Ad imageAd image

ಜೇ ಜೇ ಮ್ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಗುಣಮಟ್ಟದ ಕೆಲಸ ಮಾಡಿ ಕೆ ಆರ್ ಎಸ್ ಪಕ್ಷದ ವತಿಯಿಂದ ದೂರು.

Bharath Vaibhav
ಜೇ ಜೇ ಮ್ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಗುಣಮಟ್ಟದ ಕೆಲಸ ಮಾಡಿ ಕೆ ಆರ್ ಎಸ್ ಪಕ್ಷದ ವತಿಯಿಂದ ದೂರು.
WhatsApp Group Join Now
Telegram Group Join Now

ರಾಯಚೂರು : ಜಿಲ್ಲೆ ಮಸ್ಕಿ ತಾಲೂಕಿನ ಕೊಟೆಕಲ್ ಗ್ರಾಮದಲ್ಲಿ ಕೆಲವು ದಿನಗಳಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆ ಪ್ರಗತಿಯಲ್ಲಿದ್ದು ಗುತ್ತಿಗೆದಾರರು ಮತ್ತು ಇಲಾಖೆಯ ಅಧಿಕಾರಿಗಳು ಅಂದಾಜು ಪುಸ್ತಕದಲ್ಲಿ ಇರುವ ಈ ಯೋಜನೆಯ ನೀತಿ ನಿಯಮಗಳನ್ನು,ಕಾಯ್ದೆ ಕಾನೂನುಗಳನ್ನು, ಸೂಚನೆಗಳನ್ನು ಪಾಲಿಸದೆ ತಮಗೆ ಇಷ್ಟ ಬಂದಂತೆ ಬೇಕಾ ಬಿಟ್ಟಿಯಾಗಿ ಆಳ ಮತ್ತು ಅಗಲದ ಮಾಪನ ಮಾಡದೆ ನೀರಿನ ಪೈಪುಗಳನ್ನ ಊರಿನ ಮುಖ್ಯರಸ್ತೆಯಲ್ಲಿ ಹಾಕುತ್ತಿದ್ದಾರೆ.

ಈ ಪೈಪುಗಳು ಅಲ್ಲಲ್ಲಿ ಹೊಡೆದು ಹಾಳಾಗಿ ಹೋಗಿವೆ ಮತ್ತು ಮನೆ ಮನೆಗೆ ಸಂಪರ್ಕ ಕಲ್ಪಿಸುವ ನಲ್ಲಿಗಳ ಪೈಪುಗಳು ಉತ್ತಮ ಗುಣಮಟ್ಟವಿಲ್ಲದ ಮತ್ತು ಶಾಶ್ವತವಾಗಿ ಬಾಳಿಕೆಗೆ ಬಾರದ ಪೈಪುಗಳನ್ನು ಹಾಕುತ್ತಿರುವುದು ಕಂಡುಬಂದಿರುತ್ತದೆ.

ಈ ಕಾಮಗಾರಿಯನ್ನ ಆರಂಭಿಸುವ ಪೂರ್ವದಲ್ಲಿ ಕಾಮಗಾರಿಯ ನಾಮಫಲಕ,ಯೋಜನೆಯ ಗುರಿ ಉದ್ದೇಶ ಇಲಾಖೆ ಮತ್ತು ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಹಾಕದೆ ತಮಗೆ ಮನಬಂದ ಹಾಗೆ ಕಾಮಗಾರಿ ಆರಂಭಿಸಿರುತ್ತಾರೆ.

ಈ ಕಳಪೆ ಕಾಮಗಾರಿಯಿಂದ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಪೋಲು ಆಗುತ್ತಿರುವುದನ್ನು ಗಮನಿಸಿದ ಕೆಆರ್‌ಎಸ್ ಪಕ್ಷದ ಸೈನಿಕರು ಗುತ್ತಿಗೆದಾರರು,ಅಧಿಕಾರಿಗಳು ಮತ್ತು ಇಲಾಖೆಗೆ ಸಂಪರ್ಕ ಮಾಡಿದರು ಪ್ರಯೋಜನವಾಗಲಿಲ್ಲ. ಈ ಕಾಮಗಾರಿಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿರುವ ಸಂದೇಹ ,ಅನುಮಾನ ಮೂಡುತ್ತಿದೆ.

