Ad imageAd image

ನಟ ದರ್ಶನ್ ಬಳ್ಳಾರಿ ಜೈಲಿಗೆ : ಸ್ಥಳಾಂತರಕ್ಕೆ ನ್ಯಾಯಾಲಯ ಒಪ್ಪಿಗೆ 

Bharath Vaibhav
ನಟ ದರ್ಶನ್ ಬಳ್ಳಾರಿ ಜೈಲಿಗೆ : ಸ್ಥಳಾಂತರಕ್ಕೆ ನ್ಯಾಯಾಲಯ ಒಪ್ಪಿಗೆ 
case
WhatsApp Group Join Now
Telegram Group Join Now

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಬಿಂದಾಸ್ ಆಗಿರುವ ಫೋಟೋ ಇತ್ತೀಚಿಗೆ ವೈರಲ್ ಆಗಿತ್ತು. ಅಲ್ಲದೆ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತಂತೆ ತನಿಖೆಗೆ ಆದೇಶಿಸಿ ಗೃಹ ಸಚಿವ ಜಿ ಪರಮೇಶ್ವರ್ ಕಾರಾಗೃಹ ಇಲಾಖೆ ಡಿಜಿ ಮಾಲಿನಿ ಕೃಷ್ಣ ಮೂರ್ತಿಗೆ ಆದೇಶಿಸಿದ್ದರು.

ಇದರ ಬೆನ್ನಲ್ಲೇ ಇದೀಗ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಬೆಂಗಳೂರಿನ 24ನೇ ACMM ನ್ಯಾಯಾಲಯ ಪೊಲೀಸರಿಗೆ ಒಪ್ಪಿಗೆ ನೀಡಿದೆ.

ಹೌದು, ಪರಪ್ಪನ ಅಗ್ರಹಾರ ಜೈಲಿನ ಒಳಗೆ ಅಕ್ರಮವಾಗಿ ಮಾದಕ ವಸ್ತುಗಳು, ಮದ್ಯ, ಬಿರಿಯಾನಿ ಎಲ್ಲವು ಕಾರಾಗೃಹದ ಸಿಬ್ಬಂದಿಗಳು ಸಪ್ಲೈ ಮಾಡುತಿದ್ದರು ಎಂಬ ಆರೋಪ ಕೇಳಿ ಬಂದಿತ್ತು ಇದರ ಬೆನ್ನಲ್ಲೇ, ಗೃಹ ಸಚಿವ ಜಿ ಪರಮೇಶ್ವರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಅಧಿಕಾರಿಗಳನ್ನು ಕೂಡ ಅಮಾನತು ಮಾಡಲಾಗಿತ್ತು..

ಅದಾದ ಬಳಿಕ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಬೇಕಾ ಅಥವಾ ಬಳ್ಳಾರಿ ಜೈಲಿಗೆ ಕಳುಹಿಸಬೇಕಾ ಎಂಬ ಗೊಂದಲದಲ್ಲಿದ್ದಾಗ, ಇದೀಗ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬಹುದು ಎಂಬ ಒಪ್ಪಿಗೆ ನೀಡಿದ್ದು ಉಳಿದ ಆರೋಪಿಗಳಿಗೂ ಕೂಡ ಬೇರೆ ಬೇರೆ ಕೇಂದ್ರ ಕಾರಾಗೃಹಗಳಿಗೆ ಶಿಫ್ಟ್ ಮಾಡಲು ಒಪ್ಪಿಗೆ ನೀಡಿದೆ.

ಇನ್ನು ಉಳಿದ ಆರೋಪಿಗಳಿಗೂ ಕೋರ್ಟ್ ಅನುಮತಿ ನೀಡಿದೆ. ಮೈಸೂರು ಜೈಲಿಗೆ ಶಿಫ್ಟ್ ಆಗಲಿರುವ ಪವನ್ ರಾಘವೇಂದ್ರ ಮತ್ತು ನಂದೀಶ್ ಜಗದೀಶ್ ಶಿವಮೊಗ್ಗ ಜಿಲ್ಲೆಗೆ ಧನರಾಜ ಧಾರವಾಡ ಸೆಂಟ್ರಲ್ ಜೈಲಿಗೆ, ವಿನಯ್ ವಿಜಯಪುರದ ಜೈಲಿಗೆ, ನಾಗರಾಜ್ ಕಲಬುರ್ಗಿ ಜೈಲಿಗೆ, ಶಿವಮೊಗ್ಗ ಜೈಲಿಗೆ ಲಕ್ಷ್ಮಣ, ಬೆಳಗಾವಿ ಜಿಲ್ಲೆಗೆ ಪ್ರದೋಷ ಶಿಫ್ಟ್ ಆಗಲಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!