ಮೊಳಕಾಲ್ಮುರು: ನೂರು ವರ್ಷಗಳ ಇತಿಹಾಸವಿರುವ ಸರ್ಕಾರಿ ಕ್ಷೇತ್ರ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆ ಅವಣದಲ್ಲಿ ಮೌಲಾನ ಅಜಾದ್ ಶಾಲೆ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಚಲನಚಿತ್ರ ನಿರ್ದೇಶಕರು ಮತ್ತು ಶಾಲೆಯ ಹಳೆ ವಿದ್ಯಾರ್ಥಿಯಾದ ಜಿ ಶ್ರೀನಿವಾಸ್ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿ ಹೊರದೇಶದಲ್ಲಿ ಕೂಡ ಇದ್ದಾರೆ, ಈ ಶಾಲೆಗೆ ಅದರದೇ ಆದ ಸಾವಿರಾರು ವಿದ್ಯಾರ್ಥಿಗಳು ಇದ್ದಾರೆ ಈ ಶಾಲೆಗೆ ಆಟದ ಮೈದಾನ ಇರುವುದು ಸ್ವಲ್ಪ ಮಾತ್ರ ಅದರಲ್ಲಿ ಈಗ ಅಜಾದ್ ಶಾಲಾ ಕಟ್ಟಡ ನಿರ್ಮಾಣ ಮಾಡಲು ಹೊರಟಿರುವುದು ಆಕ್ರೋಶಕ್ಕೆ ಗುರಿಯಾಗಬಹುದು ಪಟ್ಟಣದ ಸಾರ್ವಜನಿಕರು ಮತ್ತು ಹಳೆಯ ವಿದ್ಯಾರ್ಥಿಗಳು ಉಗ್ರ ಹೋರಾಟಕ್ಕೆ ಇಳಿಯಬಹುದು, ಇಲ್ಲಿ ಯಾವುದೇ ಕಾರಣಕ್ಕೂ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದರು. ಈ ಶಾಲಾ ಹಾವರಣದಲ್ಲಿ ಈ ಭಾಗದ ಮಕ್ಕಳ ಕ್ರೀಡ ಕಾರ್ಯಗಳಿಗೆ ಸೂಕ್ತವಾಗಿದೆ ಕೆಲ ಸ್ವಾರ್ಥಿಗಳು ತಮ್ಮ ಸ್ವಾರ್ಥಕ್ಕಾಗಿ ಶಾಸಕರಿಗೆ ತಪ್ಪು ಮಾಹಿತಿ ನೀಡಿ ಈ ಶಾಲಾ ಹಾವಿನದಲ್ಲಿ ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ, ಈ ಹಿಂದೆ ಸರ್ಕಾರಿ ಉರ್ದು ಮಾದರಿ ಶಾಲೆ ನಿರ್ಮಾಣಕ್ಕೆ ನೀಡಿದ ಜಾಗವನ್ನು ಅಂಜುಮನ್ ಕಾಂಪ್ಲೆಕ್ಸ್ ನಿರ್ಮಿಸಿ ಆ ಉರ್ದು ಶಾಲೆಯನ್ನು ಸರ್ಕಾರಿ ಕ್ಷೇತ್ರ ಮಾದರಿ ಬಾಲಕರ ಶಾಲೆಯಲ್ಲಿ ನೆಲೆಹರಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಬಿಎಂ ಈಶ್ವರಪ್ಪ ಮಾತನಾಡಿ ಈ ಜಾಗದಲ್ಲಿ ಬಿಇಓ ಮತ್ತು ಬಿ ಆರ್ ಸಿ ಹಾಗೂ ಕಸ್ತೂರಿ ಗಾಂಧಿ ವಸತಿ ಶಾಲೆ ನಿರ್ಮಿಸಿ ಹೆಚ್ಚು ಜಾಗವನ್ನು ಬೇರೆಯವರಿಗೆ ಕಬ್ಬಳಿಕೆಯಾಗಿದೆ, ಹಾಗಾಗಿ ಮೂಲ ಸರ್ಕಾರಿ ಕ್ಷೇತ್ರ ಮಾದರಿ ಬಾಲಕರ ಶಾಲೆಯು ಕಣ್ಮರೆ ಮತ್ತು ಹಾಳಾಗುವ ದುಷ್ಥಿತಿ ನಿರ್ಮಾಣವಾಗಿದೆ, ಈ ಶಾಲೆಯ ಉಳಿವಿಗಾಗಿ ಯಾವುದೇ ಕಾರಣಕ್ಕೂ ಈ ಆವರಣದಲ್ಲಿ ಹೊಸದಾಗಿ ಮೌಲಾನ ಅಜಾದ್ ಶಾಲಾ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಒಂದು ವೇಳೆ ನೀಡಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಅದೇ ರೀತಿ ಈ ಶಾಲೆಯ ಹಳೆ ವಿದ್ಯಾರ್ಥಿ ಶಿವು ಮಾತನಾಡಿ ನಮ್ಮಂತಹ ಬಡ ಕುಟುಂಬಗಳಿಗೆ ಆದರ್ಶವಾಗಿರುವ ಈ ಶಾಲಾ ಆವರಣದಲ್ಲಿ ಯಾವುದೇ ಕಾರಣಕ್ಕೂ ಬೇರೆ ಕಟ್ಟಡಕ್ಕೆ ಅವಕಾಶ ನೀಡುವುದಿಲ್ಲ, ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ಅದೇ ರೀತಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಉಪಾಧ್ಯಕ್ಷರುಗಳು ಪಟ್ಟಣದ ಮುಖಂಡರು ಹಳೆಯ ವಿದ್ಯಾರ್ಥಿಗಳು ಎಲ್ಲರೂ ಸೇರಿ ಮುಖ್ಯೋಪಾಧ್ಯಾಯರಿಗೆ ಮನವಿ ಪತ್ರ ನೀಡಿದರು
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಚ್ ತಿಪ್ಪೇಸ್ವಾಮಿ ರೈತ ಸಂಘದ ಅಧ್ಯಕ್ಷರಾದ ಮರಳಿ ರವಿ ಕುಮಾರ್, ಪಿಟಿಹಟ್ಟಿ ಚಂದ್ರಣ್ಣ ಸಾರ್ವಜನಿಕರಾದ ಡಿಶ್ ರಾಜು ತಿಪ್ಪೇಸ್ವಾಮಿ ಶಿವು ಚಂದ್ರಶೇಖರ್ ರಮೇಶ್ ದೇವರಾಜ್ ಓಬಣ್ಣ ಶಿವ ನಾಯಕ್, ಪ್ರದೀಪ್ ಸೂರ್ಯ ದುರ್ಗೇಶ್ ನೂರಾರು ಹಳೆಯ ವಿದ್ಯಾರ್ಥಿಗಳು ಇನ್ನೂ ಹಲವಾರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




