ನವದೆಹಲಿ: ಈಗಲೇ ಕ್ರಿಕೆಟ್ನ ಕಿರಿಯ ದೈತ್ಯ ಪ್ರತಿಭೆ ಎಂದು ಹೆಸರು ಪಡೆದಿರುವ ೧೪ ರ್ಷ ೨೭೨ ದಿನಗಳ ವಯಸ್ಸಿನ ವೈಭವ ಸರ್ಯವಂಶಿ ಮತ್ತೊಂದು ದಾಖಲೆ ಮಾಡಿದ್ದಾರೆ.
ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸುತ್ತಿರುವ ಕಿರಿಯ ಕ್ರಿಕೆಟಿಗ ಬುಧವಾರ ಅರುಣಾಚಲ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ೩೬ ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಇದರೊಂದಿಗೆ ವೈಭವ ಅತಿ ವೇಗವಾಗಿ ಮೂರಂಕಿ ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಇದೇ ಇನ್ನಿಂಗ್ಸ್ನಲ್ಲಿ ಶತಕದ ನಂತರವೂ ತಮ್ಮ ಆಕ್ರಮಣಕಾರಿ ಆಟ ಮುಂದುವರೆಸಿದ ಕಿರಿಯ ಕ್ರಿಕೆಟಿಗ ೫೯ ಎಸೆತಗಳಲ್ಲಿ ೧೫೦ ರನ್ ಪೂರೈಸಿದ ಮೈಲಿಗಲ್ಲನ್ನು ತಲುಪಿದರು. ಇದರೊಂದಿಗೆ ಸರ್ಯವಂಶಿ, ಐಪಿಎಲ್ ಪಂದ್ಯಾವಳಿಯಲ್ಲಿ, ಸೈಯದ್ ಮುಸ್ತಾಕ್ ಅಲಿ ಟ್ರೋಫಿ, ವಿಜಯ ಹಜಾರೆ ಟ್ರೋಫಿ, ಯುವ ಪಂದ್ಯಾವಳಿಯ ಟೆಸ್ಟ್, ಏಕದಿನ ಹಾಗೂ ೧೯ ರ್ಷದೊಳಗಿನವರ ಏಶಿಯಾ ಕಪ್ ನಲ್ಲಿ ೯೫ ಎಸೆತಗಳಲ್ಲಿ ೧೭೧ ವೇಗದ ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದಂತಾಗಿದೆ.
ದಾಖಲೆಗಳ ಸರಣಿ ಮುಂದುವರೆಸಿದ ಕ್ರಿಕೆಟ್ ಪೋರ




