Ad imageAd image

ಮಾಸಾಸನ ಪಡೆಯುವ ಸದಸ್ಯರಿಗೆ ಯೋಜನಯಿಂದ ವಾತ್ಸಲ್ಯ ಮನೆ ನಿರ್ಮಾಣ

Bharath Vaibhav
ಮಾಸಾಸನ ಪಡೆಯುವ ಸದಸ್ಯರಿಗೆ ಯೋಜನಯಿಂದ ವಾತ್ಸಲ್ಯ ಮನೆ ನಿರ್ಮಾಣ
WhatsApp Group Join Now
Telegram Group Join Now

ಬೈಲಹೊಂಗಲ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ. ಟ್ರಸ್ಟ್ (ರಿ),ವತಿಯಿಂದ ಕೆಂಗಾನೂರು ವಲಯ ಜಾಲಿಕೊಪ್ಪ ಕಾರ್ಯಕ್ಷೇತ್ರದಲ್ಲಿ ಮಾಸಾಸನ ಸದಸ್ಯರಾದ ಶ್ರೀಮತಿ ಸಾವಕ್ಕ ಮಾದರ್ ಇವರಿಗೆ ಕ್ಷೇತ್ರದಿಂದ ಮಂಜೂರಾತಿಯಾದ “ವಾತ್ಸಲ್ಯ ಕಾಮಗಾರಿ ಉದ್ಘಾಟನೆ” ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶ್ರೀಯುತ ಯಲ್ಲಪ್ಪ ಹುಲಗನ್ನವರ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಯುತ ವಿಜಯ್ ಕುಮಾರ್ ಎಂ, ಶ್ರೀಮತಿ ದಾನಮ್ಮ ಛಬ್ಬಿ ಗ್ರಾಮ ಪಂಚಾಯತಿ ಸದಸ್ಯರು, ಅರ್ಚಕರಾದ ಚಂದ್ರಯ್ಯ ಹಿರೇಮಠ್,ತಾಲೂಕಿನ ಜ್ಞಾನವಿಕಾಸ ಸಮನ್ವಯಧಿಕಾರಿ ಶೈಲಾ ಜೆ, ವಲಯದ ಮೇಲ್ವಿಚಾರಕರು ಮಹಾಂತೇಶ್ ಇವರ ಸಮ್ಮುಖದಲ್ಲಿ ದೀಪಾ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಾಸ್ತಾವಿಕವಾಗಿ ತಾಲೂಕಿನ ಯೋಜನಾಧಿಕಾರಿಗಳಾದ ವಿಜಯ್ ಕುಮಾರ್ ಅವರು ಜ್ಞಾನವಿಕಾಸ ಕಾರ್ಯಕ್ರಮ ರೂಪುರೇಷೆ, ಕಾರ್ಯಕ್ರಮದಡಿಯಲ್ಲಿ ಸಿಗುವಂತ ಸೌಲಭ್ಯಗಳ ಬಗ್ಗೆ,ಬೆಳಗಾವಿ ಜಿಲ್ಲೆಯಲ್ಲಿ 353 ನಿರ್ಗತಿಕರ ಮಾಶಾಸನ ಪಡೆಯುವ ಸದಸ್ಯರಿಗೆ ಕಳೆದ ಎರಡು ವರ್ಷದಿಂದ ಸೂರಿಲ್ಲದ ಸದಸ್ಯರಿಗೆ ವಾತ್ಸಲ್ಯ ಕಾರ್ಯಕ್ರಮ ಅಡಿಯಲ್ಲಿ ವಾತ್ಸಲ್ಯ ಮನೆ ರಚನೆ ಹಾಗೂ ಮನೆ ರಿಪೇರಿ ಶೌಚಾಲಯ ರಚನೆ ಮಾಡಿ ಕೊಟ್ಟಿದೆ.ಈ ಮೂಲಕ ಮತ್ತು ಇತರೆ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳ ನೀಡುವ ಮೂಲಕ ಗ್ರಾಮದ ಕಟ್ಟಾ ಕಡೆಯ ವ್ಯಕ್ತಿಗೂ ಧರ್ಮಸ್ಥಳ ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ಉದ್ಘಾಟಕರಾಗಿ ಆಗಮಿಸಿದ ಶ್ರೀ ಯಲ್ಲಪ್ಪ ಹುಲಗನ್ನವರ್ ಅವರು ಮಾತನಾಡಿ ಯೋಜನೆ ಸಂಘಟನೆ ಮಾಡುವ ಮೂಲಕ ಧರ್ಮಸ್ಥಳ ಸಂಸ್ಥೆ ಅಪಾರವಾದ ಕೆಲಸವನ್ನು ವೀರೇಂದ್ರ ಹೆಗ್ಡೆಯವರು ಮಾತೃಶ್ರೀ ಹೇಮಾವತಿ ಅಮ್ಮನವರ ನೇತೃತ್ವದಲ್ಲಿ ಹಿಂದುಳಿದ ಬಡ ಹೆಣ್ಣು ಮಕ್ಕಳು ತಂದೆ ತಾಯಿ ನೋಡದ ಮಕ್ಕಳಿರದ ವಯಸ್ಸಾದ ವೃದ್ಧರಿಗೆ ನೀಡುವ ಸೌಲಭ್ಯಗಳನ್ನು ಕರ್ನಾಟಕದ ಆದ್ಯಂತ ನೀಡುತ್ತಿರುವುದು ಹೆಮ್ಮೆಯ ವಿಷಯ ಮತ್ತು ಸಂತೋಷದ ವಿಷಯ. ಇಂಥ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ ಎಂದು ಸಂತೋಷ ಎoದು ಶುಭ ಹಾರೈಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಜ್ಞಾನವಿಕಾಸ ಸಮನ್ವಯಾದಿಕಾರಿ ಶೈಲಾ ಜೆ, ಸ್ವಾಗತವನ್ನು ವಲಯದ ಮೇಲ್ವಿಚಾರಕರಾದ ಮಹಾಂತೇಶ್ ನೆರವೇರಿಸಿದರು. ಈ ಸಂದರ್ಭ ಸೇವಾಪ್ರತಿನಿಧಿ ಸಾವಕ್ಕ,VLE ಮಧು,ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ಸುಗೊಳಿಸಲಾಯಿತು.

ವರದಿ :ದುಂಡಪ್ಪ ಹೂಲಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!