ಬೆಂಗಳೂರು: ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆತ ಎಂಬ ನಾಟಕೀಯ ಬೆಳವಣಿಗೆ ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಪ್ರಭಾವಿ ಮುಖಂಡ ಲಗ್ಗೆರೆ ನಾರಾಯಣಸ್ವಾಮಿರವರು ನೊಂದ ಮಹಿಳೆ ಸುದ್ದಿ ಗೋಷ್ಟಿಯಲ್ಲಿ ಭಾಗವಹಿಸಿದ್ದರು.’ಲಗ್ಗೆರೆ ನಾರಾಯಣಸ್ವಾಮಿ’ಬಿಜೆಪಿ ಪಕ್ಷ ನೊಂದ ಮಹಿಳೆಯರ ಪರ ಬರಲ್ಲಿಲ, ರೇಪಿಸ್ಟ್ ಗಳು, ಸುಳ್ಳು ಹೇಳುವವರ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿಂತಿದ್ದಾರೆಂದು ಆರೋಪಿಸಿದರು.
ಬಿಜೆಪಿ ಶಾಸಕ ಮುನಿರತ್ನರವರ ಮೊಟ್ಟೆ ಎಸೆತವನ್ನು ಬಹುಡೊಡ್ಡ ಪ್ರಕರಣ ಎಂದು ಬಿಂಬಿಸುತ್ತಿರುವ ಬಿಜೆಪಿ ಪಕ್ಷ. ಬಿಜೆಪಿ ಪಕ್ಷದ ನೊಂದ ಮಹಿಳೆ ವಿಧಾನಸೌಧದಲ್ಲಿ ಅತ್ಯಾ ಚಾರವಾದರು ಅದರ ಬಗ್ಗೆ ನ್ಯಾಯ ಒದಗಿಸಲು ಮತ್ತು ಮಹಿಳೆಯ ನೋವು ಅಲಿಸಲು ಬಿಜೆಪಿ ಪಕ್ಷ ಯಾವ ಮುಖಂಡರು ಮುಂದೆ ಬರಲ್ಲಿಲ್ಲಾ ಎಂದು ಲಗ್ಗೆರೆ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು.
ಶಾಸಕ ಮುನಿರತ್ನ ಸ್ವಯಂಪೇರಿತರಾಗಿ ಮೊಟ್ಟೆದಾಳಿ ಮಾಡಿಸಿಕೊಂಡಿದ್ದಾರೆ ಎಕೆಂದರೆ ಸಾರ್ವಜನಿಕರಿಂದ ಕನಿಕರ ಗಿಟ್ಟಿಕೊಳ್ಳಲು ಈ ರೀತಿ ನಾಟಕ ಮಾಡಿದ್ದಾರೆ.
ಶಾಸಕ ಮುನಿರತ್ನ ಕುಟುಂಬ ರೌಡಿ ಹಿನ್ನಲೆ ಇದೆ. ಶಾಸಕರಾಗಿ ಆಯ್ಕೆಯಾಗಿದ ನಂತರ ರೌಡಿಸಂ ಮಾಡುವುದು ಬಿಟ್ಟಿಲ್ಲ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ವಿರುದ್ದ ನಮ್ಮ ಹೋರಾಟ ನಿರಂತರ. ಪ್ರಜಾಪ್ರತಿನಿಧಿ ಒಬ್ಬ ಕ್ರಿಮಿನಲ್ ಅದರೆ ಸಮಾಜ ಕೆಟ್ಟು ಹೋಗುತ್ತದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಂತಿಯುತ ಹೋರಾಟದಲ್ಲಿ ಇರುವವರು, ಎಂದು ಕಾನೂನನ್ನು ಕೈಗೆತ್ತಿಕೊಂಡಿಲ್ಲ ಎಂದು ಲಗ್ಗೆರೆ ನಾರಾಯಣ ಸ್ವಾಮಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ವರದಿ: ಅಯ್ಯಣ್ಣ ಮಾಸ್ಟರ್