ಬುಲಾವಾಯೋ ( ಜಿಂಬಾಬ್ವೆ) : ಇಲ್ಲಿನ ಕ್ವೀನ್ಸ್ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿಂದು ಪ್ರವಾಸಿ ನ್ಯೂಜಿಲೆಂಡ್ ಹಾಗೂ ಆತಿಥೇಯ ಜಿಂಬಾಬ್ವೆ ಕ್ರಿಕೆಟ್ ತಂಡಗಳ ನಡುವೆ ದ್ವಿತೀಯ ಟೆಸ್ಟ್ ಕ್ರಿಕೆಟ್ ಪಂದ್ಯ ನಡೆಯಲಿದೆ.
ಮಿಚೆಲ್ ಸ್ಯಾಂಟನರ್ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿದ್ದು, ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇನ್ನೊಂದೆಡೆ ಆತಿಥೇಯ ತಂಡವು ತವರಿನಲ್ಲಿ ನಡೆದ ಸರಣಿಗಳಲ್ಲಿ ಈಚೆಗೆ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ.




