ಜಮಖಂಡಿ: ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಕಂದಾಯ ಇಲಾಖೆಯ ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಾಣ ಮಾಡಿದ ಘಟನೆ ನಡೆದಿದೆ ಈ ರಸ್ತೆ ನಿರ್ಮಾಣ ಮಾಡಲು ಕೇಲವು ಅಧಿಕಾರಿಗಳ ಕುಮ್ಮಕ್ಕು ಇರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ರಸ್ತೆ ಖಾಸಗಿ ನಿವೇಶನಗಳಿಗೆ ಮಾಡಿದ್ದು ಹಲವು ಬಾರಿ ಸಂಭಂದಿಸಿದ ತಹಶಿಲ್ದಾರ,ಉಪವಿಭಾಗಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದರೂ ಕ್ರಮ ಕೈಗೂಳ್ಳದೆ ಸರ್ಕಾರಿ ಜಾಗೆಯನ್ನು ಒತ್ತುವರಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ? ಈ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಮುಖಂಡರು ಮತ್ತು ಕೇಲವು ಪುಡಾರಿಗಳ ಬೆಂಬಲದೊಂದಿಗೆ ಖಾಸಗಿ ನಿವೇಶನಗಳಿಗೆ ಅನಧಿಕೃತ ರಸ್ತೆ ಹಗಲು ಹೂತ್ತಿನಲ್ಲೆ ಮಾಡಿದ್ದು ಮಾತ್ರ ವಿಪರ್ಯಾಸ ಎಕೆಂದರೆ ಜಮಖಂಡಿ ತಹಶೀಲ್ದಾರ ಸದಾಶಿವ ಮಕ್ಕೂಜಿ ಅವರು ಸಾವಳಗಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿದಾಗ ವರದಿಗಾರರು ಈ ಅನಧಿಕೃತ ರಸ್ತೆ ಬಗ್ಗೆ ಏನಾಗಿದೆ ಅಂತ ಕೇಳಿದಾಗ ತನಿಖೆ ನಡೆದಿದೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ
ಅನಧಿಕೃತ ರಸ್ತೆ ನಿರ್ಮಾಣ ಮಾಡಲು ಸಾರ್ವಜನಿಕ ಮಹಿಳೆಯರ ಸುಲಭ ಶೌಚಾಲಯಗಳು ನೆಲ ಸಮ ಮಾಡಿ ರಸ್ತೆ ಮಾಡಿದ್ದರೆ ಎಂದು ಮಹಿಳೆಯರು ಮಾಧ್ಯಮದ ಮುಂದೆ ಹೇಳಿಕೊಂಡರು ಇದರ ಬಗ್ಗೆ ಹಲವು ಬಾರಿ ಸುದ್ದಿ ಮಾಡಿದರು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಇನ್ನಾದರೂ ಈ ಅಧಿಕಾರಿಗಳು ಸರಕಾರದ ಜಾಗವನ್ನು ಸರಕಾರಕ್ಕೆ ಉಳಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ
ಇದರ ಬಗ್ಗೆ ನಮ್ಮ ಬಿವಿ5ನ್ಯೂಸ ವರದಿಗಾರರು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಎಲ್ಲಾ ಅಧಿಕಾರಿಗಳು ತಮಗೆ ಸಂಭಂದವೆ ಇಲ್ಲ ಎನ್ನುವ ರೀತಿಯ ಉತ್ತರಗಳನ್ನು ನೀಡಿ ಜಾರಿಕೂಂಡಿದ್ದಾರೆ.
ಅನಧಿಕೃತ ರಸ್ತೆ ಮಾಡುತ್ತಿದ್ದಾರೆ ಎಂದು ಹಲವು ಬಾರಿ ದೂರು ನೀಡಿದರು ಅಧಿಕಾರಿಗಳು ಮೌನ ಯಾಕೆ ?
ಇವರು ಕಾನೂನಿಗಿಂತ ದೂಡ್ಡವರಾ ? ಅಥವಾ ಕಾನೂನಿನ ಚೌಕಟ್ಟು ಬಿಟ್ಟು ಎನು ಮಾಡಿದರು ನಡೆಯುತ್ತೆ ಎಂದು ಗುಂಡಾಗಿರಿ ಮಾಡುವ ಗೂಂಡಾಗಳಾ ?
ಈ ರಸ್ತೆ ಬಂದ ಮಾಡಿ ಕಂದಾಯ ಇಲಾಖೆಯ ಸುಪರ್ದಿಗೆ ತೆಗೆದುಕೂಳ್ಳಬೇಕು ಈಗಾಗಲೆ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ ಇದರ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನಕ್ಕೆ ತಮ್ಮ ಮಾಧ್ಯಮದ ಮೂಲಕ ವಿನಂತಿಸಿ ಈ ಅನಧಿಕೃತ ರಸ್ತೆ ಬಗ್ಗೆ ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ :ಅಜಯ ಕಾಂಬಳೆ




