Ad imageAd image

ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್‌ ಜಯಂತಿ: ನಿಮಿತ್ಯ ಜನರಿಗೆ ತಂಪು ಪಾನೀಯ ನೀಡಿದ ಯುವಕರು

Bharath Vaibhav
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್‌ ಜಯಂತಿ: ನಿಮಿತ್ಯ ಜನರಿಗೆ ತಂಪು ಪಾನೀಯ ನೀಡಿದ ಯುವಕರು
WhatsApp Group Join Now
Telegram Group Join Now

ಸಾವಳಗಿ : ಇಂದು ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆಯನ್ನು ಸಾವಳಗಿ ಪಟ್ಟಣದಲ್ಲಿ ಬೆಳಿಗ್ಗೆ ಗ್ರಾಮದ ಎಲ್ಲ ಮುಖಂಡರು ಮತ್ತು ಯುವಕರು ಡಾ. ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಗೇ ಪುಷ್ಪಾರ್ಚನೆ ಮಾಡಿ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಆಚರಣೆ ಮಾಡಿದರು.

ಈ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗ ಗಿರೀಶ್ ಕಡಕೋಳ ಮಾತನಾಡಿ ವಿದ್ಯಾವಂತರಾಗಿ, ಸಂಘಟಿತರಾಗಿ ಮತ್ತು ಉತ್ತೇಜಿತರಾಗಿರಿ..! ಎಂಬ ತಮ್ಮ ಸಂದೇಶದಿಂದ ಆರಂಭವಾಗಿ, ಪ್ರಜೆಗಳು ತಾವು ಏನೆಲ್ಲ ಸ್ವತಂತ್ರವನ್ನು ಪಡೆದಿರಬೇಕು, ಹೇಗೆ ಗೌರವಿಸಬೇಕು, ಹೇಗೆ ಬಳಸಿಕೊಳ್ಳಬೇಕು, ಎಲ್ಲಿಯವರೆಗೆ ಬಳಸಿಕೊಳ್ಳಬೇಕು ಎಂಬುವವರೆಗಿನ ಬೃಹತ್‌ ಸಂವಿಧಾನವನ್ನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ, ದೇಶದ ಪ್ರತಿಯೊಬ್ಬರ ಪಾಲಿಗೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ನೀಡಿದ ಹಿಂದಿನ ದೊಡ್ಡ ಶಕ್ತಿ ಇವರು. ಎಂದು ಹೇಳಿದರು.

ರಾಯಲ್ ಫ್ರೆಂಡ್ಸ್ ಗ್ರೂಪ್ ನವರು ಬಹಳ ವಿಶೇಷವಾಗಿ ಜನ್ಮದಿನಾಚರಣೆಯನ್ನು ಆಚರಿಸಿದರು ವಿಶೇಷ ಏನೆಂದರೆ ಜನರಿಗೆ ತಂಪು ಪಾನೀಯ ನೀಡಿ ಸಾರ್ವಜನಿಕರಿಗೆ ಬಿಸಿಲಿನ ಬೇಗೆಯನ್ನು ತಪ್ಪಿಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಭರತೇಶ್ ಜಮಖಂಡಿ ಅವರು ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಭಾರತ ಜನತೆಯ ಒಂದು ರೀತಿ ಜೀವನಾಡಿ ಇದ್ದಂತೆ. ಅವರ ಬೃಹತ್‌ ಮತ್ತು ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಲಭ ಹಾಗೂ ಸುಗಮವಾಗಿರುವುದು ಎಂದು ಹೇಳಿದರು.

ರಾಯಲ್ ಫ್ರೆಂಡ್ಸ್ ಗ್ರೂಪ್ ನ ಅಧ್ಯಕ್ಷರಾದ ಮಹಾಂತೇಶ ಹೋನವಾಡ ಮಾತನಾಡಿ ಇದೇ ಮೊದಲ ಬಾರಿ ನಮ್ಮ ಎಲ್ಲ ಗೆಳೆಯರು ಸೇರಿ ಜನರಿಗೆ ಒಳ್ಳೆ ರೀತಿ ಯಿಂದ ಸಹಾಯ ಸಹಕಾರ ಮಾಡುವುದು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಒಳ್ಳೆಯ ಸಂದೇಶಗಳನ್ನು ಜನರಿಗೆ ಹೇಳುವುದು ನಮ್ಮ ಉದ್ದೇಶವಾಗಿದೆ ಭಾರತದ ಪ್ರತಿ ಪ್ರಜೆಯೂ ಸಹ ಅವರ ಕೊಡುಗೆಗಳನ್ನು ನೆನೆದು, ಅವರನ್ನು ಸ್ಮರಿಸಿ, ಗೌರವಿಸಬೇಕಾದ ದಿನ ಇದಾಗಿದೆ ಎಂದು ಹೇಳಿದ್ದರು ಇದೇ ಸಂದರ್ಭದಲ್ಲಿ ಕಿರಣ ಸೂರಗೊಂಡ. ಅಂಬರೀಶ್ ಮೇಲಿನ ಕೇರಿ ವಿಶ್ವನಾಥ್ ಸಾವಳಗಿ ಅನಿಲ್ ತಿಕೋಟಾ ಶಶಿ ಹೊನ್ನೂರ್ ಆದಿತ್ಯ ತಿಕೋಟಾ ಸಾಗರ್ ಕಾಂಬಳೆ ಅನಿಲ ಐಹೊಳೆ ಅಭಿ ಸರ್ ಇನ್ನು ಅನೇಕ ಯುವಕರು ಪಾಲ್ಗೊಂಡಿದ್ದರು.

ವರದಿ: ಅಜಯ್ ಕಾಂಬಳೆ

WhatsApp Group Join Now
Telegram Group Join Now
Share This Article
error: Content is protected !!