Ad imageAd image

ಗ್ರಾಮದಲ್ಲಿ ಶೇರೆ ಬೀರು ಬೇಡ-ಶಿಕ್ಷಣ ಬೇಕು ಅಧಿಕಾರಿಗಳಿಗೆ ಮಹಿಳೆಯರ ದೂರು

Bharath Vaibhav
ಗ್ರಾಮದಲ್ಲಿ ಶೇರೆ ಬೀರು ಬೇಡ-ಶಿಕ್ಷಣ ಬೇಕು ಅಧಿಕಾರಿಗಳಿಗೆ ಮಹಿಳೆಯರ ದೂರು
WhatsApp Group Join Now
Telegram Group Join Now

 

ಗೋಮರ್ಸಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ KRS ಪಕ್ಷದಿಂದ ಪ್ರತಿಭಟನೆ.

ಸಿಂಧನೂರು : ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಕೆ ಆರ್ ಎಸ್ ಪಕ್ಷದ ನೇತೃತ್ವದಲ್ಲಿ ಶುಕ್ರವಾರ ತಾಲೂಕಿನ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿಯವರಿಗೆ ಪ್ರತಿಭಟನಾ ಪಾದಯಾತ್ರೆ ಮೂಲಕ ಗ್ರಾಮದ ನೂರಾರು ಮಹಿಳೆಯರು,ಪಕ್ಷದ ಮುಖಂಡರು ತೆರಳಿ ಮಾನ್ಯ ತಹಶೀಲ್ದಾರರು,ಅಬಕಾರಿ ನಿರೀಕ್ಷಕರು,ತಾಲೂಕು ಪಂಚಾಯಿತಿ ಹಾಗೂ,ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಗೋಮರ್ಸಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹ ಮಾಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಮುಖಂಡ ನಿರುಪಾದಿ ಕೆ ಗೋಮರ್ಸಿ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಸತಿ ಪ್ರದೇಶಗಳ ಸಮೀಪ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ.ಇದರ ಪರಿಣಾಮವಾಗಿ ಊರಿನ ಯುವಕರು,ಕಾರ್ಮಿಕ ವರ್ಗದವರು, ರೈತಪಿ ಕೂಲಿಕಾರರು ದಿನ ನಿತ್ಯ ಮಧ್ಯ ಸೇವಿಸುವಂತಾಗುತ್ತಿದ್ದು ಇದರಿಂದ ಕುಟುಂಬದಲ್ಲಿ ಕಲಹ, ಸಾರ್ವಜನಿಕ ಅಶಾಂತಿ ಹಾಗೂ ಕಾನೂನು ವ್ಯವಸ್ಥೆಗೆ ಗ್ರಾಮದಲ್ಲಿ ಬಂಗ ಉಂಟಾಗುತ್ತಿದೆ. ವಿಶೇಷವಾಗಿ ಮಹಿಳೆಯರು,ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗುತ್ತಿದ್ದು ಇದರಿಂದ ಗ್ರಾಮದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಗ್ರಾಮದಲ್ಲಿನ ಈ ಅಕ್ರಮ ಮಧ್ಯ ಮಾರಾಟವು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದ್ದು ಸಮಾಜಕ್ಕೆ ಗಂಭೀರ ಹಾನಿ ಉಂಟು ಮಾಡುತ್ತಿದೆ ಗ್ರಾಮದ ಹಲವು ಅಂಗಡಿ ಮುಂಗಟಗಳಲ್ಲಿ,ಕಿರಾಣಿ ಅಂಗಡಿಯಗಳಲ್ಲಿ,ಮನೆಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಇದರ ಪರಿಣಾಮ ಮಧ್ಯವು ಗ್ರಾಮಸ್ಥರಿಗೆ ಸುಲಭವಾಗಿ ದೊರೆಯುವಂತಾಗುತ್ತಿದೆ,ಆದ್ದರಿಂದ ದಯವಿಟ್ಟು ಸಂಬಂಧಿಸಿದ ಸ್ಥಳಗಳಲ್ಲಿ ತಕ್ಷಣ ದಾಳಿ ನಡೆಸಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಅವರನ್ನ ಶಿಕ್ಷೆಗೆ ಒಳಪಡಿಸಿ ಸಾರಾಯಿ ಮುಕ್ತ ಗೋಮರ್ಸಿ ಯನ್ನಾಗಿ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಮಾಜಿಕ ಹೋರಾಟಗಾರರಾದ ವಿರುಪಮ್ಮ,ಲಕ್ಷ್ಮೀ ಪತ್ತಾರ,ಬಸವರಾಜ ಗೋಡಿಹಾಳ, ದಾವಲ್ ಸಾಬ್ ದೊಡ್ಮನಿ,ಕೆ ಆರ್ ಎಸ್ ಪಕ್ಷದ ಮುಖಂಡರಾದ ಶಿವರಾಜ್ ಕಪಗಲ್,ವಿಜಯ್ ಕುಮಾರ್,ವಿಶ್ವನಾಥ್ ನಾಯ್ಡು,ಕನಕಪ್ಪ ಉಡೆಜಾಲಿ,ಗಣೇಶ್ ಅಮೃತ್,ಬಸವರಾಜ ಅಮೀನಗಡ, ಮೌನೇಶ್,ಗಣೇಶ್ ಸಾರಂಗಿ, ಮೊಹಮದ್ ಗೌಸ್,ಅಯ್ಯಪ್ಪ ಮೇಟಿ, ವೀರೇಶ್ ಉಡಮಕಲ್,ಅಪ್ಪಯ್ಯ ಗೊಮರ್ಸಿ,ಹನುಮಂತ,ಮೆಹಬೂಬ್ ಸಾಬ್,ಶಾಮಿಧ್ ಅಲಿ,ನಾಗಪ್ಪ,ಮುದಿಯಪ್ಪ, ಶ್ರೀನಿವಾಸ, ಪ್ರಶಾಂತ್, ಮೂರ್ತುಜಾ ಸೇರಿದಂತೆ ಗ್ರಾಮದ ನೂರಾರು ಜನ ಮಹಿಳೆಯರು ಸೇರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!