ಐಗಳಿ: ೨೦೨೫-೨೬ ಸಾಲಿನ ರೋಟರಿ ಕ್ಲಬ್ ಆಫ್ ಅಥಣಿ ವತಿಯಿಂದ ನೀಡುವ ಗುರು ಶ್ರೀ ಪ್ರಶಸ್ತಿಗೆ ಬಾಜನರಾದ ಐಗಳಿ ಗ್ರಾಮದ ಎ. ಜಿ. ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಜನಗೌಡ ಇವರಿಗೆ ಗ್ರಾಮಸ್ಥರು ಶ್ರೀ ಬೈರವನಾಥ ದೇವಾಲಯದಲ್ಲಿ ಸತ್ಕರಿಸಿ ಗೌರವಿಸಿದರು.

ಸದಾಶಿವ ಜನಗೌಡ ಇವರು ಉತ್ತಮ, ಸರಳ, ಸಜ್ಜನ ಶಿಕ್ಷಕರಾಗಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಮಕ್ಕಳಿಗೆ ನೀಡಿ ಪ್ರತಿಯೊಂದು ಮಕ್ಕಳ ಬಗ್ಗೆ ವಿಷೇಶ ಕಾಳಜಿ ವಹಿಸಿದು. ಗ್ರಾಮದ ಪ್ರತಿಒಬ್ಬರು ಜೊತೆಗೆ ಒಡನಾಟ ಹೊಂದಿದ ಒವರು ಕೈಲಾದ ಸಹಾಯ ಸಹಕಾರ ನೀಡುತ್ತಾ ಬಂದಿದ್ದಾರೆ ಇವರ ಕಾರ್ಯವನ್ನು ಮೆಚ್ಚಿ ಅಥಣಿ ರೋಟರಿ ಕ್ಲಬ್ ಆಪ್ ಸಂಸ್ಥೆಯವರು ೨೦೨೫-೩೬ ಸಾಲಿನ ಉತ್ತಮ ಗುರು ಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಇವರ ಸಾಧನೆಗೆ ಐಗಳಿ ಹಾಗೂ ಕಕಮರಿ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಐಗಳಿ ಗ್ರಾಮದ ಹಿರಿಯರಾದ ಬಸಪ್ಪ ಪೂಜಾರಿ ,ಶಿವಾನಂದ ಸಿಂಧೂರ, ಜಗದೀಶ್ ಕೋರುಬು, ಜಗದೀಶ ತೆಲಸಂಗ, ಶಂಕರ್ ಪೂಜಾರಿ, ಬಸವರಾಜ ನೇಮಗೌಡ, ಸುರೇಶ್ ಬಿಜ್ಜರಗಿ, ಮಲ್ಲಪ್ಪ ಪೂಜಾರಿ ಮುಂತಾದವರು ಉಪಸ್ಥಿತಿ ಇದ್ದರು.




