Ad imageAd image

ಕಾರ್ಮಿಕ ಇಲಾಖೆ ಹಳೆಯ ತಂತ್ರಾಂಶ ಮುಂದುವರಿಸಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಾಜೀನಾಮೆಗೆ ಕಟ್ಟಡ ಕಾರ್ಮಿಕರ ಒತ್ತಾಯ

Bharath Vaibhav
ಕಾರ್ಮಿಕ ಇಲಾಖೆ ಹಳೆಯ ತಂತ್ರಾಂಶ ಮುಂದುವರಿಸಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ರಾಜೀನಾಮೆಗೆ ಕಟ್ಟಡ ಕಾರ್ಮಿಕರ ಒತ್ತಾಯ
WhatsApp Group Join Now
Telegram Group Join Now

ಹಾವೇರಿ :-ಕಾರ್ಮಿಕ ಇಲಾಖೆಯಿಂದ ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಕಾರ್ಮಿಕ ಇಲಾಖೆ ಜಾರಿಗೊಳಿಸಿದ ಹೊಸು ತಂತ್ರಾಂಶದಲ್ಲಿ ಸಾಕಷ್ಟು ಲೋಪ ದೋಷಗಳಿದ್ದು ಹಳೆಯ ಸೇವಾಸಿಂದು ತಂತ್ರಾಂಶವನ್ನೇ ಮುಂದುವರಿಸಬೇಕೆಂದು ಸಂತ ಶಿಶುನಾಳ ಶರೀಫರಸ್ತೆ ಕಾಮಗಾರಿ ನಿರ್ಮಾಣ ಕಾರ್ಮಿಕರು ಮತ್ತು ಕಟ್ಟಡ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ ಎಂ ಕಾಲೇಭಾಗ ಒತ್ತಾಯಿಸಿದರು

ನಗರದ ಪ್ರತೀಕ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಐವರು ಶಾಸಕರಿದ್ದರೂ ಕಾರ್ಮಿಕರಿಗೆ ನ್ಯಾಯ ಒದಗಿಸಲು ಮುಂದಾಗುತ್ತಿಲ್ಲ.ಕಾರ್ಮಿಕ ಸಚಿವರಿಗೆ ಹಲವು ಬಾರಿ ಜಿಲ್ಲೆಯ ನೈಜ ಕಾರ್ಮಿಕರ ಕಾರ್ಡುಗಳನ್ನು ಮರು ಪರಿಶೀಲನೆಗೆ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಿಲ್ಲ
ಬದಲಾಗಿ ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿದ್ದರು

ಕಾರ್ಮಿಕರಿಗೆ ಗೊತ್ತಾಗಿಲ್ಲ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಇಲಾಖೆಗೆ ಬರುವ ಸೆ‌ಸ ಕಡಿಮೆಯಾಗಿದೆ ಎನ್ನುವ ನೆಪದಲ್ಲಿ ಸಚಿವರು ಅರ್ಹ ಕಾರ್ಮಿಕರ ಕಾರ್ಡ್ ರದ್ದು ಮಾಡಿದ್ದಾರೆ ಇದರಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ
ಹಾವೇರಿ ಜಿಲ್ಲೆಗೆ ಕಾರ್ಮಿಕ ಇಲಾಖೆ ಸಚಿವರ ಸಾಧನೆ ಶೂನ್ಯವಾಗಿದ್ದು ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು
ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಮಿಕರ ಹಿತ ರಕ್ಷಣೆ ಕುರಿತು ಕೆಲಸ ಮಾಡುತ್ತಿಲ್ಲ

ಅಧಿಕಾರಿಗಳೇ ಬೇಜವಾಬ್ದಾರಿತನ ಖಂಡಿಸಿ ಹಾಗೂ ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯಗಳ ಈಡೇರಿಕೆಗೆ ಆಗ್ರಹಿಸಿ ಜೂನ್ 13ರಂದು ಬೆಳಗ್ಗೆ 11ಕ್ಕೆ ಡಿಸಿ ಕಚೇರಿಯಲ್ಲಿನ ಕಾರ್ಮಿಕ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು.ಬಳಿಕ ಮನವಿ ಸಲ್ಲಿಸಲಾಗುವುದು ಆದ್ದರಿಂದ ಜಿಲ್ಲೆಯಲ್ಲಿರುವ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲಗೊಳ್ಳಬೇಕೆಂದು ಮನವಿ ಮಾಡಿದರು ಸುದ್ದಿಗೋಷ್ಠಿಯಲ್ಲಿ ಎಂಎಂ ಪಟವೆಗಾರ್, ಕೆ ಎಂ ಮಕಾಂದಾರ್ ಶಬೀರ್ ಕಡಕೋಳ ಇದ್ದರು

ವರದಿ:-ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!