ಧಾರವಾಡ: ಮುಸ್ಲಿಂ ಕಾನ್ಸ್ ಟೇಬಲ್ ಓರ್ವ ಎನ್ಡಬ್ಲ್ಯುಕೆಎಸ್ಆರ್ಟಿಸಿ ಭದ್ರತಾ ವಿಭಾಗದ ಧಾರವಾಡ ಬಸ್ ಡಿಪೋ ಆವರಣದಲ್ಲಿ ಹನುಮಾನ್ ಗುಡಿ ನಿರ್ಮಿಸಿ ಸೌಹಾರ್ದತೆ ಮೆರೆದಿರುವ ಘಟನೆ ನಡೆದಿದೆ.
ಸ್ವಂತ ಹಣ, ಸಹೋದ್ಯೋಗಿಗಳ ನೆರವಿನಿಂದ ಆಂಜನೇಯನ ಗುಡಿ ನಿರ್ಮಿಸಿದ್ದು, ಇತರ ಧರ್ಮಗಳ ಬಗ್ಗೆ ಗೌರವ ಮತ್ತು ಸಹೋದರತ್ವದ ಸಂದೇಶ ಸಾರಿದ್ದಾರೆ.
ಲಾಲ್ ಸಾಬ್ ರಸಲ್ಸಾಬ್ ಬೂದಿಹಾಳ (60) ತಮ್ಮ ಸಮುದಾಯದ ಮುಖಂಡರು ಮತ್ತು ನಿಗಮದ ಉನ್ನತ ಅಧಿಕಾರಿಗಳ ವಿರೋಧದ ಹೊರತಾಗಿಯೂ ಹನುಮಾನ ಗುಡಿ ನಿರ್ಮಾಣ ಕೈಗೆತ್ತಿಕೊಂಡಿದ್ದರು. ಕಳೆದ ವರ್ಷ ಗುಡಿ ನಿರ್ಮಾಣ ಪೂರ್ಣಗೊಂಡಿದ್ದು, ಈಗ ಬೆಳಕಿಗೆ ಬಂದಿದೆ.




