ನವದೆಹಲಿ : ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂದು ಕಾಂಗ್ರೆಸ್ ಪಕ್ಷವು ವೋಟ್ ಚೋರಿ ಆರೋಪದ ವಿರುದ್ಧದ ಅಭಿಯಾನವನ್ನು ನಡೆಸಲಿದ್ದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಸೇರಿದಂತೆ ಇಡೀ ಉನ್ನತ ನಾಯಕತ್ವವು ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತು ಸಚಿನ್ ಪೈಲಟ್ ಸೇರಿದಂತೆ ಹಿರಿಯ ನಾಯಕರು ಸಹ ಭಾಗವಹಿಸಲಿದ್ದಾರೆ. ಕರ್ನಾಟಕದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿಗೆ ತೆರಳಿದ್ದಾರೆ.
ಚುನಾವಣಾ ಅಕ್ರಮಗಳ ವಿರುದ್ಧ ಪಕ್ಷವು ದೇಶಾದ್ಯಂತ ಸುಮಾರು 5.5 ಕೋಟಿ ಸಹಿಗಳನ್ನು ಸಂಗ್ರಹಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದ್ದಾರೆ. ಈ ರ್ಯಾಲಿಯು ಸಾರ್ವಜನಿಕ ಆವೇಗವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಮತ್ತು ಸಹಿಗಳೊಂದಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲು ರಾಷ್ಟ್ರಪತಿಗಳೊಂದಿಗೆ ಅಪಾಯಿಂಟ್ಮೆಂಟ್ ಪಡೆಯಲು ಪಕ್ಷವು ಯೋಜಿಸಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರು ಮೊದಲಿಗೆ ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಜಮಾವಣೆಯಾಗಲಿದ್ದಾರೆ. ಬಳಿಕ ಬಸ್ನಲ್ಲಿ ರಾಮಲೀಲಾ ಮೈದಾನಕ್ಕೆ ತೆರಳಲಿದ್ದಾರೆ. ಮತಚೋರಿ ವಿರುದ್ಧ ಪಕ್ಷ ಈಗಾಗಲೇ ಕರ್ನಾಟಕದಿಂಂದಲೇ 1 ಕೋಟಿಗಿಂತ ಹೆಚ್ಚು ಸೇರಿ ದೇಶವ್ಯಾಪಿ 5.5 ಕೋಟಿ ಜನರ ಸಹಿ ಸಂಗ್ರಹಿಸಿದೆ.




