Ad imageAd image

ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪ ಸಂಖ್ಯಾತರನ್ನು ಮುಗಿಸುತ್ತಾರೆ :  ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ

Bharath Vaibhav
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪ ಸಂಖ್ಯಾತರನ್ನು ಮುಗಿಸುತ್ತಾರೆ :  ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ
Zameer Ahmed Khan
WhatsApp Group Join Now
Telegram Group Join Now

ಬಾಗಲಕೋಟೆ: ಈಗ ನಡೆಯುತ್ತಿರುವಂತ ಲೋಕಸಭಾ ಚುನಾವಣೆ ದೇಶ ಬಚಾವ್ ಎಲೆಕ್ಷನ್ ಆಗಿದೆ. ಈಗಾಗಲೇ ಎರಡು ಬಾರಿ ಬಿಜೆಪಿ ಆಡಳಿತ ಮಾಡಿದೆ.

ಮೂರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅವರು ಅಲ್ಪ ಸಂಖ್ಯಾತರನ್ನು ಮುಗಿಸುತ್ತಾರೆ ಎಂಬುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಬಿಜೆಪಿ ಒಳಗೆ ಒಂದು ರೋಗವಿದೆ.

ಅದೇ ಬಿಜೆಪಿ ಅಂದ್ರೆ ಕ್ಯಾನ್ಸರ್ ಇದ್ದಂತೆ. ಫಸ್ಟ್ ಟೈಮ್ ಕ್ಯಾನ್ಸರ್ ಎಂಬುದು ಗೊತ್ತಾದ್ರೆ ಉಳಿಯುತ್ತಾರೆ. ಸೆಕೆಂಡ್ ಸ್ಟೇಚ್ ಇದ್ದಾಗಲೂ ಉಳಿಸಬಹುದು. ಆದ್ರೇ ಮೂರನೇ ಬಾರಿ ಬಂದ್ರೆ ನಿಮ್ಮನ್ನೇ ತಗೊಂಡು ಹೋಗುತ್ತೆ ಎಂದರು.

ಬಾಗಲಕೋಟೆ ಕಾಂಗ್ರೆಸ್ ಭ್ಯರ್ಥಿ ಸಂಯುಕ್ತಾ ಶಿವಾನಂದ ಪಾಟೀಲ್ ನನ್ನ ಪುತ್ರಿ ಇದದಂತೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿ. ಈ ಬಾರಿ ದೇಶವನ್ನು ಬಿಜೆಪಿಯಿಂದ ಬಚಾವ್ ಮಾಡೋದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಕರೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!