Ad imageAd image

ಅಂಬೇಡ್ಕರ್ ಯುವ ಸೇನೆಯಿಂದ ದೂರು ಹರವಾಳ ಗ್ರಾ.ಪಂ ಪಿಡಿಒ ಸಸ್ಪೆಂಡ್

Bharath Vaibhav
ಅಂಬೇಡ್ಕರ್ ಯುವ ಸೇನೆಯಿಂದ ದೂರು ಹರವಾಳ ಗ್ರಾ.ಪಂ ಪಿಡಿಒ ಸಸ್ಪೆಂಡ್
WhatsApp Group Join Now
Telegram Group Join Now

ಕಲಬುರಗಿ:– ಅಂಬೇಡ್ಕರ್ ಯುವ ಸೇನೆ ಜೇವರ್ಗಿ ತಾಲೂಕು ಅಧ್ಯಕ್ಷರಾದ ರವಿಂದ್ರ ನಾಟೆಕರ್ ರವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಹರವಾಳ ಗ್ರಾಮ ಪಂಚಾಯತ್ ಪಿಡಿಒ ಗೆ ಸಸ್ಪೆಂಡ್ ಮಾಡಲಾಗಿದೆ

ಹರವಾಳ ಗ್ರಾ.ಪಂ ಹಿಂದಿನ‌ ಪಿಡಿಒ ಗಂಗಾಧರ್ ರವರು 15 ನೆ ಹಣಕಾಸು ಯೋಜನೆಯ ಅನುದಾನ ದುರ್ಬಳಕೆ ಮಾಡಿ ಭಾರಿ ಅವ್ಯವಹಾರ ಮಾಡಿರುತ್ತಾರೆಂದು ಅಂಬೇಡ್ಕರ್ ಯುವ ಸೇನೆ ಜೇವರ್ಗಿ ತಾಲೂಕ ಅಧ್ಯಕ್ಷರಾದ ರವಿಂದ್ರ ನಾಟೆಕರ್ ರವರು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

15 ನೆ ಹಣಕಾಸು ಯೋಜನೆಯಲ್ಲಿ ಭಾರಿ ಅವ್ಯವಹಾರ ಮಾಡಿ ಕಾಮಗಾರಿಯನ್ನು ಕೈಗೊಳ್ಳದೆ ಓಚರ್ ಸೃಷ್ಟಿ ಮಾಡಿ ಅನುದಾನ ಲಪಟಾಯಿಸಲಾಗಿದೆ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಸದರಿ ದೂರಿನ ತನಿಖೆ ಕೈಗೊಂಡ ಅಧಿಕಾರಿಗಳು ದೂರಿನ ಕುರಿತು ವಿಚಾರಿಸಿದರೆ ಬೇರೆ ಬೇರೆ ನೆಪವೊಡ್ಡಿ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದರು.

ನಂತರ ದೂರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗಲು ಹಾಗೂ ತನಿಖೆಗೆ ಸಹಕರಿಸಲು ತಿಳಿಸಲಾಗಿತ್ತು. ಅನೇಕ ಬಾರಿ ದಾಖಲೆ ಸಲ್ಲಿಸುವಂತೆ ತಿಳಿಸಿದ್ದರೂ ಕೂಡ ತನಿಖಾಧಿಕಾರಿಗಳಿಗೆ ಸ್ಪಂದಿಸಿರುವುದಿಲ್ಲ. ದಾಖಲೆ ಸಲ್ಲಿಸಲು ಹಿಂಜರಿಯುತ್ತಿದ್ದ ಪಿಡಿಒ ಗಂಗಾಧರ್ ಕಾಮಗಾರಿಯನ್ನು ಕೈಗೊಳ್ಳದೆ ಹಾಗೂ ಪರಿಕರಗಳನ್ನು ಖರಿದಿಸದೆ ಓಚರ್ ಸೃಜನೆ ಮಾಡಿ ಭಾರಿ ಅವ್ಯವಹಾರ ಮಾಡಲಾಗಿದೆ ಅಂತ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ರೇವಣಸಿದ್ಧ ರವರು ಜಿಲ್ಲಾ ಪಂಚಾಯತಿಗೆ ವರದಿ ಸಲ್ಲಿಸಿದ್ದರು.

ಕಾರ್ಯನಿರ್ವಾಹಕ ಅಧಿಕಾರಿಗಳ ವರದಿ ಆಧರಿಸಿ ಜಿಲ್ಲಾ ಪಂಚಾಯತ ಕಲಬುರಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವಾರ ಸಿಂಗ್ ಮೀನಾ ರವರು ಹರವಾಳ ಪಿಡಿಓ ಗಂಗಾಧರ ರವರಿಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!