Ad imageAd image

ಹಾಸನದಲ್ಲಿ ಮುಂದುವರೆದ ಸರಣಿ ಹೃದಯಾಘಾತ : ಬಾಣಂತಿ ಸಾವು 

Bharath Vaibhav
ಹಾಸನದಲ್ಲಿ ಮುಂದುವರೆದ ಸರಣಿ ಹೃದಯಾಘಾತ : ಬಾಣಂತಿ ಸಾವು 
WhatsApp Group Join Now
Telegram Group Join Now

ಹಾಸನದಲ್ಲಿ : ಹಾಸನದಲ್ಲಿ ಸರಣಿ ಹೃದಯಾಘಾತ ಮುಂದುವರೆದಿದ್ದು, ಶಿವಮೊಗ್ಗದ ಆಯನೂರಿನಲ್ಲಿ ಒಂದೂವರೆ ತಿಂಗಳ ಬಾಣಂತಿ ಬಲಿಯಾಗಿದ್ದಾರೆ.

ಬಾಣಂತನಕ್ಕೆಂದು ಹಾಸನದಿಂದ ಶಿವಮೊಗ್ಗದ ಆಯನೂರಿಗೆ ಹರ್ಷಿತಾ(22) ಎಂಬ ಮಹಿಳೆ ಹೋಗಿದ್ದರು.

ಆದರೆ ತವರು ಮನೆಯಲ್ಲೇ ಹರ್ಷಿತಾಗೆ ಹೃದಯಾಘಾತ ಸಂಭವಿಸಿದೆ.ಹಾಸನದ ಕೊಮ್ಮೆನಹಳ್ಳಿಯ ಹರ್ಷಿತಾ ಶಿವಮೊಗ್ಗದ ಆಯನೂರು ಗ್ರಾಮದಲ್ಲಿ ಮೃತಪಟ್ಟಿದ್ದಾರೆ.

ಮೊನ್ನೆ ರಾತ್ರಿ ಹರ್ಷಿತಾಗೆ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೇ ಹಾಸನದ ಕೊಮ್ಮೇನಹಳ್ಳಿಯಲ್ಲಿರುವ ತಮ್ಮ ಪತಿಗೆ ಕರೆ ಮಾಡಿ ಬರಲು ಹೇಳಿದ್ದಾರೆ.

ಆದರೆ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್ ನಲ್ಲೇ ಅವರು ಮೃತಪಟ್ಟಿದ್ದಾರೆ. ಹಾಸನದಲ್ಲಿ ಸರಣಿ ಹೃದಯಾಘಾತ ಸಂಭವಿಸುತ್ತಿದ್ದು, ಆತಂಕ ಮನೆ ಮಾಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!