Ad imageAd image

ಪಿಯುಸಿ: ಹಾಸ್ಟೆಲ್ ಸಾಧಕರಿಗೆ ವೆಂಕಟೇಶ್ ಕುಲಕರ್ಣಿಅವರಿಂದ ಅಭಿನಂದನೆ

Bharath Vaibhav
ಪಿಯುಸಿ: ಹಾಸ್ಟೆಲ್  ಸಾಧಕರಿಗೆ ವೆಂಕಟೇಶ್ ಕುಲಕರ್ಣಿಅವರಿಂದ ಅಭಿನಂದನೆ
WhatsApp Group Join Now
Telegram Group Join Now

ಅಥಣಿ: ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅಥಣಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ವೆಂಕಟೇಶ್ ಕುಲಕರ್ಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು ಈ ಬಾರಿ 2024- 25 ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಬಾಲಕಿಯರು ಪಿಯುಸಿ ಫಲಿತಾಂಶದಲ್ಲಿ ಶೇಕಡಾ ನೂರಕ್ಕೆ 100 ರಷ್ಟು ಆಗಿದ್ದು, ವಿದ್ಯಾರ್ಥಿಗಳು ನಮ್ಮ ನಿಲಯದ ಕೀರ್ತಿ ಹೆಚ್ಚಿಸಿದ್ದಾರೆ.

ಕಲಾ ವಿಭಾಗದಲ್ಲಿ ಕುಮಾರಿ ವರ್ಷಾ ಕಾಶಿನಾಥ ಧರೆನವರ (ಶೇ 90.50) ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ. ಹಾಗೂ ವಿಜ್ಞಾನ ವಿಭಾಗದಲ್ಲಿ ಕುಮಾರಿ ತನುಜಾ ಕೋಳಕರ ಇವರು ( ಶೇ 89.33) ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ ವಾಣಿಜ್ಯ ವಿಭಾಗದಲ್ಲಿ ಕುಮಾರಿ ಕೀರ್ತನಾ ಕಾಂಬಳೆ (ಶೇಕಡಾ 92. 83 )ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ

ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿ ಎಂದು ಶುಭ ಹಾರೈಸುತ್ತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸಾತ ನೀಡಿದ ನಿಲಯದ ವಾರ್ಡನಗಳಿಗೆ ಧನ್ಯವಾದ ತಿಳಿಸಿದರು.

ವರದಿ: ರಾಜು ವಾಘಮಾರೆ

WhatsApp Group Join Now
Telegram Group Join Now
Share This Article
error: Content is protected !!