Ad imageAd image

ಶಿಕ್ಷಕರಿಗೆ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

Bharath Vaibhav
ಶಿಕ್ಷಕರಿಗೆ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ
WhatsApp Group Join Now
Telegram Group Join Now

ಹುಣಶ್ಯಾಳ ಪಿ.ಬಿ:(ಬಸವನ ಬಾಗೇವಾಡಿ ) ಶಾಲಾ ಅಭಿವೃದ್ಧಿ ಮತ್ತು ಮೇಲು ಉಸ್ತುವಾರಿ ಸಮಿತಿ
ಸರ್ಕಾರಿ ಆದರ್ಶ ವಿದ್ಯಾಲಯ ಹುಣಶ್ಯಾಳ್ ಪಿ.ಬಿ . ಯಲ್ಲಿ ೨೦೨೪-೨೦೨೫ ಸಾಲಿನಲ್ಲಿ ಅತ್ಯುತ್ತಮ ಫಲಿತಾಂಶ ಸಾಧನೆ ಮಾಡಿದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಭಿನಂದನಾ ಸಮಾರಂಭ ನಡೆಯಿತು.

ರಾಜುಗೌಡ. ಬ. ಪಾಟೀಲ್ ಶಾಸಕರು ದೇವರು ಹಿಪ್ಪರಗಿ ಮತಕ್ಷೇತ್ರ ಉದ್ಘಾಟನೆ ಹಾಗೂ ಶಾರದದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಆದರ್ಶ ವಿದ್ಯಾಲಯದ ಶಿಕ್ಷಕರು ಮಕ್ಕಳಿಗೆ ಉತ್ತಮ ಕಲಿಸುವಿಕೆ ಯಿಂದ ವಿದ್ಯಾರ್ಥಿಗಳ ಪ್ರಯತ್ನದಿಂದ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುವರು.

ಇದೇ ರೀತಿ ಮುಂದಿನ ದಿನಮಾನಗಳಲ್ಲಿ ಶಿಕ್ಷಕರು ಉತ್ತಮ ಕೆಲಸ ಮಾಡಿ ಹೆಚ್ಚು ಫಲಿತಾಂಶ ಬರುವಂತೆ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಬರಬೇಕು ಎಂದರು.  ಸತ್ಯಜಿತ್ ಎಸ್ ಪಾಟೀಲ್. ಉದ್ಘಾಟನೆ ಮಾಡಿ ಮಾತನಾಡಿದರು.

ಡಾ. ಪ್ರಭುಗೌಡ ಲಿಂಗದಳ್ಳಿ ನೇತ್ರ ತಜ್ಞರು ಆನಂದ್ ಎಂ ಸಜ್ಜನ್ ಅಧ್ಯಕ್ಷರು ಎಸ್ ಡಿ ಎಂ ಸಿ ಸರ್ಕಾರಿ ಆದರ್ಶ ವಿದ್ಯಾಲಯ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ಫಲಿತಾಂಶಕ್ಕೆ ಕಾರಣರಾದ ಆದರ್ಶ ವಿದ್ಯಾಲಯದ ಶಿಕ್ಷಕರನ್ನು ಹಾಗೂ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನ ಮಾಡಿದರು.

ಕಾರ್ಯಕ್ರಮದಲ್ಲಿ ಅಪ್ಪು ನಾಯಕ್ ಅಧ್ಯಕ್ಷರು ಗ್ರಾಮ ಪಂಚಾಯಿತಿ ಹುಣಶ್ಯಾಳ ಪಿ ಬಿ  ಕಾಶಿಬಾಯಿ ಎಸ್ ರಾಥೋಡ್ ಉಪಾಧ್ಯಕ್ಷರು  ಸವಿತಾ ಚಾಂದಕವಟೆ  ಟಿ ಎಸ್ ಕೊಲ್ಲಾರ್ ಓಪನ್ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ವಿಜಯಪುರ  ವಸಂತ ರಾಥೋಡ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುನಿಲ್ ನಾಯಕ್ ಸಮನ್ವಯ ಅಧಿಕಾರಿಗಳು ಸುಭಾಷ್ ಟಿ ಹರಿಜನ ಮು. ಗು.  ಉಮೇಶ್ ಕೌಲಗಿ ಅಧ್ಯಕ್ಷರು ಆದರ್ಶ ಶಿಕ್ಷಕರ ವೇದಿಕೆ  ಹೆಚ್ ಬಿ ಬಾರಿ ಕಾಯಿ ಅಧ್ಯಕ್ಷರು ಕ ರಾ. ಪ್ರಾ. ಶಾ.ಶಿ. ಸಂಘ ಎಸ್ ಎಸ್ ಅಂಬಲಿ ಶಿಕ್ಷಣ ಸಯೋಜಕರುಶಂಕರ್ ಬಾಗೇವಾಡಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕುಮಾರ್ ಕಾರ್ತಿಕ್ ಬೂದಿಹಾಳ್ ವಿದ್ಯಾರ್ಥಿ ಪ್ರತಿನಿಧಿ. ಅಜೀಜ್ ಬಳಬಟ್ಟಿ. ಸತೀಶ್ ಬಿರಾದಾರ. ರಮೇಶ್ ಮಕಾಶಿ. ಮಲ್ಲಿಕಾರ್ಜುನ್ ರಾಜ್ನಾಳ್. ಶಿವು ಮಡಿಕೇಶ್ವರ್. ಪುಂಡಲಿಕ್ ಪವಾರ್ ಹಾಗೂ ಗ್ರಾಮದ ಗಣ್ಯ ಮಾನ್ಯರು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

ವರದಿ: ಕೃಷ್ಣಾ ರಾಠೋಡ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!