ಇಳಕಲ್: ನಗರದ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ಸಂವಿಧಾನ ಅಂಗೀಕಾರವಾದ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ ಯವರು ಪಾಲ್ಗೊಂಡು ಮಾತನಾಡಿದ ಅವರು ಭಾರತದ ಸಂವಿಧಾನ ಅಂಗೀಕಾರವಾದ ದಿನವನ್ನು ವಿವರವಾಗಿ ತಿಳಿಸಿದರು.
ಫರಜಾನ ಸೋಲಾಪೂರ,ಅಮರೇಶ ಬಿಜ್ಜಳ,ಮೆಹೆಬೂಬ ಗಂಜಿಕೋಟಿ,ರತ್ನಾ ಹಣಗಿ, ಮಲ್ಲಿಕಾರ್ಜುನ ಬಿಜಾಪೂರ, ಕೇಂದ್ರ ಶಾಲೆಯ ಶ್ರೀಧರ ಜೋಗಿನ ಹಾಗೂ ಮಾಹಿತಿ ಕೇಂದ್ರದ ಕೆ ಎಚ್ ಸೋಲಾಪೂರ ವಿದ್ಯಾರ್ಥಿ ಪ್ರತಿನಿಧಿ ರುಬೀನಾ ಬಾಗೆವಾಡಿ ಉಪಸ್ಥಿತರಿದ್ದರು.ಜಾಫರ್ ಕಂಪ್ಲಿ ನಾಥ್ ಹೇಳಿದರು ಮಹೇಶ್ವರಿ ತೋಟಿಗಂಟಿಮಠ ಪ್ರಾರ್ಥಿಸಿದರು.ಭಾರತದ ಸಂವಿಧಾನದ ಪೀಠಿಕೆ ಓದಿದರು.ನಂತರ ನೃತ್ಯ ಪ್ರದರ್ಶನ ನೀಡಿದರು.
ವರದಿ: ದಾವಲ್ ಶೇಡಂ