ನಿಪ್ಪಾಣಿ :ಮಹಿಳೆಯರ ಸಬಲೀಕರಣಕ್ಕೆ ಛಲ, ಆತ್ಮವಿಶ್ವಾಸ ಅಡಿಗಲ್ಲು. ಬೇಡಕಿಹಾಳದಲ್ಲಿ ಸಾಹಿತ್ಯ ಸಂಸ್ಕೃತಿ, ಕೃಷಿ ಹಾಗೂ ಸಾಮಾಜಿಕ ಫೌಂಡೇಶನ್ ವರ್ಧಂತಿ ದಿನ ಪ್ರಯುಕ್ತ ಉದ್ಯಮಿ ರಾಜು ವಡ್ಡರ ಅಭಿಮತ
ಮಹಿಳೆಯರಲ್ಲಿ ಆತ್ಮವಿಶ್ವಾಸ ಸಬಲತೆಯ ಛಲವಿದ್ದರೆ ತಮ್ಮ ವ್ಯವಸಾಯ ಉದ್ಯಮದಲ್ಲಿ ಗುರಿ ಮುಟ್ಟಲು ಸಾಧ್ಯ ಇದಕ್ಕೆ ಉತ್ತಮ ಉದಾಹರಣೆ ಮಹಿಳಾ ಉದ್ಯಮಿ ವಿದ್ಯಾ ತಾಯಿ ಶಿಂಧೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜೇಂದ್ರ ವಡ್ದರ್ ತಿಳಿಸಿದರು. ಅವರು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಸಾಮಾಜಿಕ ಫೌಂಡೇಶನ್ ದ ವರ್ಧಂತಿ ದಿನದ ಪ್ರಯುಕ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಪ್ರಕಾಶ್ ಪಾಟೀಲ್ ಕಿನೇಕರ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಹಿಳಾ ಉದ್ಯಮಿ ವಿದ್ಯಾತಾಯಿ ಶಿಂಧೆ ಮಾತನಾಡಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯಬೇಕು ತಾನು ಕೈಗೊಂಡ ಕೆಲಸದ ಮೇಲೆ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಸ್ತ್ರೀ ಅಬಲೆಯಲ್ಲ ಸಬಲೇ ಎಂಬುದನ್ನು ಎತ್ತಿ ತೋರಿಸಬೇಕು ಎಂದು ತಿಳಿಸಿದರು. ಪ್ರಾರಂಭದಲ್ಲಿ ವೇದಿಕೆಯಲ್ಲಿಯ ಗಣ್ಯರಿಂದ ಕಾರ್ಯಾಲಯದ ಉದ್ಘಾಟನೆ ನಡೆಯಿತು.
ತದನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ್ ಬಿಜಲೇ ನಿವೃತ್ತ ಶಿಕ್ಷಕ ಡಿ.ಎನ್ ದಾಬಾಡೇ,ಪ್ರಕಾಶ ಪಾಟೀಲ ಹಾಗೂ ವಿದ್ಯಾ ಶಿಂಧೆ ಅವರು ಉಪಸ್ಥಿತಿಯಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಆರ್. ಜಿ. ಡೋಮನೆ,ವಿಕ್ರಂ ಸಿಂಗಾಡೆ, ಅಭಯ ಖೋತ, ಜೆ.ಎ.ಖೋತ, ಸುನಿಲ ನಾರೆ,ಶಿವರಾಜ್ ಚೌಗುಲೆ, ಪರಗೌಡ ಮಗದುಮ್ ಸೇರಿದಂತೆ ಗ್ರಾಮಸ್ಥರು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಅಶ್ವಿನಿ ಚೌಗುಲೆ ನಿರೂಪಿಸಿ ಪ್ರಮೋದ ವಂದಿಸಿದರು.
ವರದಿ: ಮಹಾವೀರ ಚಿಂಚಣೆ




