——–ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಉದ್ಘಾಟಿಸಿ ಶಾಸಕ ಬಾಬಾಸಾಹೇಬ್ ಪಾಟೀಲ್ ನುಡಿ
ಚನ್ನಮ್ಮನ ಕಿತ್ತೂರು : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಚನ್ನಮ್ಮನ ಕಿತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯನ್ನು ಆಚರಿಸಲಾಯಿತು.
ಕಿತ್ತೂರಿನ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪರಂಪರೆ ಮತ್ತು ಇತಿಹಾಸದ ಕುರಿತು ಮಕ್ಕಳಿಗೆ ಪ್ರಜ್ಞೆ ಮೂಡಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಅದರ ಜೊತೆಗೆ ಪರಿಸರ ಪ್ರಜ್ಞೆಯು ಕೊಡ ಅತ್ಯಂತ ಅಗತ್ಯವಾಗಿದೆ ಆ ನಿಟ್ಟಿನಲ್ಲಿ ಕೆಲಸ ಆರಂಭಿಸಬೇಕು ಅಷ್ಟೇ ಅಲ್ಲದೆ ಕಿತ್ತೂರು ರಾಣಿ ಚನ್ನಮ್ಮನ ಹೆಸರಿನಲ್ಲಿ ಅರಣ್ಯ ವಿಭಾಗವನ್ನು ಮರು ನಾಮಕರಣ ಮಾಡಬೇಕೆಂದು ಸಚಿವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಕೆ ಆರ್ ಸಿ ಎಂ ಸರಕಾರಿ ವಸ್ತು ಸಂಗ್ರಹಾಲಯವನ್ನು ಮುಂದಿನ ದಿನಗಳಲ್ಲಿ ನವೀಕರಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.
ಜೊತೆಗೆ ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ವಿವರಿಸಿದರು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಹಾಗೂ ಇತಿಹಾಸ ಪರಂಪರೆಗಳನ್ನು ಅರಿಯುವ ಅಗತ್ಯವಿರುವದು ಎಂದು ಹೇಳಿದರು.
ಪೂಜ್ಯ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಅವರು ಮಾತನಾಡಿ ಇಂತಹ ದಿನಾಚರಣೆಗಳಿಂದ ನಮ್ಮ ಪರಂಪರೆಯ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಅದೇ ರೀತಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಭಿನಂದಿಸುತ್ತಾ ನಿಮ್ಮಂತಹ ವಿದ್ಯಾರ್ಥಿಗಳ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತದೆ ಆದ್ದರಿಂದ ನೀವು ಈ ಸಾಧನೆಯನ್ನು ನಿರಂತರ ಸಾಧಿಸಬೇಕೆಂದು ಆಶೀರ್ವದಿಸಿದರು
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ ವೈ ತುಬಾಕಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳ ಉಪಯುಕ್ತವಾಗಿದೆ ಎಂದರು. ಶೈಕ್ಷಣಿಕವಾಗಿ ಕಿತ್ತೂರು ತಾಲೂಕಿನಲ್ಲಿ ಆಗಿರುವ ಗುಣಾತ್ಮಕ ಬದಲಾವಣೆ ಕುರಿತು ಹಮ್ಮಿಕೊಂಡ ಅನೇಕ ಸೃಜನಶೀಲತ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಈ ವರ್ಷ ಇಲಾಖೆಯಿಂದ ಐತಿಹಾಸಿಕ ಪ್ರಜ್ಞೆ ಬೆಳೆಸುವ ಕಾರ್ಯಕ್ರಮಗಳಿಗೆ ವಿಶೇಷ ಸಹಕಾರ ನೀಡಲಾಗುವುದೆಂದು ಹೇಳಿದರು.
ರಾಮಕೃಷ್ಣ ಇಳಕಲ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತು ಸಂಗ್ರಹಾಲಯಗಳ ಭವಿಷ್ಯ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು ಈ ಕುರಿತು ವಸ್ತು ಸಂಗ್ರಹಾಲಯಗಳನ್ನು ಅರಿಯುವಲ್ಲಿ ಸಮುದಾಯಗಳ ಪಾತ್ರದ ಬಗ್ಗೆ ತಿಳಿಸಿದರು. ವಸ್ತು ಸಂಗ್ರಹಾಲಯಗಳನ್ನು ಅಭಿವೃದ್ಧಿಪಡಿಸುವ ಕುರಿತು ತಿಳಿಸುವುದರ ಜೊತೆಗೆ ಅವುಗಳ ಮಹತ್ವವನ್ನು ಕೂಡ ವಿವರಿಸಿದರು.
ಡಾ ಎಸ್ ಬಿ ದಳವಾಯಿ ಅವರು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಭಿನಂದಿಸಿದರು.
ಪುರಾತತ್ವ ಸಂಗ್ರಹಾಲಯಗಳ ಪರಂಪರೆ ಇಲಾಖೆಯ ಸಹಾಯಕ ಕ್ಯೋರಟರ ರಾಘವೇಂದ್ರ ಅವರು ಎಲ್ಲರನ್ನೂ ಸ್ವಾಗತಿಸಿ ನಂತರ ಪ್ರಾಥಮಿಕವಾಗಿ ಮಾತನಾಡಿದರು.
ಮಂಜುನಾಥ ಕಳಸಣ್ಣವರ ನಿರೂಪಿಸಿದರು, ಶರಣಬಸವ ವಾಲಿಯವರು ವಂದಿಸಿದರು, ಕುಮಾರಿ ನವ್ಯಾ ಹೊಂಗಲ ಭಕ್ತಿ ಗೀತೆಯನ ಹಾಡಿದರು.
ಅಶ್ಫಾಕ್ ಹವಾಲ್ದಾರ್, ಸುನೀಲ ಘೀವಾರಿ, ಮುಖ್ಯ ಶಿಕ್ಷಕರಾದ ಮಹೇಶ ಚನ್ನಂಗಿ, ಶಿಕ್ಷಕರಾದ ಮಹೇಶ್ವರ ಹೊಂಗಲ, ನಾಗರಾಜ ಹೊಲಿಯಪ್ಪನವರಮಠ, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.