ಕೆಳ ಹಂತದ ಗುತ್ತಿಗೆದಾರರಿಗೆ ಕಳಪೆ ಕಾಮಗಾರಿಯನ್ನು ನಿಲ್ಲಿಸಿ, ಊರಿನ ಎಲ್ಲಾ ಮನೆ ಮನೆಗಳಿಗೂ ಗುಣಮಟ್ಟದ ಸಂಪರ್ಕ ವ್ಯವಸ್ಥೆ ಕಲ್ಪಿಸಿ ಎಂದು ಪ್ರಶ್ನೆ ಮಾಡಿದಾಗ ಅವರು ಕೆ ಆರ್ ಎಸ್ ಪಕ್ಷದ ಮುಖಂಡರಿಗೆ ಜೀವ ಬೆದರಿಕೆ ಹಾಕಿರುವುದು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಕಂಡು ಬಂದಿದೆ ಈ ವಿಷಯವಾಗಿ ಎಲ್ಲಾ ಹಂತದ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ಅಧಿಕಾರಿಗಳಿಂದ ಸೂಕ್ತ ರಕ್ಷಣೆ ಮತ್ತು ಮಾಹಿತಿ ಸಿಗದಿರುವುದು ವಿಪರ್ಯಾಸ ಎಂದು ದೂರಿದ್ದಾರೆ.

ಎಲ್ಲ ಸದರಿದೂರಿನ ವಿಷಯಕ್ಕೆ ಸಂಬಂಧಿಸಿದಂತೆ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಹೊಸದಾಗಿ ಗುಣಮಟ್ಟದ ಕಾಮಗಾರಿಯನ್ನ ಪುನರ್ ನಿರ್ಮಿಸುವುದು ಈ ಕಾಮಗಾರಿಯಲ್ಲಿ ಲೋಪ ದೋಷವೆಸಿಗದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮವಹಿಸಿ ಗುತ್ತಿಗೆದಾರರ ಲೈಸೆನ್ಸ್ ರದ್ದುಪಡಿಸಿ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಿ ಈ ಕಾಮಗಾರಿಗೆ ಸಂಪೂರ್ಣ ನ್ಯಾಯ ಒದಗಿಸಿ ಕೊಡಬೇಕೆಂದು ಕೆಆರ್‌ಎಸ್ ಪಕ್ಷದ ವತಿಯಿಂದ ಮಾನ್ಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ ಇಲಾಖೆ ಉಪಯುವಾಗ ಮಾನ್ವಿ ಹಾಗೂ ಮಾನ್ಯ ತಹಶೀಲ್ದಾರರು ಮಾನ್ವಿ ಇವರಿಗೆ ಕೆಆರ್‌ಎಸ್ ಪಕ್ಷದ ವತಿಯಿಂದ ದೂರನ್ನ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಪಕ್ಷದ ರಾಯಚೂರು ಜಿಲ್ಲಾ ಉಪಾಧ್ಯಕ್ಷ ಬಸವಪ್ರಭು ಮೇದ, ಬಸವರಾಜ್ ಕೊಟೆಕಲ್, ಪ್ರಧಾನ ಕಾರ್ಯದರ್ಶಿ ಅಂಬರೀಶ್ ನಾಯಕ್, ಮಾನ್ವಿ ತಾಲೂಕ ಅಧ್ಯಕ್ಷ ವೆಂಕಟೇಶ್ ಜಿ, ಕಾರ್ಯದರ್ಶಿಗಳಾದ ರಮೇಶ್ ನಾಯಕ್, ಪಂಪಾಪತಿ ಹಡಪದ್, ವೀರೇಶ್ ಕುರುಡಿ, ಹಾಗೂ ನಿರುಪಾದಿ ಕೆ ಗೋಮರ್ಸಿ ಭಾಗವಹಿಸಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!