Ad imageAd image

ಸಂಭ್ರಮದ ‘ಹೋಳಿ’ ಹಬ್ಬ ಆಚರಣೆಗೆ ಕ್ಷಣಗಣನೆ

Bharath Vaibhav
ಸಂಭ್ರಮದ ‘ಹೋಳಿ’ ಹಬ್ಬ ಆಚರಣೆಗೆ ಕ್ಷಣಗಣನೆ
WhatsApp Group Join Now
Telegram Group Join Now

ಬೆಳಗಾವಿ: ಭರತ ಭೂಮಿ ಭಾರತವು ವಿವಿಧ ಪರಂಪರೆ, ಸಂಸ್ಕೃತಿ, ಕಲಾ ಸಾಹಿತ್ಯವನ್ನು ಬಿಂಬಿಸುವ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ರಾಷ್ಟ್ರ. ಇಲ್ಲಿ ವರ್ಷದಾದ್ಯಂತ ಒಂದಿಲ್ಲೊಂದು ಹಬ್ಬವನ್ನು ಆಚರಿಸುತ್ತ ಬಂದಿರುವ ಬಹುದೊಡ್ಡ ರಾಷ್ಟ್ರ. ಪ್ರಮುಖ ಹಬ್ಬಗಳಲ್ಲಿ ಹೋಳಿ ಹಬ್ಬವು ಒಂದು. ಈಡೀ ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸುವ ಹೋಳಿ ಹಬ್ಬವನ್ನು ಮಾರ್ಚ್ 14 ರಂದು ಎಲ್ಲೆಡೆಯಂತೆ ನಗರದಲ್ಲೂ ವಿಶಿಷ್ಠ ರೀತಿಯಲ್ಲಿ ಆಚರಿಸಲು ನಗರದ ಜನತೆ ಸಜ್ಜಾಗಿದ್ದಾರೆ.

ಪ್ರಮುಖವಾಗಿ ಹೋಳಿ ಹಬ್ಬವೆಂದರೆ ಜನರು ಪರಸ್ಪರ ವಿವಿಧ ಬಣ್ಣಗಳನ್ನು ಎರಚಿ ಸಂಭ್ರಮಿಸುವ ಹಬ್ಬವೆಂದು ಮೇಲ್ನೊಟಕ್ಕೆ ಕಂಡು ಬರುವುದು. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಐತಿಹಾಸಿಕ ಹಿನ್ನೆಲೆಗಳಲ್ಲಿ ಆಚರಿಸುತ್ತಾರೆ. ಕರ್ನಾಟಕದಲ್ಲಿ ಕಾಮನ ಮೆರವಣಿಗೆ, ಕಾಮ ದಹನ, ಬಣ್ಣ ಆಡುವುದು. ಪ್ರತಿ ಮನೆ, ಮನೆಗಳಲ್ಲಿ ವಿವಿಧ ಸಿಹಿ ತಿಂಡಿಗಳನ್ನು ಮಾಡುವುದು ಹೀಗೆ ಸಂಭ್ರಮದಿಂದ ಆಚರಿಸುತ್ತಾರೆ. ಸಿಹಿ ತಿಂಡಿ ಎಂದರೆ ಪ್ರಮುಖವಾಗಿ ಹೋಳಿ ಹಬ್ಬದ ದಿನದಂದು ಪ್ರತಿ ಮನೆ ಮನೆಯಲ್ಲಿ ಹೋಳಿಗೆಗಳನ್ನು ತಯಾರಿಸಿ ಭೋಜನದ ಪ್ರಮುಖವಾಗಿ ಖಾದ್ಯವಾಗಿ ಬಳಸುತ್ತಾರೆ.

ಬಣ್ಣದಾಟಕ್ಕೆ ಹೆಣ್ಣು- ಗಂಡೆಂಬ ಬೇಧವಿಲ್ಲ: ಹೋಳಿ ಹಬ್ಬವನ್ನು ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಬಣ್ಣ ಆಡುವ ಮೂಲಕ ಆಚರಿಸುತ್ತಾರೆ. ಅನಾದಿ ಕಾಲದಿಂದಲೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಬಣ್ಣವನ್ನು ಹೆಣ್ಣು- ಗಂಡು ಬೇಧವಿಲ್ಲದೇ ಪರಸ್ಪರರಿಗೆ ಬಣ್ಣ ಹಾಕಿ ಸಂತಸ ಪಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಬಣ್ಣವನ್ನು ಯುವಕರು ಮಾತ್ರ ಆಡಿ ಆಚರಿಸುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಪುರುಷರು- ಮಹಿಳೆಯರು ಬಣ್ಣದಾಟವನ್ನು ಆಡುವುದು ರೂಢಿ. ಏತನ್ಮಧ್ಯೆ ಮೊಬೈಲ್ ಯುಗದಲ್ಲಿ ಇಂಥ ಐತಿಹಾಸಿಕ ಆಚರಣೆಗಳಿಗೆ ಪೆಟ್ಟು ಬಿದ್ದಿದೆಯಾದರೂ ಈಗಲೂ ನಗರ ಪ್ರದೇಶಗಳಲ್ಲಿ ಅತಿ ಜೋಶ್ ನಿಂದ ಬಣ್ಣವಾಡುವುದು ವಾಡಿಕೆ.

