ಮಾನ್ವಿ : ಮಾನ್ವಿ ತಾಲೂಕಿನ ಕಪಗಲ್ ಪಂಚಾಯತಿಯಲ್ಲಿ PDO ದೇವೇಂದ್ರಪ್ಪ ವಿರುದ್ಧ ಭ್ರಷ್ಟಾಚಾರ ಅಧಿಕಾರ ದುರ್ಬಳಕೆ ಸರ್ಕಾರದ ಹಣ ಸದ್ಬಳಕೆ ಮಾಡುವಲ್ಲಿ ವಿಫಲ ಮಾನ್ವಿ ತಾಲೂಕಿನ ಕಪಗಲ್ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ಸರ್ಕಾರದ ಹಣ ದುರ್ಬಳಕೆ ವ್ಯಾಪಕ ಭ್ರಷ್ಟಾಚಾರ ಈ ಬಗ್ಗೆ ಈಗಾಗಲೇ ಸಂಘಟಿಕರು ಬುದ್ಧಿಜೀವಿಗಳು ಗ್ರಾಮ ಹಿತಚಿಂತಕರು ದೂರುಗಳನ್ನು ಸಲ್ಲಿಸಿದ್ದರು ಸಹ ಯಾವುದೇ ಪ್ರಯೋಜನ ಇರುವುದಿಲ್ಲ.
ಸರ್ಕಾರವು ಹಳ್ಳಿಗಳ ಏಳಿಗೆಗೆ ಮತ್ತು ರೈತರ ಜೀವನವನ್ನು ಹಸನು ಮಾಡಲು ಅನೇಕ ಯೋಜನೆಗಳನ್ನು ರೂಪಿಸಿರುತ್ತವೆ ಆದರೆ ಇಂಥ ಭ್ರಷ್ಟ ಪಿಡಿಒಗಳ ಕಾರ್ಯನಿರ್ವಹಣೆಯಿಂದ ಯಾವುದೇ ಸದುಪಯೋಗವು ರೈತರಿಗೆ ಮತ್ತು ಹಳ್ಳಿಗಳಿಗೆ ತಲುಪಿರುವುದಿಲ್ಲ ಈ ಬಗ್ಗೆ ತಾಲೂಕು ಪಂಚಾಯತಿ EO ಅವರಿಗೂ ಕೂಡ ಲಿಖಿತ ದೂರನ್ನು ಕೊಟ್ಟರು ಸಹ ಯಾವುದೇ ಪ್ರಯೋಜನ ಆಗಿಲ್ಲವೆಂದು ಗ್ರಾಮಸ್ಥರು ದೂರಿದರು 15ನೇ ಹಣಕಾಸು ಯೋಜನೆಯಲ್ಲಿ ಹಳೆಯ ಕಾಮಗಾರಿಗಳನ್ನು ತೋರಿಸಿ ಹಣವನ್ನು ಲೂಟಿ ಮಾಡಿರುತ್ತಾರೆ ಮತ್ತು ಯಾವುದೇ ಗ್ರಾಮ ಸಭೆಯನ್ನು ಕರೆಯದೆ ಏಕಪಕ್ಷಿಯವಾಗಿ ನಿರ್ಧಾರವನ್ನು ಕೈಗೊಂಡು ಪಂಚಾಯಿತಿಯ ಹಣವನ್ನು ಪೋಲು ಮಾಡಿರುತ್ತಾರೆ
ಸರ್ಕಾರದ 15ನೇ ಹಣಕಾಸು ಯೋಜನೆಯಲ್ಲಿ ಯಾವ ಯೋಜನೆಗಳನ್ನು ಮತ್ತು ಕಾರ್ಯಗಳನ್ನು ಮಾಡಿರುತ್ತೀರಿ ಎಂದು ಕೇಳಿದಾಗ PDO ದೇವೇಂದ್ರಪ್ಪ ಅವರು ಪತ್ರಕರ್ತರ ಮೇಲೆ ನೀವೇನು ಮೇಲಾಧಿಕಾರಿಗಳ ಅಥವಾ ಲೆಕ್ಕ ಪರಿಶೋಧಕರ ಎಂದು ಅಧಿಕಾರದ ದರ್ಪ ತೋರಿ ಇರುತ್ತಾರೆ ಈ ಹಿಂದೆ ಈ ದೇವೇಂದ್ರಪ್ಪ ಎನ್ನುವ ಪಿಡಿಒ ಒಂದು ಬಾರಿ ಸಸ್ಪೆಂಡ್ ಹಾಗಿದ್ದರೂ ಸಹ ಸರ್ಕಾರದ ಹಣವನ್ನು ಲೂಟಿ ಮಾಡುವುದು ಬಿಟ್ಟಿಲ್ಲ ನನ್ನ ಹಿಂದೆ ಅನೇಕ ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎಂದು ಹೇಳುತ್ತಾರೆ
ವಿಶೇಷವಾಗಿ 15ನೇ ಹಣಕಾಸು ಯೋಜನೆಯಲ್ಲಿ ಬಂದಿರ್ತಕ್ಕಂತ ಸರ್ಕಾರದ ಹಣವನ್ನು ಗ್ರಾಮ ಪಂಚಾಯತಿಯ ಅಧಿಕಾರಿಗಳ ಜೊತೆ ಸೇರಿ ಅನೇಕರು ಲೂಟಿ ಮಾಡಿರುತ್ತಾರೆ ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಗ್ರಾಮಸ್ಥರ ಬುದ್ಧಿಜೀವಿಗಳು ಸಂಘಟಿಕರ ಒತ್ತಾಯವಾಗಿರುತ್ತದೆ ಪಂಚಾಯತಿ ಹಣವನ್ನು ಯಾವುದೇ ಲೆಕ್ಕಪತ್ರವಿಲ್ಲದೆ ಲೂಟಿ ಮಾಡಲು ತಕ್ಕ ಅಧಿಕಾರಿ ದೇವೇಂದ್ರಪ್ಪ ಆಗಿರುತ್ತಾರೆ
ವರದಿ : ಶಿವತೇಜ