Ad imageAd image

ಮುಂದುವರೆದ ಸರಣಿ ಹೃದಯಾಘಾತ : 21 ವರ್ಷದ ಯುವಕನ ಹೃದಯ ಸ್ತಬ್ಧ 

Bharath Vaibhav
ಮುಂದುವರೆದ ಸರಣಿ ಹೃದಯಾಘಾತ : 21 ವರ್ಷದ ಯುವಕನ ಹೃದಯ ಸ್ತಬ್ಧ 
WhatsApp Group Join Now
Telegram Group Join Now

ಹಾಸನ : ಹಾಸನದಲ್ಲಿ ಸರಣಿ ಹೃದಯಾಘಾತ ಪ್ರಕರಣಗಳು ಮುಂದುವರೆದಿದ್ದು ಗುರುವಾರ ರಾತ್ರಿ ಮದನ್‌ (21) ಯುವಕ ಬಲಿಯಾಗಿದ್ದಾನೆ.

ಹಾಸನದ ಚಿಟ್ನಹಳ್ಳಿ ಗ್ರಾಮದ ಈತ ತನ್ನ ತಾಯಿಯೊಡನೆ ಚನ್ನಪಟ್ಟಣದಲ್ಲಿ ವಾಸವಾಗಿದ್ದ. ಹಾಸನದ ಚಿಕ್ಕಕೊಂಡಗುಳದಲ್ಲಿರುವ ತನ್ನ ಭಾವನ ಮನೆಗೆ ಬಂದಿದ್ದಾಗ ಸಾವು ಸಂಭವಿಸಿದೆ.

ನಿನ್ನೆ ರಾತ್ರಿ ಇದ್ದಕ್ಕಿದ್ದಂತೆಯೇ ಮದನ್‌ ಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬದವರು ಆಸ್ಪತ್ರೆಗೆ ಕೊಂಡೊಯ್ದರಾದರೂ ಅಷ್ಟರಲ್ಲಿ ಮದನ್‌ ಮೃತಪಟ್ಟಿದ್ದಾನೆ.

ಈ ಪ್ರಕರಣದಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!