ಬೆಂಗಳೂರು: ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರದ ರಾಮಸ್ವಾಮಿ ಬಡಾವಣೆಯ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಸಂಘದ ವಾರ್ಷಿಕೋತ್ಸವ ಮತ್ತು ನಾಡ ಪ್ರಭು ಕೆಂಪೇಗೌಡರ 515ನೇ ಜನ್ಮದಿನೋತ್ಸವನ್ನು ಅಧ್ಯಕ್ಷ ಮಲ್ಲೇಶ್ ಕೆ. ಸೇರಿದಂತೆ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಾಡ ಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿ ಅಂದ್ರಹಳ್ಳಿ, ದೊಡ್ಡಬಿದರಿಕಲ್ಲು, ವಿದ್ಯಾಮಾನ ನಗರ ಬಾಲಾಜಿ ನಗರ ಮತ್ತು ರಾಮಸ್ವಾಮಿ ಸೇರಿದಂತೆ ವಿವಿಧ ಬಡಾವಣೆಗಳ ರಾಜಬೀದಿಗಳಲ್ಲಿ ವೀರಗಾಸೆ ಡೊಳ್ಳು ಕುಣಿತ ಕೋಲಾಟ ಕಂಸಾಳೆ ನೃತ್ಯ ವಿವಿಧ ಕಲಾತಂಡಗಳೊಂದಿಗೆ ಮತ್ತು ಮುತ್ತೈದೆಯರಿಂದ ಕಳಸ ದೊಂದಿಗೆ ಮೆರವಣಿಗೆ ಜರುಗಿದವು.
ಮೆರವಣಿಗೆಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಜೆವರಾಯ ಗೌಡ, ಯುವ ಮುಖಂಡ ಬಿಬಿಎಂಪಿ ಅಭ್ಯರ್ಥಿ ಆಕಾಂಕ್ಷಿ ಹಾಗೂ ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ನಾಗರಾಜ್, ಧೀಮಂತ ನಾಯಕ ಮಂಡ್ಯ ಮಲ್ಲೇಶ್, ಬೃಂದಾವನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ಅರುಣ್ ಭೈಲಪ್ಪ
ಸೇರಿದಂತೆ ಅಂದ್ರಹಳ್ಳಿಯ ಸುತ್ತಮುತ್ತಲಿನ ಬಡಾವಣೆಗಳ ಹಿರಿಯ ಮುಖಂಡ ಮಹಿಳೆಯರು ಮುಂತಾದವರು ಭಾಗವಹಿಸಿದ್ದರು.
ಗಂಗಣ್ಣ ಕೆ. ಮಂಗೇಶ್, ರಂಗಸ್ವಾಮಿ, ಶ್ರೀನಿವಾಸ್. ರಘು ಜಿ,ರಾಮಸ್ವಾಮಿ, ಮಂಜುನಾಥ್ ಎಸ್, ಮಲ್ಲೇಶ್ ಕೆಎನ್, ಶಿವೇಗೌಡ, ಸತೀಶ್ ಎಂ, ರವಿ ಎಸ್,ಸಂಚಾಲಕ ನವೀನ್ ಕುಮಾರ್, ಶ್ರೀನಿವಾಸ್ ಎಂ. ಕೆಂಚಪ್ಪ , ರವಿಕುಮಾರ್ ಹೆಚ್ ವಿ,ಶಿವಣ್ಣ , ನಾಗರಾಜು, ಹರೀಶ್, ಸತೀಶ್, ಕೆಂಪಯ್ಯ, ಕುಮಾರ್, ಲೋಕೇಶ್, ಕೃಷ್ಣ, ಚನ್ನೇಗೌಡ,ಶಂಕರ್, ಸುದೀಪ್ ಇವರುಗಳು ಕೆಂಪೇಗೌಡರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ:ಅಯ್ಯಣ್ಣ ಮಾಸ್ಟರ್