ನಾರ್ಥಹ್ಯಾಮ್ಟನ್ (ಇಂಗ್ಲೆಂಡ್) ಇಲ್ಲಿ ನಡೆದಿರುವ ಭಾರತ ಎ, ಹಾಗೂ ಇಂಗ್ಲೆಂಡ್ ಲಯನ್ ತಂಡಗಳ ನಡುವಣ ಅನಧಿಕೃತ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಎ ತಂಡದ ಉತ್ತಮ ಮೊತ್ತಕ್ಕೆ ಇಂಗ್ಲೆಂಡ್ ಲಯನ್ ಪ್ರಬಲ ಪೈಪೋಟಿ ಒಡ್ಡಿದೆ.
ಇಲ್ಲಿನ ಕೌಂಟಿ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ ಭೋಜನ ವಿರಾಮದ ನಂತರದ ಆಟದಲ್ಲಿ 9 ವಿಕೆಟ್ ಗೆ 314 ರನ್ ಗಳಿಸಿದ್ದು, 34 ರನ್ ಗಳ ಹಿನ್ನೆಡೆ ಅನುಭವಿಸಿತ್ತು. ಭಾರತ ಎ ಮೊದಲ ಇನ್ನಿಂಗ್ಸ್ ನಲ್ಲಿ 348 ರನ್ ಗಳಿಸಿತ್ತು. ಭಾರತ ಎ ಪರ ಖಲೀಲ್ ಅಹ್ಮದ್ 70 ಕ್ಕೆ 4 ವಿಕೆಟ್ ಕಬಳಿಸಿದ್ದರು.




