Ad imageAd image

ಪಾವಗಡ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ  ಸಂವಿಧಾನ ದಿನಾಚರಣೆ

Bharath Vaibhav
ಪಾವಗಡ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ  ಸಂವಿಧಾನ ದಿನಾಚರಣೆ
WhatsApp Group Join Now
Telegram Group Join Now

 

ತುಮಕೂರು : ಜಿಲ್ಲೆಯ ಪಾವಗಡ ತಾಲ್ಲೂಕು ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿ ಇವತ್ತು ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಭಾರತ ಸಂವಿಧಾನ ದಿನಾಚರಣೆ ಪಾವಗಡ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ   ತಾಲೂಕಿನಲ್ಲಿ ಬರುವ ಎಲ್ಲಾ ಇಲಾಖೆಯ ಅಧಿಕಾರಿಗಳು ಸೇರಿ ಭಾರತ ಸಂವಿಧಾನ ದಿನಾಚರಣೆಯನ್ನು ಆಚರಿಸಿದರು

ಇದೇ ಸಂದರ್ಭದಲ್ಲಿ ಮಧುಗಿರಿ ಉಪ ವಿಭಾಗ ಅಧಿಕಾರಿಗಳರಾದ ಗುಂಟೂರು ಶಿವಪ್ಪ ರವರ ಮಾತನಾಡಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನಕ್ಕೆ ಸಂವಿಧಾನ ಅಂಗೀಕರಿಸುವುದರಕ್ಕೆ 75 ವರ್ಷಗಳ ತುಂಬಿರತಕ್ಕಂತ ಸುದಿನ ನಾವೆಲ್ಲರೂ ಈ ದಿನ ಸಹೋದರವಾಗಿ ಇಷ್ಟು ಆನಂದವಾಗಿ ಕೂಡಿಸತಕ್ಕದ್ದು ಇವತ್ತು ನಮ್ಮೆಲ್ಲರ ಭಾಗ್ಯ ಇದಕ್ಕೆ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂದು ಹೇಳಿದರು ನಮ್ಮ ಮಕ್ಕಳನ್ನು ಶಾಲೆಗೆ ಕಲಿಸಿ  ಶಿಕ್ಷಣವನ್ನು ನೀಡಿದರೆ ಮಾತ್ರ ನಮ್ಮ ಮಕ್ಕಳು ಉನ್ನತ ಮಟ್ಟಕ್ಕೆ ಹೋಗುತ್ತಾರೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಬರ್ತಿರ್ತಕ್ಕಂತ ಸಂವಿಧಾನದಲ್ಲಿ ನಾವೆಲ್ಲರೂ ಮಾರ್ಗದರ್ಶನದಿಂದ ಹೋಗೋಣ ಎಂದು ನಮಗೆಲ್ಲರಿಗೂ ಭಗವದ್ಗೀತೆ ಯಾವುದಾದರೂ ಅಂದ್ರೆ ಸಂವಿಧಾನ ಎಂದು ಮಧುಗಿರಿ ಉಪ ವಿಭಾಗ ಅಧಿಕಾರಿ  ಗುಂಟುರ್ ಶಿವಪ್ಪ  ಸಂವಿಧಾನ ವಿಷಯಗಳ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದರು.

ಇದೇ ಸಧರ್ಭದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತಿ ಪಿಯು ಕಾಲೇಜ್ ಶಿಕ್ಷಕರಾದ ಬಸವಲಿಂಗಪ್ಪ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನ ಚರಿತ್ರೆ ಮತ್ತು ಅಂಬೇಡ್ಕರ್ ಅವರು ಸಂವಿಧಾನವನ್ನು  ರಚಿಸುವುದಕ್ಕೆ ಅನೇಕ ರೀತಿಯಲ್ಲಿ ಕಷ್ಟಪಟ್ಟಿರುವ ವಿಚಾರಗಳನ್ನು ಒಂದೊಂದು ವಿಷಯ ಅದ್ಭುತವಾಗಿ ಹೇಳಿದರು

ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್ಸಿಎಸ್‌ಟಿ ಅಟ್ರಾಸಿಟ್ ಸದಸ್ಯ ಹಾಗೂ ಡಿಜೆ ಎಸ್ ನಾರಾಯಣಪ್ಪ ಮಾತನಾಡಿ ನಾವು ಹಿಂದೆ ಯಾವ ಪರಿಸ್ಥಿತಿಯಲ್ಲಿ ಇದ್ದೇವೆ ಯಾವ ರೀತಿ ಕಷ್ಟನಷ್ಟಗಳು ಅನುಭವಿಸಿದ್ದತ್ತು ಇಂತಹ ಕಷ್ಟ ನಷ್ಟವನ್ನು ಇವತ್ತು ನಾವು ತಲೆ ಎತ್ತಿಕೊಂಡು ಓಡಾಡಬೇಕಂದರೆ ಇವತ್ತು ಬರೆದು ಕೊಟ್ಟಿರುವ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಅಡಿಯಲ್ಲಿ ಇದ್ದೇವೆ ಎಂದು ಹೇಳಿದ್ದರು ಶಿಕ್ಷಣ ಬಗ್ಗೆ ನಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಗಮನಹರಿಸಬೇಕೆಂದು ನಾರಾಯಣಪ್ಪ ಮಾತನಾಡಿದರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ತಂದುಕೊಡುವ ಸಂದರ್ಭದಲ್ಲಿ ಕಷ್ಟ ನಷ್ಟಗಳನ್ನು ಅನುಭೋಗಿಸಿರುವ ವಿಷಯಗಳನ್ನು ಕೂಡ ಮಾತನಾಡಿದರು

ಭಾರತ ಸಂವಿಧಾನ ದಿನಾಚರಣೆ ಆಚರಿಸುವುದಕ್ಕೆ ಸಂದರ್ಭದಲ್ಲಿ ಭಾಗವಹಿಸಿರತಕ್ಕಂಥವರು ಪಾವಗಡ ತಾಲ್ಲೂಕು ದಂಡಾಧಿಕಾರಿಗಳರಾದ ವರದರಾಜ್ ಮತ್ತು ಕಾರ್ಯ ನಿರ್ವಹಣಾಧಿಕಾರಿ ಜಾನಕಿ ರಾಮ್, ಸಮಾಜ ಕಲ್ಯಾಣ ಇಲಾಖೆಯ  ಅಧಿಕಾರಿಯಾದ ಮಲ್ಲಿಕಾರ್ಜುನ, ಶಿಕ್ಷಣಾಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಎಲ್ಲಾ ತಾಲೂಕು ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಯ ಮಾದಿಗ ದಂಡೋರ ಜಿಲ್ಲಾ ಉಪಾಧ್ಯಕ್ಷರಾದ  ವಲ್ಲೂರು ನಾಗೇಶ್, ಡಿಎಸ್ಎಸ್ ಜಿಲ್ಲಾ ಉಪಾಧ್ಯಕ್ಷರಾದ ಸಿ ಕೆ ತಿಪ್ಪೇಸ್ವಾಮಿ   ದಲಿತ ಮುಖಂಡರಾದ ಕೃಷ್ಣಮೂರ್ತಿ, ಡಿಜೆ ಎಸ್ ನಾರಾಯಣಪ್ಪ,  ವಾಲ್ಮೀಕಿ ಸಂಘದ ಪಾಳೆಗಾರ ಲೋಕೇಶ್,ತಾಲ್ಲೂಕು ಕಲಾತಂಡ ವೇದಿಕೆ ಸಿ ಕೆ ಪುರ ಹನುಮಂತರಾಯಪ್ಪ, ಟಿ ಎನ್  ಪೇಟೆ ರಮೇಶ್ ರಾಜವಂತಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು ರಾದ ರಾಜು ಫ್ರೆಂಡ್ಲಿ ಜೀವಿ ನಾಗರಾಜು, ಪಳವಳ್ಳಿ ನರಸಿಂಹಪ್ಪ, ತಾಲೂಕಿನಲ್ಲಿರುವ ದಲಿತ ಮುಖಂಡರಗಳು ಮತ್ತು ಡಿಎಸ್ಎಸ್ ಮುಖಂಡರುಗಳು ಇನ್ನು ಮುಂತಾದ ಜನ ಭಾಗವಹಿಸಿದರು.

 ವರದಿ: ಶಿವಾನಂದ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!