Ad imageAd image
- Advertisement -  - Advertisement -  - Advertisement - 

ಕಮ್ಮಗೊಂಡನಹಳ್ಳಿಯಲ್ಲಿ ಅಶ್ವತ್ಥ್ ಕಟ್ಟೆ ಜೀರ್ಣೋದ್ಧಾರ,ಶ್ರೀವಲ್ಲಿ ದೇವಸೇನಾ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ಪ್ರತಿಷ್ಠಾಪನೆ

Bharath Vaibhav
ಕಮ್ಮಗೊಂಡನಹಳ್ಳಿಯಲ್ಲಿ ಅಶ್ವತ್ಥ್ ಕಟ್ಟೆ ಜೀರ್ಣೋದ್ಧಾರ,ಶ್ರೀವಲ್ಲಿ ದೇವಸೇನಾ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ಪ್ರತಿಷ್ಠಾಪನೆ
WhatsApp Group Join Now
Telegram Group Join Now

ಬೆಂಗಳೂರು:- ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ಕಮ್ಮಗೊಂಡನಹಳ್ಳಿಯಲ್ಲಿ ಪುರಾತನ ಕಾಲದ ಇತಿಹಾಸ ಉಳ್ಳುವ ಅಶ್ವತ್ಥ್ ಕಟ್ಟೆ ಜೀರ್ಣೋದ್ಧಾರ,ಶ್ರೀವಲ್ಲಿ ದೇವಸೇನಾ ಮತ್ತು ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ(ನಾಗದೇವರು) ಪ್ರತಿಷ್ಠಾಪನೆಯನ್ನು ಸರ್ಕಾರ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಕೆ.ಸಿ ವೆಂಕಟೇಶ್ (ದೇವೇಗೌಡರು) ತಮ್ಮ ತಂದೆ-ತಾಯಿ ದಿವಂಗತ ಕೀ.ಶೇ ಶ್ರೀಮತಿ ಚಿಕ್ಕಗಂಗಮ್ಮ ತಂದೆ ಶ್ರೀ ಚಿಕ್ಕ ವೆಂಕಟಪ್ಪ ಅವರ ‘ಜ್ಞಾಪಕಾರ್ಥವಾಗಿ’ ಶ್ರೀಮತಿ ಹೇಮಾವತಿ ಶ್ರೀ ಕೆ.ಸಿ ವೆಂಕಟೇಶ್ (ದೇವೇಗೌಡರು),

ಮತ್ತು ಮಕ್ಕಳು ಮೊಮ್ಮಕ್ಕಳು ಕುಟುಂಬ ಸದಸ್ಯರು ನೇತೃತ್ವದಲ್ಲಿ ಆಯೋಜಿಸಿದ್ದ ದೇವತಾ ಕಾರ್ಯ ಕ್ರಮವನ್ನು ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ ವರ್ಷ ಅಂದರೆ ೧೯೪೬ಕ್ಕೆ ಕ್ರೋಧಿನಾಮ ಸಂವತ್ಸರ ಶ್ರಾವಣ ಮಾಸದ ಪವಿತ್ರ ದಿನದಂದು ಗಣಪತಿ ಪ್ರಾರ್ಥನೆ,ಪುಣ್ಯಾಹ, ಪಂಚಗವ್ಯ, ಅಂಕುರಾರ್ಪಣೆ, ಧ್ವಜಾರೋಹಣ,ಯಾಗಶಾಲಾಪ್ರವೇಶ,ಋತ್ವಿಗ್ವರಂಣ,ಕಲಶ ಸ್ಥಾಪನೆ ಅಗ್ನಿ ಪ್ರತಿಷ್ಠೆ, ಗಣಹೋಮ,ಜಲ ಕ್ಷೀರ ಧಾನ್ಯ ಪುಷ್ಪ ಅನಾವಾಸ,ನವಗ್ರಹ,ನವನಾಗರ, ಸುಬ್ರಮಣ್ಯೇಶ್ವರ ಸ್ವಾಮಿ,ಶ್ರೀ ಅಶ್ವತ್ಥ ನಾರಾಯಣ ಹೋಮ ಹೀಗೆ ಅನೇಕ ಶಾಸ್ತ್ರೋಕ್ತವಾಗಿ ವೇ.ಬ್ರ.ಶ್ರೀ ಸುರೇಶ್ ಶಾಸ್ತ್ರಿಗಳು ಚೋಳನಾಯ್ಕನಹಳ್ಳಿ ಇವರ ಸಮ್ಮುಖದಲ್ಲಿ ಜರುಗಿದವು

ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಕೆ.ಸಿ ವೆಂಕಟೇಶ್ (ದೇವೇಗೌಡರ) ಶ್ರೀ ಅಶ್ವತ್ಥ ಕಟ್ಟೆ ಜೀರ್ಣೋದ್ಧಾರ,ಶ್ರೀವಲ್ಲಿ ದೇವಸೇನಾ ಮತ್ತು ಸುಬ್ರಮಣ್ಯೇಶ್ವರ ಸ್ವಾಮಿ ಪ್ರತಿಷ್ಠಾನೆ ಈ ಭವ್ಯಾ ಕಾರ್ಯಕ್ರಮಕ್ಕೆ ಆಗಮಿಸಿದ ರಾಜಕೀಯ ಮುಖಂಡರು ಮಹಿಳೆಯರು ಕಾರ್ಯಕರ್ತರು ಮತ್ತು ಕಮ್ಮಗೊಂಡನಹಳ್ಳಿ ಗ್ರಾಮದ ಪ್ರಮುಖರಿಗೂ ಸ್ವಾಗತ ಕೋರಿ ಅವರ ತಂದೆ -ತಾಯಿಯರ ಜ್ಞಾಪಕಾರ್ಥವಾಗಿ ಶ್ರೀ ಅಶ್ವತ್ಥ ಕಟ್ಟೆ ದೇವರಗಳ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.

ಇದೆ ವೇಳೆ ಮಾಜಿ ಶಾಸಕ ಆರ್ ಮಂಜುನಾಥ್ ಮಾತನಾಡಿದರು.
ಮಾಜಿ ನಗರ ಸಭಾ ಅಧ್ಯಕ್ಷ ಕೆ.ಸಿ ಅಶೋಕ್ ಮಾತನಾಡಿ ಅಶ್ವತ್ಥ ಮರವು ಸಾಕಷ್ಟು ರೋಗಗಳಿಗೆ ಔಷಧಿ ನೀಡುವ ಶಕ್ತಿಯನ್ನು ಪಡೆದುಕೊಂಡಿದೆ. ಹಾಗಾಗಿಯೇ ಹಿಂದಿನ ಕಾಲದಲ್ಲಿ ದೈವ ಸ್ವರೂಪದ ಮರಕ್ಕೆ ಪೂಜಿಸುತ್ತೇವೆ ಜೀವನದಲ್ಲಿ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಮರಕ್ಕೆ ನಿತ್ಯವೂ ಪೂಜೆ ಸಲ್ಲಿಸಿದರೆ ಆರೋಗ್ಯವಂತರಾಗತ್ತಾರೆ.

ನಮ್ಮ ಹಿರಿಯರಾದ ಕೆ.ಸಿ ವೆಂಕಟೇಶ್ (ದೇವೇಗೌಡರ) ತಂದೆ ಚಿಕ್ಕ ವೆಂಕಟಪ್ಪ ತಾಯಿ ಶ್ರೀಮತಿ ಚಿಕ್ಕಗಂಗಮ್ಮ ಇವರು ದೇವತಾ ಪ್ರೀಯಾರಾಗಿದರು ಅವರ ಭಕ್ತಿ, ಸಾರ್ವಜನಿಕರಿಗೆ ಮತ್ತು ಗ್ರಾಮಕ್ಕೆ ಅಪಾರ ಕೊಡಿಗೆ ಈ ಒಂದು ಭವ್ಯವಾದ ಅಶ್ವತ್ಥ್ ಕಟ್ಟೆ, ದೇವಸ್ಥಾನಗಳಿಗೆ ಜಮೀನು ನೀಡಿದ್ದು ನಮ್ಮ ಕಣ್ಮುಂದೆ ಇವೆ ವೆಂಕಟೇಶ್ ಮತ್ತು ಅವರ ಧರ್ಮಪತ್ನಿ ಮಕ್ಕಳು ಮೊಮ್ಮಕ್ಕಳು ಇಡಿ ಕುಟುಂಬವೆ ನಮ್ಮ ಕಮ್ಮಗೊಂಡನಹಳ್ಳಿ ಗ್ರಾಮಕ್ಕೆ ಅಪಾರ ದಾನಿಗಳು ಎಂದರೆ ತಪ್ಪಾಗಲಾರದು ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡ ಕೆ. ವಿಶ್ವನಾಥ್, ಹೆಗ್ಗನಹಳ್ಳಿ ಬಿಜೆಪಿ ಮಾಜಿ ಅಧ್ಯಕ್ಷ ಕಣ್ಣಪ್ಪ, ಕೆಂಪಹೊಬಳಯ್ಯ ಸೇರಿದಂತೆ ಕಮ್ಮಗೊಂಡನಹಳ್ಳಿ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ದೇವತಾ ಕಾರ್ಯದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಮತ್ತು ಪ್ರೀತಿಯ ಭೋಜನ ಸ್ವೀಕರಿಸಿದರು.

ವರದಿ:-ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!