ಬೀದರ್: ಜಿಲ್ಲೆಯ ಕಮಲನಗರ ತಾಲೂಕಿನ ಚಿಮೆಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಧೂಪರವಾಡಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ತುಂಬಾನೇ ಅವ್ಯವಹಾರ ನಡಿಯುತಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ಮಾಧ್ಯಮದ ಮುಂದೆ ತೋಡಿಕೊಂಡರು ಇದೇ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಮಾಧ್ಯಮದ ಮುಂದೆ ಮಾತನಾಡುತ್ತಾ ನ್ಯಾಯಬೆಲೆ ಅಂಗಡಿಯ ಮಾಲೀಕರು ತಿಂಗಳಿಗೆ ಸರಿಯಾಗಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡುವುದಿಲ್ಲ ಸರಿಯಾಗಿ ಪಡಿತರ ಆಹಾರ ನೀಡುವುದಿಲ್ಲ ಮತ್ತು ಬರುವ ಪಡಿತರ ಆಹಾರದಲ್ಲಿ ಒಂದು ಕುಟುಂಬದಲ್ಲಿ ಐದು ಜನ ಇದ್ದರೆ ಪ್ರತಿ ವ್ಯಕ್ತಿಗೆ ಐದು ಕೆ.ಜಿ.ಯಂತೆ ಪಡಿತರ ಅಕ್ಕಿ ಬರಬೇಕು ಆದರೆ 25 ಕೆಜಿಯ ಬದಲು 20 ಕೆಜಿ ಮಾತ್ರ ನೀಡುತ್ತಾರೆ ಮತ್ತು ತಕ್ಕಡಿಯಲ್ಲಿ ಕೂಡ ಗೋಲ್ಮಾಲ್ ಇದೆ ಎಂದು ನ್ಯಾಯಬೆಲೆ ಅಂಗಡಿಯ ಮಾಲೀಕರ ಅನ್ಯಾಯದ ಬಗ್ಗೆ ಗ್ರಾಮದ ಮಹಿಳೆಯರು ಹೇಳಿಕೆ ನೀಡಿದರು.
ಗ್ರಾಮಸ್ಥರು ನ್ಯಾಯಬೆಲೆ ಅಂಗಡಿಯ ಮುಂದೆ ಬಂದು ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಮಾಡುತ್ತಾ ನಮ್ಮ ಗ್ರಾಮ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಕೂಡಲಿ ತೆಗೆದುಹಾಕಿ ಹೊಸ ನ್ಯಾಯಬೆಲೆ ಮಾಲೀಕರನ್ನು ನಮ್ಮ ಗ್ರಾಮಕ್ಕೆ ನೀಡಬೇಕೆಂದು ನ್ಯಾಯ ಬೆಲೆ ಅಂಗಡಿ ಮುಂದೆ ಘೋಷಣೆ ಹಾಕಿದರು.
ಇನ್ನು ಗ್ರಾಮದ ಜನರು ಹಲವು ಬಾರಿ ಆಹಾರ ಇಲಾಖೆಗೆ ಮತ್ತು ತಹಸಿಲ್ದಾರ ರವರಿಗೆ ಹಾಗೂ ತಾಲೂಕಿನ ಶಾಸಕರಿಗೆ ಈ ಬಗ್ಗೆ ಪತ್ರ ನೀಡಿ ಮನವಿ ಸಲ್ಲಿಸಿದ್ದರು ಯಾವ ಪ್ರಯೋಜನೆಯು ಆಗಿಲ್ಲ ಎಂದ ಗ್ರಾಮಸ್ಥರು ಇನ್ನು ಆಹಾರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿರುವುದಿಲ್ಲ ಇದು ಬೇಸರ ಸಂಗತಿ ಎಂದರು ಇನ್ನು ತಾಲೂಕಿನ ಶಾಸಕರಿಗೆ ತಿಳಿಸಿದಾಗ ಈ ಬಗ್ಗೆ ಶಾಸಕರು ನಿಮ್ಮ ಗ್ರಾಮಕ್ಕೆ ಗ್ರಾಮ ಸಂಚಾರದ ವೇಳೆ ಬಂದಾಗ ಈ ಸಮಸ್ಯೆ ಬಗ್ಗೆ ವಿಚಾರಿಸಿ ಬಗೆಹರಿಸುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ಈಗ ಲಾದರು ಆಹಾರ ಇಲಾಖೆಯ ಅಧಿಕಾರಿಗಳು ಕೂಡಲೆ ಇತ್ತ ಗಮನ ಹರಿಸಿ ಭ್ರಷ್ಟ ನ್ಯಾಯ ಬೆಲೆ ಅಂಗಡಿಯವರ ವಿರುದ್ಧ ಕ್ರಮ ಕೈಗೊಂಡು ಬಡವರಿಗೆ ಮುಖ್ಯ ಮಂತ್ರಿಗಳ ಆಶೆಯದಂತೆ ಅನ್ನ ಭಾಗ್ಯದ ಯೋಜನೆಯ ಅಡಿಯಲ್ಲಿ ಬಡವರಿಗೆ ಸಿಗಬೇಕಾದ ಆಹಾರ ಧಾನ್ಯಗಳನ್ನು ಸಿಗುವಂತೆ ಮಾಡುತಾರೋ ಅಥವಾ ಭ್ರಷ್ಟ ಅಂಗಡಿ ಮಾಲಿಕನು ಪಡೆಯುವ ಆಹಾರ ಧಾನ್ಯ ಉಳಿಸಿಕೊಂಡು ಕಳ್ಳ ಸಂತೆಯಲ್ಲಿ ಮಾರಾಟ ಮಾಡುವಾ ಹಣದಲ್ಲಿ ತಾವು ಪಾಲುದಾರ ರಾಗುತಾರೋ ಕಾದು ನೋಡಬೇಕು.