ಇಲಕಲ್:- ನ್ಯಾಯಾಲಯಗಳು ಸಾರ್ವಜನಿಕರ ದೇವಾಲಯಗಳು ಇಂದಂತೆ, ಅಲ್ಲಿ ಬರುವವರಿಗೆ ಮತ್ತು ವಕೀಲರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಕಕ್ಷಿದಾರರು ಕುಳಿತುಕೊಳ್ಳುವುದಕ್ಕೆ ಬೆಂಚು, ಇನ್ನಿತರ ಮೂಲಭೂತ
ಸೌಕರ್ಯಗಳನ್ನು ನೀಡಬೇಕಾದ ಸರಕಾರ , ಇನ್ನುವರೆಗಾದರೂ ಕೂಡಾ ಕೊಟ್ಟಿಲ್ಲ, ಅಲ್ಲಿ ಬರುವ ಸಾರ್ವಜನಿಕರಿಗೆ ತೊಂದರೆಯಾಗಿದೆ
ಎಂದು ಅಖಿಲ ಕರ್ನಾಟಕ ರೈತ ಸಂಘದ ಬಾಗಲಕೋಟೆ ಜಿಲ್ಲಾಅಧ್ಯಕ್ಷ ನಾಗರಾಜ ಹೂಗಾರ ಮತ್ತು ಸಂಘದ ಸದಸ್ಯರು ಹುನಗುಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು, ಇದೇ ಸಂದರ್ಭದಲ್ಲಿ ದಿನಾಂಕ: 18-04-2024 ರಂದು ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನಲ್ಲಿ ಕ್ಲಾಸ್ ಮುಗಿಸಿ ಹೊರಗಡೆ ಬರುತ್ತಿದ್ದಂತೆ
ವಿದ್ಯಾರ್ಥಿನಿಯಾದ ನೇಹಾ ಹಿರೇಮಠರನ್ನು ಕಾಲೇಜು ಆವರಣದಲ್ಲಿ ಫಯಾಜ್ ಎಂಬ ಯುವಕ ಚಾಕುವಿನಿಂದ ಬರ್ಬರವಾಗಿ 9 ಸಲ ಚುಚ್ಚಿ ಕೊಲೆಗೈದ ಆರೋಪಿಯನ್ನು ತಕ್ಷಣ ಆರೋಪಿತನಿಗೆ ಸೂಕ್ತವಾದ ಕಾನೂನಿನ ಚೌಕಟ್ಟಿನಲ್ಲಿ ಗಲ್ಲಿಗೇರಿಸಬೇಕು ಮತ್ತು ಕೊಲೆಯಾದ ನೇಹಾ ಹಿರೇಮಠ ಇವರ ಕುಟುಂಬದವರಿಗೆ ನ್ಯಾಯವನ್ನು
ಒದಗಿಸಿಕೊಡಬೇಕೆಂದು ರಾಜಪಾಲರಿಗೆ ಮನವಿ ಸಲ್ಲಿಸಿದರು.
ವರದಿ ದಾವಲ್. ಶೇಡಂ