ಸಣ್ಣ ನೀರಾವರಿ ಇಲಾಖೆಯ ವತಿಯಿಂದ ರೂ.75 ಲಕ್ಷ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಇಂದು ಚಾಲನೆ ನೀಡಿದರು..
ಜಾಗತೀಕ ಹವಾಮಾನ ಪರಿಣಾಮ ಮಳೆಯಿಲ್ಲದೆ ಇಂದು ಅಂತರ್ಜಲ ಮಟ್ಟ ಕುಸಿಯುತ್ತಿದೆ..ಮಳೆಗಾಲದಲ್ಲಿ ಬಿದ್ದ ನೀರನ್ನು ಸೂಕ್ತ ಸ್ಥಳಗಳಲ್ಲಿ ತಡೆಹಿಡಿಯುವದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರಿಂದ ರೈತರ ಕೊಳವೆಬಾವಿಗಳಲ್ಲಿ ವರ್ಷವಿಡೀ ನೀರು ಇದ್ದು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ನಾನು ಶಾಸಕನಾದ ಮೇಲೆ ಇಂತಹ ಸಾವಿರಾರು ಚೆಕ್ ಡ್ಯಾಂ, ಬ್ರಿಡ್ಜ್ ಹಾಗೂ ಬ್ಯಾರೇಜ್ ಗಳನ್ನು ನಿರ್ಮಿಸಿದ್ದೇನೆ.

ಎತ್ರಿನಹೊಳೆಯಿಂದ ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಅರಣ್ಯ ಇಲಾಖೆಯಿಂದ ವಿಳಂಬವಾಗಿತ್ತು. ಆದರೆ ಈಗ ಸಮಸ್ಯೆ ಬಗೆ ಹರಿದಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಮುಗಿದು ನೀರು ಹರಿಯಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಕೆಲ್ಲೆಂಗೆರೆ ಗುರುಮೂರ್ತಿ, ಕುಮಾರ, ಚನ್ನಬಸಪ್ಪ, ಚಿದಾನಂದ, ಯತೀಶ ನಾರಾಯಣಘಟ್ಟಹಳ್ಳಿಯ ಚಂದ್ರು ವಸಂತ, ರವಿ, ನಾಗೇನಹಳ್ಳಿ ದಯಾನಂದ, ಎ.ಇ.ಇ ಸುಂದರರಾಜ್ , ಗುತ್ತಿಗೆದಾರ ಶ್ರೀನಿವಾಸು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ರಾಜು ಅರಸಿಕೆರೆ




