ಸಿರುಗುಪ್ಪ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಶ್ರಮಿಕ ಭವನದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕಾಮ್ರೆಡ್ ಜಿ.ಸಿ.ಬಯ್ಯಾರೆಡ್ಡಿ ಅವರ ನಿಧನದ ಹಿನ್ನಲೆ ತಾಲೂಕು ಸಿಪಿಐ(ಎಮ್) ಪಕ್ಷದ ವತಿಯಿಂದ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಶೋಕಾಚರಣೆ ಮಾಡಲಾಯಿತು.
ಸಿಪಿಐ(ಎಮ್) ಪಕ್ಷದ ತಾಲೂಕು ಸಮಿತಿಯ ಕಾರ್ಯದರ್ಶಿ ಹೆಚ್.ತಿಪ್ಪಯ್ಯ ಮಾತನಾಡಿ ರೈತರ ಹಿತದೃಷ್ಟಿಗಾಗಿ ಶ್ರಮಿಸಿದ ಧೀಮಂತ ನಾಯಕ ನಮ್ಮ ಕಾಮ್ರೆಡ್ ಅವರು ರಾತ್ರಿ 3ಗಂಟೆಗೆ ನಮ್ಮನ್ನೆಲ್ಲಾ ಅಗಲಿರುವುದು ನಮಗೆಲ್ಲಾ ದು:ಖದ ಸಂಗತಿಯಾಗಿದೆ.
ಯಾವುದೇ ಆಕಾಂಕ್ಷೆಯಿಲ್ಲದೇ ಸರಳವಾಗಿ ಜೀವನ ನಡೆಸಿದಂತಹ ವ್ಯಕ್ತಿಯಾಗಿದ್ದರು.
ರೈತಾಪಿ ಕುಟುಂಬದಿಂದ ಬಂದ ಅವರು ವಿದ್ಯಾರ್ಥಿ ದೆಸೆಯಿಂದಲೇ ಅನೇಕ ಹೋರಾಟಗಳ ಮೂಲಕ ಬಡವರಿಗಾಗಿ, ರೈತರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ಆದಕಾರಣ ಮುಂದಿನ ದಿನಗಳಲ್ಲೂ ನಾವೆಲ್ಲಾ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಆತ್ಮಕ್ಕೆ ಶಾಂತಿಕೋರುವ ಮೂಲಕ ಅವರ ಜೀವನ ಶೈಲಿಯಲ್ಲಿ ನಾವು ಮುಂದುವರೆಯಬೇಕೆಂದರು.
ಇದೇ ವೇಳೆ ಸಿಪಿಐ(ಎಮ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಹೆಚ್.ಬಿ.ಓಬಳೇಶ್ವರಪ್ಪ, ಕೆ.ಈರಮ್ಮ, ತಾಲೂಕು ಸಮಿತಿಯ ಸದಸ್ಯರಾದ ಬಿ.ಎಲ್.ಈರಣ್ಣ, ವಿ.ಮಾರುತಿ, ಎಮ್.ಲಕ್ಷö್ಮಣ, ಬಿ.ಸುರೇಶ, ಬಿ.ನಾಗರಾಜಗೌಡ, ಆರ್.ಮಲ್ಲಯ್ಯ, ಹೆಚ್.ದುರುಗಪ್ಪ, ರುದ್ರಮ್ಮ, ಡಿ.ಮಂಗಮ್ಮ, ತರಂಗಿಣಿ, ಗಂಗಮ್ಮ, ತಾಯಮ್ಮ, ಈರಣ್ಣ, ಈರಯ್ಯ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