ಒಂದು ದಿನ ಮುಂಚೆಯೇ ಬಣ್ಣ ಸಂಗ್ರಹ: ಬಣ್ಣವಾಡುವ ಮುನ್ನಾ ದಿನವೇ ತಮ್ಮ ತಮ್ಮ ಮಕ್ಕಳಿಗೆ ಬಣ್ಣವನ್ನು ಪಾಲಕರೇ ಖರೀದಿಸಿ ಮನೆಗೆ ಒಯ್ಯುವುದುಂಟು. ನಗರಾದ್ಯಂತ ಹೋಳಿಗೆ ಮುಂಚೆಯೇ  2-3 ದಿನದಿಂದ ಬಣ್ಣದ  ವ್ಯಾಪಾರಸ್ಥರು ಬಣ್ಣ ಮಾರಾಟ ಮಾಡುವುದುಂಟು. ಜನರು ಬೀದಿ ಬದಿ ಹಾಗೂ ಅಂಗಡಿಗಳಲ್ಲಿ ದೊರೆಯುವ  ಬಣ್ಣವನ್ನು ಖರೀದಿಸಿ ಸಂಗ್ರಹಿಸುತ್ತಾರೆ. ಹೋಳಿ ದಿನದಂದು ಮಧ್ಯಾಹ್ನ 4 ಗಂಟೆವರೆಗೆ ಬಣ್ಣವಾಡಿ ಸಂತಸ ಪಡುತ್ತಾರೆ. ಇದರಲ್ಲಿ ಚಿಕ್ಕ ಮಕ್ಕಳು, ಯುವಕರು, ಯುವತಿಯರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ.

ವಿವಿಧ ಐತಿಹಾಸಿಕ ಹಿನ್ನೆಲೆಯಲ್ಲಿ ಆಚರಣೆ: ದೇಶದ ವಿವಿಧ ಭಾಗಗಳಲ್ಲಿ ಅಂದರೆ ವಿವಿಧ ರಾಜ್ಯಗಳಲ್ಲಿ ವಿವಿಧ ಐತಿಹಾಸಿಕ ಘಟನೆಗಳ ಹಿನ್ನೆಲೆಯಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ರಾಜ್ಯದಲ್ಲಿ ಹೆಚ್ಚಾಗಿ ಕಾಮನ ಮೆರವಣಿಗೆ, ಕಾಮನ ದಹನ ಹಿನ್ನೆಲೆಯಲ್ಲಿ ಆಚರಿಸಸುವರು. ವಿಷ್ಣು ಭಕ್ತ ಪ್ರಹ್ಲಾದ ವಿಷ್ಣುವಿನಲ್ಲಿ ಅಪಾರ ಭಕ್ತಿ ಭಾವವನ್ನು ಹೊಂದಿದ ಬಾಲಕ. ತಂದೆ ಹಿರಣ್ಕಕಶ್ಯಪನ ಮಾತನ್ನು ಮೀರಿ ಭಕ್ತಿ ಪರಿಭಾಷೆಯಲ್ಲಿ ನಡೆಯುವನು. ಏಕೆಂದರೆ ಆ ಬಾಲಕ ನಿಜಕ್ಕೂ ವಿಷ್ಣುವಿನ ಅವತಾರದಂತೆ ಇರುವನು. ಕಾರಣ ಮಹಾ ಗರ್ವಿ ಹಾಗೂ ತಾನೇ ದೇವರೆಂದು ಮೆರೆಯುವ ಹಿರಣ್ಯಕಶ್ಯಪ್ಪನಿಗೆ ಬುದ್ದಿ ಕಲಿಸಲು ನಿಂತ ವಿಷ್ಣು ಅವತಾರದ ಬಾಲಕನಾಗಿರುವನು. ಹೀಗಾಗಿ ಹಿರಣ್ಯ- ಪ್ರಹ್ಲಾದನ ಸ್ಮರಣಿಕೆಯಲ್ಲೂ ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ಕೃಷ್ಣ- ರಾಧಾ ಹಿನ್ನೆಲೆ: ಪರಮಾತ್ಮನ ಹನ್ನೊಂದನೇ ಅವತಾರವಾಗಿ ಭುವಿಗಿಳಿದ ಭಗವಂತನೆ ಕೃಷ್ಣ. ಕೃಷ್ಣ ರಾಧೆಯರ ಹಿನ್ನೆಲೆಯಲ್ಲಿಯೂ ಹೋಳಿ ಹಬ್ಬವನ್ನು ಆಚರಿಸುವುದುಂಟು. ಪಶ್ಚಿಮ ಬಂಗಾಳ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿವಿಧ ಐತಿಹಾಸಿಕ ಹಿನ್ನೆಗಳಲ್ಲಿ ‘ಹೋಳಿ’ ಯನ್ನು ಆಚರಿಸುವುದುಂಟು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!