ಚಿಕ್ಕೋಡಿ:- ಇಂದಿರಾನಗರದಲ್ಲಿ ಕಾಂಗ್ರೆಸ್ ಪರ ಮತಯಾಚನೆ ಕಾರ್ಯಕ್ರಮವನ್ನು ನಗರಸೇವಕರಾದ ಸಾಬಿರ್ ಜಮಾದಾರ್ ಹಾಗೂ ಮುದ್ದು ಸರ್ ಜಮಾದಾರ್ ಇವರ ಮುಂದಾಳತ್ವದಲ್ಲಿ ಮತಯಾಚನೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ನಾಳೆ ನಡೆಯುವ ಮೇ 7 ರಂದು ತಪ್ಪದೇ ಯಾರು ಮನೆಯಲ್ಲಿ ನಿಲ್ಲದೆ ಪ್ರತಿಯೊಬ್ಬರು ಮತದಾನ ಹಕ್ಕನ್ನು ಚಲಾಯಿಸಬೇಕು ತಪ್ಪದೆ ಮತದಾನ ಮಾಡಬೇಕು ಕಾಂಗ್ರೆಸ್ ಪಕ್ಷದ ಕೈ ಗುರುತಿಗೆ ಅಮೂಲ್ಯವಾದ ಮತ ಹಾಕಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ, ರಾಮಾ ಮಾನೆ, ಶಾಸಕರಾದ ಎಚ್ ಡಿ ತಮ್ಮಯ್ಯ, ಹಾಗೂ ಕಾಂಗ್ರೆಸ್ ಮುಖಂಡರು ಮಾತನಾಡಿ ಈ ಬಾರಿ 2 ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಪ್ರಿಯಾಂಕಾ ಜಾರಕಿಹೊಳಿಯವರನ್ನು ಆರಿಸಿ ತರಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗೋಕಾಕದ ಯೂಟ್ಯೂಬರ್ ಲಫಂಗ ರಾಜಾ ಎಂಬ ಹಾಸ್ಯ ಕಲಾವಿದರು ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೊಳಿ ಇವರಿಗೆ ಮತ ನೀಡಿ ಆರಿಸಿ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಇಂದ್ರಾನಗರದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹದಿನಾಲ್ಕು ಮತ್ತು ಹದಿನೈದು ವಾರ್ಡಿನ ಎಲ್ಲ ಮಹಿಳೆ ಹಾಗೂ ಪುರುಷರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ವರದಿ ರಾಜು ಮುಂಡೆ