಬಾಗೇಪಲ್ಲಿ.
ಬಾಗೇಪಲ್ಲಿಯ ಕೃಷಿ ಮಾರುಕಟ್ಟೆಗೆ ಆಗಮಿಸುವ ರೈತರಿಗೆ ಕುಡಿಯಲು ಹನಿ ನೀರು ಕೊಡದಿದ್ದರೂ ರೈತರು ಬೆಳೆಯುವ ತರಕಾರಿ ಬೆಳೆಗಳ ಮಾರಾಟದ ಮೇಲೆ ಕಾನೂನು ಬಾಹಿರವಾಗಿ ಶೇ 10 ರಿಂದ 12 ಕಮೀಷನ್ ವಸೂಲಿಗೆ ಮುಂದಾಗಿರುವ ದಲ್ಲಾಳಿಗಳ ಅಕ್ರಮ ಕಮೀಷನ್ ದಂಧೆಗೆ ಕಡಿವಾಣ ಹಾಕುವ ಅಧಿಕಾರಿಗಳೇ ಇಲ್ಲದಂತಾಗಿದ್ದು, ಮಾರುಕಟ್ಟೆ ಸಮಿತಿ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಹುದ್ದೆ ಸೇರಿದಂತೆ ಒಟ್ಟು 11 ಖಾಯಂ ಹುದ್ದೆಗಳಿಗೆ ಅಧಿಕಾರಿಗಳೇ ಇಲ್ಲದಂತಾಗಿದ್ದು ಕೃಷಿ ಉತ್ಪನ್ನ ಮಾರುಕಟ್ಟೆಯ ಅವ್ಯವಸ್ಥೆಗಳ ಬಗ್ಗೆ ಕೇಳುವವರೇ ಗತಿ ಇಲ್ಲದಂತಾಗಿದೆ.
ಬಾಗೇಪಲ್ಲಿ ಪಟ್ಟಣದ ಟಿ.ಬಿ. ಕ್ರಾಸ್‌ನಲ್ಲಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ತಾಲೂಕುಗಳು ಸೇರಿದಂತೆ ಆಂಧ್ರ ಪ್ರದೇಶದ ವಿವಿಧ ಪ್ರದೇಶಗಳಿಂದ ರೈತರು ಆಗಮಿಸಿ ತಾವು ಬೆಳೆದಂತಹ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ನಿತ್ಯ ಸರಿ ಸುಮಾರು 50 ಲಕ್ಷಕ್ಕೂ ಮೀರಿ ವ್ಯಾಪಾರ ವಹಿವಾಟು ನಡೆಯುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆಗೂ ನಿರೀಕ್ಷಿತ ಪ್ರಮಾಣದಲ್ಲಿ ಒಳ್ಳೆಯ ಆಧಾಯವೂ ಬರುತ್ತದೆ. ಅದರೆ ದಲ್ಲಾಳಿಗಳಿಂದ ಮಾರುಕಟ್ಟೆ ಶುಲ್ಕ ವಸೂಲಿ ಮಾಡಲು ಖಾಯಂ ಅಧಿಕಾರಿಗಳೇ ಇಲ್ಲದಂತಾಗಿದ್ದರೂ, ರೈತರಿಂದ ಮಾತ್ರ ಕಮೀಷನ್ ವಸೂಲಿ ಮಾಡುವುದು ಮಾತ್ರ ನಿಂತಿಲ್ಲ.
ಕೃಷಿ ಉತ್ಪನ್ನ ಮಾರುಕಟ್ಟೆಗೆ ನಿತ್ಯ ಆಗಮಿಸುವ ಸಾವಿರಾರು ರೈತರಿಗೆ ಶುದ್ದ ಕುಡಿಯುವ ನೀರು ಇಲ್ಲ, ವಿಶ್ರಾಂತಿ ಗೃಹ ಇಲ್ಲ, ಕಮೀಷನ್ ವಸೂಲಿಯನ್ನು ತಡೆಯುವ ಅಧಿಕಾರಿಗಳು ಇಲ್ಲದಂತಾಗಿದ್ದು, ಮಾರುಕಟ್ಟೆ ಅವರಣದಲ್ಲಿ ಸ್ವಚ್ಚತೆ ಸಂಪೂರ್ಣವಾಗಿ ಮರಿಚೀಕೆ ಆಗಿದೆ. ಮಾರುಕಟ್ಟೆ ಆವರಣದಲ್ಲಿರುವ ಕುಡಿಯುವ ನೀರಿನ ಶುದ್ದೀಕರಣ ಘಟಕ ಹಲವು ವರ್ಷಗಳಿಂದ ಕೆಟ್ಟು ನಿಂತಿದ್ದು, ನೀರು ಶುದ್ದೀಕರಣ ಘಟಕ ಸಾರ್ವಜನಿಕರ ಶೌಚಾ ಸ್ಥಳವಾಗಿ ಪರಿವರ್ತನೆಗೊಂಡು ಗಬ್ಬು ವಾಸನೆ ಬೀರುತ್ತಿದ್ದರೆ ಮತ್ತೊಂದು ಕಡೆ ರೈತರು ಬೆಳೆದು ತಂದಿರುವ ತರಕಾರಿ ಬೆಳೆಗಳ ಮಾರಾಟದ ಮೇಲೆ ಮಾರುಕಟ್ಟೆಯ ದಲ್ಲಾಳಿಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಯಮಗಳಿಗೆ ವಿರುದ್ದವಾಗಿ 100 ರೂಗಳ ವಹಿವಾಟುಗೆ ಶೇ 10 ರಿಂದ 12 ರೂ ಕಮೀಷನ್ ವಿಧಿಸಿ ರೈತರಿಂದ ಅಕ್ರಮವಾಗಿ ಹಣ ವಸೂಲಿ ಮಾಡಿ ವಂಚಿಸುತ್ತಿದ್ದಾರೆ. ರೈತರ ಗೋಸ್ಕರ, ರೈತರಿಗಾಗಿ ಎಂದು ಚುನಾವಣಾ ಸಮಯದಲ್ಲಿ ರೈತರ ನಾಮ ಸ್ಮರಣೆ ಹೆಸರಿನಲ್ಲಿ ಜಫ ಮಾಡುವ ಚನಾಯಿತ ಜನಪ್ರತಿನಿದಿಗಳು, ರೈತ ಸಂಘಗಳ ಹೋರಾಟಗಾರು ರೈತರ ಸಮಸ್ಯೆಗಳಿಗೆ ಸ್ಪಂಧಿಸಿ ಸೂಕ್ತ ಪರಿಹಾರ ಕಲ್ಪಿಸಿ, ಕಮೀಷನ್ ದಂಧೆಗೆ ಬ್ರೇಕ್ ಹಾಕುವ ಕೆಲಸ ಮಾಡಬೇಕಾಗಿದೆ.
ಬಾಗೇಪಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯಲ್ಲಿ ಒಟ್ಟು 11 ಖಾಯಂ ಹುದ್ದೆಗಳಿದ್ದು, ಯಾರೋಬ್ಬರು ಖಾಯಂ ಅಧಿಕಾರಿಗಳು, ಸಿಬ್ಬಂದಿ ಇಲ್ಲದ ಕಾರಣ ಪ್ರಭಾರ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ, ಸಹ ಕಾರ್ಯದರ್ಶಿ ತಿಂಗಳಲ್ಲಿ ಎರಡು ಮೂರು ಬಾರಿ ಮಾತ್ರ ಕಚೇರಿಗೆ ಬಂದು ಹೋಗುತ್ತಾರೆ. ಇದರಿಂದ ಸಮಯಕ್ಕೆ ಸರಿಯಾಗಿ ಕಚೇರಿಯ ಬೀಗ ತೆಗೆಯುವವರು ಇಲ್ಲದ ದುಸ್ಥಿತಿ ಎದುರಾಗಿದ್ದು, ರೈತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಕೇಳುವವರೇ ಇಲ್ಲದಂತಾಗಿದೆ.
ಮಾರುಕಟ್ಟೆ ಸಮಿತಿ ಅಧಿಕಾರಿಗಳು, ಸಿಬ್ಬಂದಿ ಹರಾಜುನಲ್ಲಿ ಇಲ್ಲದಿದ್ದರೂ ಹರಾಜು ಪ್ರಕ್ರಿಯೆಯನ್ನು ಮಂಡಿ ಮಾಲೀಕರು, ದಲ್ಲಾಳಿಗಳೆ ನಿರ್ವಹಿಸಿ ತಮಗೆ ಇಷ್ಟವಾದ ಬೆಲೆಗೆ ಕೂಗಿಕೊಂಡು ವಂಚನೆ ಮಾಡುವುದು ಇಲ್ಲಿ ನಿತ್ಯ ನಡೆಯುವ ದಂಧೆ ಆಗಿರುತ್ತದೆ, ಇದನ್ನು ಕೇಳಲೂ ಯಾರೋಬ್ಬರು ಇಲ್ಲದಂತಾಗಿದೆ.
ಒಂದು ಎಕರೆ ಜಮೀನುನಲ್ಲಿ ಟಮೋಟೊ ಬೆಳೆ ಬೆಳೆಯಲು ಲಕ್ಷಾಂತರ ರೂ ಕರ್ಚಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿಚಿತ್ರ ರೋಗಗಳ ಪರಿಣಾಮ ಅಧಿಕ ಬಂಡವಾಳ ಹಾಕುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಇಳುವರಿ ಪ್ರಮಾಣ ಕಡಿಮೆ ಆಗುತ್ತಿದೆ. ಇದರಿಂದ ಉತ್ತಮ ಬೆಲೆ ದೊರೆತರು ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸುತ್ತಿದೆ. ರೈತರು ಬೆಳೆಯುವ ಕೃಷಿ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಕೃಷಿಗೆ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ.>
-ರೈತ ಮಂಜುನಾಥ, ಮಿಟ್ಟೇಮರಿ ಗ್ರಾಮ.
ಪೋಟೊ ಶೀರ್ಷಿಕೆ: ಬಾಗೇಪಲ್ಲಿ ಪಟ್ಟಣದ ಟಿ.ಬಿ.ಕ್ರಾಸ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿಯ ಬಾಗಿಲು ಮುಚ್ಚಿರುವುದು.( ಬಿಪಿಎಲ್ 12 ಮಾರ್ಕೆಟ್ ನ್ಯೂಸ್ ಪೊಟೊ 1), ಮಾರುಕಟ್ಟೆಯ ಅವರಣದಲ್ಲಿರುವ ಕುಡಿಯವ ನೀರಿನ ಶುದ್ದೀಕರಣ ಘಟಕ ಕೆಟ್ಟು ನಿಂತಿರುವುದು.( ಬಿಪಿಎಲ್ 12 ಮಾರ್ಕೆಟ್ ನ್ಯೂಸ್ ಪೋಟೊ 2) ಅಧಿಕಾರಿಗಳು ಇಲ್ಲದಿದ್ದರೂ ದಲ್ಲಾಳಿಗಳೇ ನೇರವಾಗಿ ಹರಾಜು ನಡೆಸುತ್ತಿರುವುದು.( ಬಿಪಿಎಲ್ 12 ಮಾರ್ಕೆಟ್ ನ್ಯೂಸ್ ಪೋಟೊ 3)
ವರದಿ : ಶಾಂತಮೂರ್ತಿ