Ad imageAd image

ಕೋಬಿಂಗ್ ಕಾರ್ಯಾಚರಣೆ: ಹುಲಿ ಸೆರೆ ಹಿಡಿಯಲು ಪೊಲೀಸರು ಯಶಸ್ವಿ

Bharath Vaibhav
ಕೋಬಿಂಗ್ ಕಾರ್ಯಾಚರಣೆ: ಹುಲಿ ಸೆರೆ ಹಿಡಿಯಲು ಪೊಲೀಸರು ಯಶಸ್ವಿ
WhatsApp Group Join Now
Telegram Group Join Now

——————————————-ಜಮೀನಿನಲ್ಲಿ ಹುಲಿ ನೋಡಿ ಬೆಚ್ಚಿದ ರೈತ

ಮೈಸೂರು: ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಜಮೀನೊಂದರಲ್ಲಿ ದಿನವಿಡೀ ಕಾಡು ಹಂದಿಯನ್ನೇ ಆಹಾರವಾಗಿ ತಿಂದು ರೈತರ ನಿದ್ದೆಗೆದಿಸಿದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದಾರೆ.

ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ದೃವನಾರಾಯಣ್ ಸ್ಥಳದಲ್ಲಿ ಹಾಜರಿದ್ಫು ಹುಲಿ ಹಿಡಿಯಲು ಅದೇಶಿಸಿತ್ತಾರೆ.ಕೇವಲ 4 ಗಂಟೆ ತಾಸಿನಲ್ಲಿ ಹುಲಿ ಕೊಂಬಿಂಗ್ ಕಾರ್ಯಾಚರಣೆ ಮಾಡಿದ ಅಧಿಕಾರಿಗಳು ಹಾಗೂ ದಸರಾ ಆನೆಗಳಿಗೆ ಸಾರ್ವಜನಿಕರು ಹ್ಯಾಟ್ಸ್ ಆಫ್ ಹೇಳಿದ್ದಾರೆ..

ಇತ್ತೀಚೆಗೆ ಮುಳ್ಳೂರಿನ ರಾಜಶೇಖರ್ ನರಭಕ್ಷಕ ಹುಲಿ ಭಲಿ ಪಡೆದ ಬೆನ್ನಲ್ಲೇ ತಾಲೂಕಿನ ಹೆಡಿಯಾಲ ಸಮೀಪವಿರುವ ಈರೇಗೌಡನ ಹುಂಡಿ ಗ್ರಾಮದ ರೈತನೊಬ್ಬ ಜಮೀನಿಗೆ ಹೋಗುವ ಸಂದರ್ಭದಲ್ಲಿ ಹುಲಿ ತನ್ನ ಎರಡು ಮರೀಯೊಂದಿಗೆ ಕಾಣಿಸಿಕೊಂಡು ಬೆಚ್ಚಿ ಬೆದರಿ ಗ್ರಾಮದತ್ತ ಓಡಿದ್ದಾನೆ..
ವಿಷಯ ತಿಳಿದ ಸುತ್ತ ಮುತ್ತ ಜಮೀನಿನಲ್ಲಿರುವ ಸಾರ್ವಜನಿಕರು ತಮ್ಮ ತಮ್ಮ ಮನೆಗೆ ದೌಡಾಯಿಸಿದ್ದಾರೆ.. ವಿಷಯ ತಿಳಿದು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕೊಂಬಿಂಗ್ ಕಾರ್ಯಾಚರಣೆಯಲ್ಲಿ ಮೂರು ಆನೆಗಳು ಹಾಗೂ ಡ್ರೋನ್ ಕ್ಯಾಮೆರಾ ಬಳಸಿ ಹುಲಿ ಹಿಡಿಯಲು ಹರಾಸಾಹಸ ಪಟ್ಟು ರಾತ್ರಿ 08 ಗಂಟೆ ಸಮಯದಲ್ಲಿ ಅಂಜನಾಪುರ ಗ್ರಾಮದ ಮನೆಯ ಪಕ್ಕದಲ್ಲಿ ಅವಿತಿರುವಾಗ ಅರವಳಿಕೆ ಮದ್ದನ್ನು ಶೂಟ್ ಮಾಡಿ ಸೆರೆ ಹಿಡಿದಿದ್ದಾರೆ..
ಬಡಗಲಪುರ ಗ್ರಾಮದ ರೈತ ಮಹಾದೇವನ ಮೇಲೆ ಹುಲಿ ದಾಳಿ ಮಾಡಿ ಎರಡು ಕಣ್ಣುಗಳನ್ನು ಕಳೆದುಕೊಡಿದ್ದಾನೆ ಇದನ್ನೆಲ್ಲ ನೋಡಿದರೆ ಸಾಕಷ್ಟು ಪ್ರಾಣಿಗಳು ಜಮೀನಿನತ್ತ ದಾವಿಸಿ ರೈತರ ನಿದ್ದೆಗೆಡಿಸಿ ಭಯದ ವಾತಾವರಣ ಸೃಷ್ಟಿಸಿವೆ..
ಬಂಡೀಪುರ ಅರಣ್ಯ ಅಧಿಕಾರಿ ಪ್ರಭಾಕರ್,ಆರ್ ಎಫ್ ಓ ಮುನಿರಾಜು ಹಾಗೂ ಸಿಬ್ಬಂದಿವರ್ಗ ಹುಲ್ಲಹಳ್ಳಿ ಪಿಎಸ್ಐ ಚೇತನ್ ಕುಮಾರ್ ಹರ ಸಾಹಸ ಪಟ್ಟು ಯಶಸ್ವಿಯಾಗಿದ್ದಾರೆ.

ವರದಿ: ಆನಂದ್ ಕುಮಾರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!