Ad imageAd image

ಅಭಿಮಾನಿ ಪ್ರಶಾಂತಗೆ ಸನ್ಮಾನಿಸಿದ ಕಾಂಗ್ರೆಸ್ ಮುಖಂಡರು

Bharath Vaibhav
ಅಭಿಮಾನಿ ಪ್ರಶಾಂತಗೆ ಸನ್ಮಾನಿಸಿದ ಕಾಂಗ್ರೆಸ್ ಮುಖಂಡರು
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಶಾಸಕ, ಸಚಿವ ಡಾ.ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಹರಕೆ ಹೊತ್ತು ರುದ್ನೂರು ಗ್ರಾಮದಿಂದ ಸೇಡಂನ‌ ಶ್ರೀ ಕೊತ್ತಲ ಬಸವೇಶ್ವರ ದೇವಾಲಯವರೆಗೂ ದೀರ್ಘ ದಂಡ ನಮಸ್ಕಾರ ಹಾಕಿರುವ ಸೇಡಂ ತಾಲೂಕಿನ ರುದ್ನೂರು ಗ್ರಾಮದ ಯುವಕ ಪ್ರಶಾಂತ ಉಪ್ಪಿನ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಸನ್ಮಾನ ಮಾಡಿದರು.

ಮಂಗಳವಾರ ಯುವಕ ಪ್ರಶಾಂತ ಉಪ್ಪಿನ ರುದ್ನೂರು ಗ್ರಾಮದಲ್ಲಿರುವ ಮನೆಗೆ ತೆರಳಿದ ಡಾ.ಶರಣಪ್ರಕಾಶ ಪಾಟೀಲ ಅವರ ಸಹೋದರ ಕೃಷಿ ಸಮಾಜದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಪಾಟೀಲ ಊಡಗಿ, ಸೇಡಂ ಬ್ಲಾಕ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಕೃಷಿ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ರೇವಗೊಂಡ, ಮಹೇಶ ಪಾಟೀಲ ತರನಳ್ಳಿ, ಅಶೋಕರೆಡ್ಡಿ ಕೆರಳ್ಳಿ, ಮಹೇಶ ಗಣಾಪುರ, ಜಗದೇವಯ್ಯಸ್ವಾಮಿ ಭೂತಪುರ, ಜಗದೇವಯ್ಯ ಭಂಡ, ರವಿ ವಾರದ್, ರೇವಣ್ಣ ನಾಗಪ್ಪ ಉಪ್ಪಿನ್ ಸೇರಿದಂತೆ ರುದ್ನೂರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!