Ad imageAd image

ಪತ್ನಿ ಡಿವೋರ್ಸ್ ನಂತರ ಖಿನ್ನತೆಗೆ ಜಾರಿದ್ದಾರಂತೆ ಕ್ರಿಕೆಟಿಗ ಚಹಾಲ್  

Bharath Vaibhav
ಪತ್ನಿ ಡಿವೋರ್ಸ್ ನಂತರ ಖಿನ್ನತೆಗೆ ಜಾರಿದ್ದಾರಂತೆ ಕ್ರಿಕೆಟಿಗ ಚಹಾಲ್  
WhatsApp Group Join Now
Telegram Group Join Now

ಸದಾ ಹಸನ್ಮುಖಿ ಆನ್‌ಫೀಲ್ಡ್‌ ಹಾಗೂ ಆಫ್‌ ಫೀಲ್ಡ್‌ ನಗುತ್ತಲ್ಲೇ ಎಲ್ಲರನ್ನೂ ಮನರಂಜಿಸುತ್ತಿದ್ದ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರು ಡಿವೋರ್ಸ್‌ನ ನಂತರ ಡಿಪ್ರೆಷನ್ (ಖಿನ್ನತೆಗೆ) ಜಾರಿದ್ದಾರೆ. ಹೌದು ಭಾರತದ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರು ಮೊದಲಿನಂತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅಷ್ಟು ಮಾತ್ರವಲ್ಲ ಅವರ ಮೊಗದಲ್ಲಿ ಮೊದಲಿನ ನಗು, ಕಳೆ ಇಲ್ಲ. ಏನನ್ನೋ ಕಳೆದುಕೊಂಡ ಭಾವ. ಇನ್ನು ಅವರ ವೃತ್ತಿ ಹಾಗೂ ವೈಯಕ್ತಿಕ ಎರಡರಲ್ಲೂ ಹಲವು ಏರುಪೇರುಗಳಾಗಿವೆ. ಕ್ರಿಕೆಟ್‌ನಲ್ಲಿ ಮೊದಲಿನಂತೆ ಆಟವಾಡಲು ಅಥವಾ ಹಿಂದಿರುಗುವುದಕ್ಕೂ ಅಡೆತಡೆಗಳು ಇವೆ.

ಇದರ ನಡುವೆ ಅವರ ಪತ್ನಿ ಧನಶ್ರೀ ವರ್ಮಾ ಅವರಿಂದ ಡಿವೋರ್ಸ್‌ ಅವರು ಡಿಪ್ರೆಷನ್‌ಗೆ ಜಾರಿದ್ದಾರೆ ಎನ್ನಲಾಗುತ್ತಿದೆ. ಕರ್ಮದ ವಿಷಯದ ಬಗ್ಗೆ ಅವರು ಮಾಡಿರುವ ಪೋಸ್ಟ್‌ ಇದೀಗ ವೈರಲ್‌ ಆಗಿದೆ. ದೇಶಿಯ ಅಥವಾ ವಿದೇಶಿ ಆಟಗಾರರ ಜೊತೆ ಸದಾ ನಗುತ್ತಲ್ಲೇ ಇರುತ್ತಿದ್ದ. ಸಣ್ಣ ಸಣ್ಣ ವಿಷಯಗಳಲ್ಲೂ ಕಾಮಿಡಿ ಮಾಡುತ್ತಿದ್ದ ಚಹಾಲ್ ಅವರು ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ಧನಶ್ರೀ ವರ್ಮಾ ಹಾಗೂ ಚಹಾಲ್ ಅವರು ಡಿವೋರ್ಸ್‌ ತೆಗೆದುಕೊಂಡಿದ್ದಾರೆ. ಈ ಡಿವೋರ್ಸ್‌ ಹಾಗೂ ಅದಕ್ಕೂ ಮುಂಚಿನ ಘಟನೆಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಬಣ್ಣದ ಸ್ಟೋರಿಗಳು ಸೃಷ್ಟಿಯಾಗಿವೆ ಇದರಿಂದ ಚಹಾಲ್‌ ಇನ್ನಷ್ಟು ಸೊರಗಿದ್ದಾರೆ.

