Ad imageAd image

ಡಿಕೆ ಶಿವಕುಮಾರ್ ನೇತೃತ್ವದಲ್ಲಿ ‘ರಾಜಭವನ ಚಲೋ’ ಹೊರಟ ಕಾಂಗ್ರೆಸ್ ನಾಯಕರು 

Bharath Vaibhav
ಡಿಕೆ ಶಿವಕುಮಾರ್ ನೇತೃತ್ವದಲ್ಲಿ ‘ರಾಜಭವನ ಚಲೋ’ ಹೊರಟ ಕಾಂಗ್ರೆಸ್ ನಾಯಕರು 
WhatsApp Group Join Now
Telegram Group Join Now

ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ‘ರಾಜಭವನ ಚಲೋ’ ಹೊರಟಿದ್ದಾರೆ.

ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂಭಾಗದಿಂದ ರಾಜಭವನದವರೆಗೆ ಕಾಂಗ್ರೆಸ್ ರಾಜಭವನ ಚಲೋ” ಹಮ್ಮಿಕೊಂಡಿದೆ.ಇತ್ತ ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ಸಂಬಂಧ ಹೈಕೋರ್ಟ್ ಕೂಡ ತೀರ್ಪು ಪ್ರಕಟಿಸಲಿದೆ.

ಸತ್ಯಮೇವ ಜಯತೆ” ಕಾಂಗ್ರೆಸ್ ಪಕ್ಷದ ಸತ್ಯಕ್ಕೆ ಎಂದಿಗೂ ಜಯವಿರುತ್ತದೆ

“ಸತ್ಯಮೇವ ಜಯತೆ” ಕಾಂಗ್ರೆಸ್ ಪಕ್ಷದ ಸತ್ಯಕ್ಕೆ ಎಂದಿಗೂ ಜಯವಿರುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳು ಕಂಡುಬರುತ್ತಿದೆ. ಕೆ.ಜೆ ಜಾರ್ಜ್ ಅವರಿಗೆ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ, ಈಗ ಬಿಜೆಪಿಯ ರಾಜಕೀಯ ದುರುದ್ದೇಶಕ್ಕೆ ಸೋಲಾಗಿದೆ, ಡಿ. ಕೆ ಶಿವಕುಮಾರ್ ಅವರ ವಿರುದ್ದ ತನಿಖೆ ನಡೆಸುವ ನಿರ್ಧಾರವನ್ನು ಹಿಂಪಡೆದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿಯ ಬಸವಗೌಡ ಪಾಟೀಲ್ ಹಾಗೂ ಸಿಬಿಐ ಸಲ್ಲಿಸಿದ್ದ ಆಕ್ಷೇಪಣೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ಬಿಜೆಪಿ ಸತ್ಯಕ್ಕೆ ತಾತ್ಕಾಲಿಕ ಹಿನ್ನೆಡೆ ಇರಬಹುದು ಆದರೆ ಸತ್ಯಕ್ಕೆ ಸಾವಿಲ್ಲ ಎನ್ನುವುದನ್ನು ಮರೆಯದಿರಿ. ಬಿಜೆಪಿಯ ಎಲ್ಲಾ ಸುಳ್ಳಿನ ಆರೋಪಗಳನ್ನೂ “ಸತ್ಯ”ವು ಸೋಲಿಸಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!