ಸಿಂಧನೂರು: ಸೆ,29 ಮಸ್ಕಿ, ಸಿಂಧನೂರು, ತಾಲೂಕಿನಲ್ಲಿ ಮಳೆಗೆ ಕೃಷಿ ಜಮೀನಿನಲ್ಲಿನ ಜೋಳ, ತೊಗರಿ, ಸಜ್ಜೆ ಹಾಗೂ ಹತ್ತಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು ಬೆಳೆಗಳ ಪಾರದರ್ಶಕ ಸಮೀಕ್ಷೆ ನಡೆಸಿ ಕೂಡಲೇ ಬೆಳೆನಷ್ಟ ಪರಿಹಾರ ನೀಡಬೇಕೆಂದು ಆಗ್ರಹಿಸಿ, ಸಿಪಿಐ(ಎಂಎಲ್) ಲಿಬರೇಶನ್ ತಾಲೂಕು ಸಮಿತಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ರವಾನಿಸಲಾಯಿತು.
ಎಂದು ಬಸವರಾಜ ಬೆಳಗುರ್ಕಿ ತಿಳಿಸಿದರು.
ಈ ವೇಳೆ ಮಾತನಾಡಿದ ಬಸವರಾಜ ಕೊಂಡಿ ಸಿಂಧನೂರು, ಮಸ್ಕಿ ತಾಲೂಕ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಾವಿರಾರು ಎಕರೆಯಲ್ಲಿ ರೈತರ ಬೆಳೆ ವಿಪರೀತ ಮಳೆಯಿಂದ ಅಪಾರ ಬೆಳೆನಷ್ಟವಾಗಿದ್ದು ಕೂಡಲೇ ಕಂದಾಯ, ಕೃಷಿ ಇಲಾಖೆಯಿಂದ ಪಾರದರ್ಶಕವಾಗಿ ಜಂಟಿ ಸಮೀಕ್ಷೆ ನಡೆಸಿ ಜೋಳಕ್ಕೆ ಎಕರೆ 25 ಸಾವಿರ ಹಾಗೂ ತೊಗರಿಗೆ ಎಕರೆಗೆ 20 ಸಾವಿರ ರೂಪಾಯಿ ಬೆಳೆನಷ್ಟ ಪರಿಹಾರ ರೈತರ ಖಾತೆಗೆ ಜಮಾ ಮಾಡಬೇಕು, ನಷ್ಟಕ್ಕೀಡಾದ ಹತ್ತಿ ಬೆಳೆಗಾರರಿಗೆ ಎಕರೆಗೆ 15 ಸಾವಿರ ಹಾಗೂ ತೊಗರಿ ಬೆಳೆಗೆ ಎಕರೆ 20 ಸಾವಿರ ನಷ್ಟ ಪರಿಹಾರ
ಒದಗಿಸಬೇಕೆಂದು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಈ ಕೂಡಲೇ ಆದೇಶ ಹೊರಡಿಸಿ ಸಮೀಕ್ಷೆ ಚುರುಕೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ, ಆರ್.ಎಚ್.ಕಲ್ಮಂಗಿ, ಮಹಾದೇವ ಅಮರಾಪುರ, ರೈತರಾದ ಚಿದಾನಂದ, ಹುಸೇನಪ್ಪ, ಮೌನೇಶ, ದುರುಗಪ್ಪ, ಶರಣಪ್ಪ, ವೀರೇಶ, ರಮೇಶ, ಕಂಠೆಪ್ಪ ಸೇರಿದಂತೆ ಇನ್ನು ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ




