Ad imageAd image

‍ಯತೀಂದ್ರ ಸಿದ್ದರಾಮಯ್ಯ ಅಕ್ಷೇಪಾರ್ಹ ಪೋಸ್ಟ್ : ಪ್ರತಾಪ್ ಸಿಂಹ ವಿರುದ್ಧ ದೂರು

Bharath Vaibhav
‍ಯತೀಂದ್ರ ಸಿದ್ದರಾಮಯ್ಯ ಅಕ್ಷೇಪಾರ್ಹ ಪೋಸ್ಟ್ : ಪ್ರತಾಪ್ ಸಿಂಹ ವಿರುದ್ಧ ದೂರು
WhatsApp Group Join Now
Telegram Group Join Now

ಮೈಸೂರು : ಮಾಜಿ ಎಂಪಿ ಪ್ರತಾಪ್ ಸಿಂಹಗೆ ಸಂಕಷ್ಟ ಎದುರಾಗಿದೆ. ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ ಮಾಡ್ತಿದ್ದ ಸಿಂಹ ವಿರುದ್ಧ ಕಂಪ್ಲೇಂಟ್ ನೀಡಲಾಗಿದೆ.ಕಾಂಗ್ರೆಸ್ ನಿಂದ ಬಿಜೆಪಿ ಐಟಿ ಸೆಲ್ ಮತ್ತು ಪ್ರತಾಪ್ ಸಿಂಹ ವಿರುದ್ಧ ದೂರು ಸಲ್ಲಿಕೆ ಮಾಡಲಾಗಿದೆ.

ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಗೆ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಇದೀಗ ದೂರು ಸಲ್ಲಿಸಲಾಗಿದೆ.

ಕೆಪಿಸಿಸಿ ವಕ್ತಾರ ಲಕ್ಷ್ಮಣ ನೇತೃತ್ವದಲ್ಲಿ ಮುಖಂಡರು ದೂರು ನೀಡಿದ್ದಾರೆ.ಕಮಿಷನ್ ಮಸೂಲಿ, ವರ್ಗಾವಣೆ ದಂಧೆ ಸಚಿವ ಯತೀಂದ್ರ ಎಂದು ಪೋಸ್ಟ್ ಹಾಕಿದ್ದರು.

ಯತೀಂದ್ರ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿ ಪೋಸ್ಟ್ ಹಂಚಿಕೊಂಡಿದ್ದರು. ಪ್ರತಾಪ್ ಸಿಂಹ ಹಾಗೂ ಬಿಜೆಪಿ ಐಟಿ ಸೆಲ್ ವಿರುದ್ಧ ಇದೀಗ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಕೆಯಾಗಿದೆ.

ಮಾಜಿ ಎಂಪಿ ಪ್ರತಾಪ್ ಸಿಂಹ ಸರ್ಕಾರದ ಬಗ್ಗೆ ಸುಳ್ಳು ಆರೋಪ ಮಾಡ್ತಿದ್ದಾರೆ. ಸರ್ಕಾರದ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!