ಭಾರತೀಯ ಕ್ರಿಕೆಟಿಗ ಚಹಾಲ್‌ ಅವರು ಹರಿಯಾಣಕ್ಕೆ ಆಡುತ್ತಿದ್ದಾರೆ. ಚಹಾಲ್‌ ಕನ್ನಡಿಗರಿಗೂ ಚಿರಪರಿಚಿತ. ಆರ್‌ಸಿಬಿಯಲ್ಲಿ ಒಳ್ಳೆಯ ಬೌಲರ್. ಚಹಾಲ್‌ ಅವರ  ಹಾಸ್ಯಪ್ರಜ್ಞೆಯನ್ನು ಮೆಚ್ಚಿಕೊಳ್ಳದವರೇ ಇಲ್ಲ. ಕ್ರಿಕೆಟಿಗ ಕ್ರಿಸ್‌ಗೇಲ್ ಹಾಗೂ ಚಹಾಲ್‌ ಅವರ ಕಾಮಿಡಿ ವಿಡಿಯೋಗಳು ಈಗಲೂ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುವುದು ಇದೆ.  ಪಾರು-ಶಿವು ರೀಲ್‌ ಅಲ್ಲ ರಿಯಲ್‌ ಜೋಡಿ: ಪ್ರೀತಿಯಲ್ಲಿ ಬಿದ್ದ ರೌಡಿಬೇಬಿ? ಹೇಗಿದ್ದ ಚಹಾಲ್ ಹೇಗಾದರು ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚಿಗಿನ ಚಹಾಲ್ ಅವರ ಫೋಟೋ ಮತ್ತು ವಿಡಿಯೋಗಳು ವೈರಲ್‌ ಆಗಿವೆ.

ಯಾವಾಗಲೂ ನಗುತ್ತಿದ್ದ ಚಹಾಲ್ ಅವರ ಮುಖದಲ್ಲಿ ಈಗ ನಗುವೇ ಕಾಣಿಸುತ್ತಿಲ್ಲ. ಚಹಾಲ್ ಅವರ ಅಪ್ಪನ ಜೊತೆಗೆ ಹಾಗೂ ಮಾಜಿ ಪತ್ನಿಯೊಂದಿಗೆ ಅವರು ಮಾಡುತ್ತಿದ್ದ ರೀಲ್ಸ್‌ಗಳು ಭಾರೀ ವೈರಲ್‌ ಆಗುತ್ತಿದ್ದವು. ಮೈದಾನದಲ್ಲಿ ಸಹ ಆಟಗಾರರು ಹಾಗೂ ವಿದೇಶಿಗರೊಂದಿಗೂ ಚಹಾಲ್‌ ಅವರದ್ದು ತಮಾಷೆಯ ಸ್ವಭಾವವಾಗಿತ್ತು. ಆದರೆ, ಡಿವೋರ್ಸ್‌ ಆದ ಮೇಲೆ ಅವರು ಮೊದಲಿನಂತೆ ಇಲ್ಲ. ಈಗ ಅವರು ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ.‌

ಫೋಟೋಗಳಲ್ಲಿ ನಗುವೇ ಇಲ್ಲ.. ಹೇಗಿದ್ದ ಚಹಾಲ್ ಹೇಗಾದರು ಗೊತ್ತಾ ಅಂತ ಅವರ ಅಭಿಮಾನಿಗಳು ನೋವಿನಿಂದ ಕಮೆಂಟ್ ಮಾಡುತ್ತಿದ್ದಾರೆ. ಕರ್ಮದ ಬಗ್ಗೆ ಮಾಡಿದ ಪೋಸ್ಟ್‌ ವೈರಲ್ ಚಹಾಲ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿ ಇದ್ದರು. ಈಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲು ಶುರು ಮಾಡಿದ್ದಾರೆ. ಆದರೆ, ಮೊದಲಿನಂತೆ ಕಾಮಿಡಿಯ ವಿಡಿಯೋಗಳು ಈಗ ಕಾಣಿಸುತ್ತಿಲ್ಲ.

ಮುಂದುವರಿದು ಕರ್ಮದ ಬಗ್ಗೆ ಅವರು ಒಂದು ಸಾಲಿನ ಪೋಸ್ಟ್‌ ಮಾಡಿದ್ದು. ಈ ಪೋಸ್ಟ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಎಂದು ಅವರು ಇನ್ಸಟಾದಲ್ಲಿ ಬರೆದುಕೊಂಡಿದ್ದಾರೆ. ಕರ್ಮ ಎಂದಿಗೂ ತನ್ನ ವಿಳಾಸ ಕಳೆದುಕೊಳ್ಳುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಅನ್ನು ಧನಶ್ರೀ ವರ್ಮಾ ಅವರನ್ನು ಉದ್ದೇಶಿಸಿಯೇ ಮಾಡಲಾಗಿದೆ ಎಂದು ಜನ ಕಮೆಂಟ್‌ ಮಾಡುತ್ತಿದ್ದಾರೆ.

 

 

 

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!