Ad imageAd image

ಕ್ರಿಕೆಟಿಗ ಕೆ.ಎಲ್. ರಾಹುಲ್ ದಂಪತಿಗಳ ಮನೆಗೆ ‘ಲಕ್ಷ್ಮೀ’  ಆಗಮನ

Bharath Vaibhav
ಕ್ರಿಕೆಟಿಗ ಕೆ.ಎಲ್. ರಾಹುಲ್ ದಂಪತಿಗಳ ಮನೆಗೆ ‘ಲಕ್ಷ್ಮೀ’  ಆಗಮನ
WhatsApp Group Join Now
Telegram Group Join Now

ಮುಂಬೈ: ಪತ್ನಿ ಅಥಿಯಾ ಶೆಟ್ಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಕ್ರಿಕೆಟಿಗ ಕೆ.ಎಲ್.ರಾಹುಲ್​ ತಂದೆಯಾದ ಹರುಷದಲ್ಲಿದ್ದಾರೆ.

ಸೋಮವಾರ ಸಂಜೆ ಈ ಬಗ್ಗೆ ಅಥಿಯಾ ಹಾಗೂ ಕೆ.ಎಲ್​.ರಾಹುಲ್​ ಇಬ್ಬರೂ ಇನ್​ಸ್ಟಾಗ್ರಾಂನಲ್ಲಿ ತಮ್ಮ ಮಗಳ ಆಗಮನದ ಬಗ್ಗೆ ಮುದ್ದಾದ ಪೋಸ್ಟ್​ವೊಂದನ್ನು ಹಂಚಿಕೊಂಡು, ಅಧಿಕೃತವಾಗಿ ಘೋಷಿಸಿದರು.

“ಹೆಣ್ಣು ಮಗುವಿನ ಆಗಮನ” ಎಂಬ ಕ್ಯಾಪ್ಷನ್​ನೊಂದಿಗೆ ಕೊಳದಲ್ಲಿ ಎರಡು ಹಂಸಗಳ ವರ್ಣಚಿತ್ರವಿರುವ ಪೋಸ್ಟರ್​ ಪೋಸ್ಟ್​ ಮಾಡಿದ್ದಾರೆ.

ಈ ಕಾರಣಕ್ಕಾಗಿ ನಿನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳ ನಡುವಿನ ಐಪಿಎಲ್​ ಪಂದ್ಯಾಟದಿಂದ ಸ್ಟಾರ್​ ಬ್ಯಾಟರ್ ಕೆ.ಎಲ್.ರಾಹುಲ್​ ಹೊರಗುಳಿದು, ಮುಂಬೈಗೆ ತೆರಳಿದ್ದರು.

ಕೆ.ಎಲ್​.ರಾಹುಲ್​ ಹಾಗೂ ಅಥಿಯಾ ಈ ಶುಭ ಸುದ್ದಿಯನ್ನು ಹಂಚಿಕೊಂಡ ತಕ್ಷಣವೇ ಅಭಿಮಾನಿಗಳು, ಕ್ರಿಕೆಟ್​ ಹಾಗೂ ಚಲನಚಿತ್ರ ಕ್ಷೇತ್ರದ ತಾರೆಗಳು ಕಾಮೆಂಟ್​ಗಳ ಮೂಲಕ ಇಬ್ಬರಿಗೂ ಅಭಿನಂದನೆಗಳ ಮಳೆಯನ್ನೇ ಸುರಿಸಿದ್ದಾರೆ.

ನಟಿಯರಾದ ಅದಿತಿ ರಾವ್​ ಹೈದರಿ, ಭೂಮಿ ಪಡ್ನೇಕರ್​, ಮಾಜಿ ಕ್ರಿಕೆಟಿಗ ಶಿಖರ್​ ಧವನ್​ ಸೇರಿದಂತೆ ಹಲವರು ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸಿದ್ದಾರೆ.

2023ರ ಜನವರಿ 23ರಂದು ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ವಿವಾಹವಾಗಿದ್ದರು. 2024ರ ನವೆಂಬರ್​ನಲ್ಲಿ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿ ಮುದ್ದಾದ ಮಗುವಿನ ಪಾದಗಳ ಚಿತ್ರವನ್ನು ಸೋಶಿಯಲ್​ ಮೀಡಿಯಾ ಪೋಸ್ಟ್​ ಮಾಡಿ ಘೋಷಿಸಿದ್ದರು.

WhatsApp Group Join Now
Telegram Group Join Now
Share This Article
error: Content is protected !!