Ad imageAd image

ವ್ಯರ್ಥವಾಗಿ ಕೊಳೆಯುತ್ತಿರುವ ಕೊರೋನಾ ಸುರಕ್ಷಾ ಕವಚ ಕಿಟ್‌ಗಳು

Bharath Vaibhav
ವ್ಯರ್ಥವಾಗಿ ಕೊಳೆಯುತ್ತಿರುವ ಕೊರೋನಾ ಸುರಕ್ಷಾ ಕವಚ ಕಿಟ್‌ಗಳು
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಮೇಲ್ಭಾಗದಲ್ಲಿರುವ ಹಳೇ ಕಟ್ಟಡವೊಂದರಲ್ಲಿ ನೂರಾರು ಕೋವಿಡ್-19 ಕಿಟ್‌ಗಳು ವ್ಯರ್ಥವಾಗಿ ಬಿದ್ದಿದ್ದು ಸಾಯಂಕಾಲ ವೇಳೆ ಅವುಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು.

ಕೋವಿಡ್-19 ಸುರಕ್ಷತಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದ ಗ್ರಾಮ ಸಹಾಯಕರಿಗೆ, ಅಂಬುಲೆನ್ಸ್ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ವಿತರಣೆಯಾಗಬೇಕಿದ್ದ ಸಾವಿರಾರು ಮಾಸ್ಕ್, ನೂರಾರು ಸ್ಯಾನಿಟೈಜರ್, ಪಿಪಿಇ, ರ‍್ಯಾಪಿಡ್ ಕಿಟ್ ಇನ್ನಿತರ ಮಾತ್ರೆಗಳು ವ್ಯರ್ಥವಾಗಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಇಡಿದ ಕೈಗನ್ನಡಿಯಾಗಿದೆ.

ಸುರಕ್ಷಾ ಕಿಟ್‌ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡದೇ ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಮಾರಾಟ ಮಾಡುತ್ತಿರುವ ಹುನ್ನಾರದಿಂದ ಮುಚ್ಚಿಡಲಾಗಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲವೆಂಬಂತೆ ಸರ್ಕಾರದಿಂದ ಬಂದರೂ ಸಂಬಂದಿಸಿದ ಸಿಬ್ಬಂದಿಗಳಿಗೆ ತಲುಪದೇ ವ್ಯರ್ಥವಾಗಿರುವುದು.

ಕೆಲವು ಔಷದಿಗಳಿದ್ದರೂ ಹೊರಗಡೆ ಮೆಡಿಕಲ್ ಶಾಪ್‌ಗಳಿಗೆ ಔಷದಿ ಬರೆಯುತ್ತಿದ್ದ ವೈದ್ಯರ ನಡೆ ಹಾಗೂ ಅದಕ್ಕೆ ಸಹಕರಿಸುತ್ತಿದ್ದ ಅಂದಿನ ವೈದ್ಯಾಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಯವರ ವೈಫಲ್ಯಕ್ಕೆ ಸಾಕ್ಷಿಯೆಂದೇ ಹೇಳಬಹುದಾಗಿದೆ.

ಈ ಬಗ್ಗೆ ಆರೋಗ್ಯ ಇಲಾಖೆಯ ತಾಲೂಕು ನೋಡಲ್ ಅಧಿಕಾರಿ ಡಾ.ವೀರೇಂದ್ರ ಅವರನ್ನು ವಿಚಾರಿಸಿದಾಗ ನನಗೆ ಮಾಹಿತಿಯಿಲ್ಲ. ಅವಧಿ ಮುಗಿದ ಔಷದಿಗಳಿರಬಹುದು. ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಲಾಗುವುದೆಂದು ಉಢಾಫೆ ಉತ್ತರ ನೀಡಿದರು.

ಇನ್ನು ಮುಂದಾದರೂ ಸಂಬಂದಿಸಿದ ಹಿರಿಯ ಅಧಿಕಾರಿಗಳು ಗಮನವಹಿಸಿ ಸಾರ್ವಜನಿಕರ ಹಣದ ದುರುಪಯೋಗಕ್ಕೆ ಕಾರಣವಾದ ಇನ್ನಿತರ ಅಧಿಕಾರಿಗಳ ಮೇಲೂ ತನಿಖೆ ನಡೆಸಿ ಸೂಕ್ತ ಕ್ರಮವಹಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವರದಿ. ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!