ಮುದಗಲ್ಲ : ಪೋಲಿಸ್ ಠಾಣೆಯಲ್ಲಿ ಮುಂಭಾಗದಲ್ಲಿ ಮಂಗಳವಾರ ಅಪರಾಧ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.
ಆಟೋ ಚಾಲಕರು ಹಾಗೂ ಕಾರ ಚಾಲಕರಿಗೆ ಮತ್ತು ಸಾವ೯ಜನಿಕರಿಗೆ ಅಪರಾಧ ಪ್ರಕರಣಗಳ ಕಡಿವಾಣ ಕುರಿತು ಅರಿವು ಮೂಡಿಸಲಾಯಿತು ಪಟಣದ ಠಾಣೆಯ ಪಿಎಸ್ಐ ವೆಂಕಟೇಶ ಮಾಡಗೇರಿ ಮಾತನಾಡಿ, ‘ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ’ ಎಂದು ಹೇಳಿದರು.
ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.
ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ, ಆಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ. ಕರಪತ್ರಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಯಾವುದೇ ಅಪರಾಧವನ್ನು ಕಂಡಿದ್ದ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ಒಂದು ವೇಳೆ ಹೀಗಾಗದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದರು.
ಮುದಗಲ್ಲ ಪಟಣದ ನಿವಾಸಿಗಳು ಮನೆಗೆ ಬೀಗ ಹಾಕಿ ಬೇರೆ ಊರುಗಳಿಗೆ ತೆರಳುವಾಗ ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಬೇಕು. ಅಥವಾ ಗೃಹ ರಕ್ಷಕ ತಂತ್ರಾಂಶದಲ್ಲಿ ಬೀಗ ಹಾಕುವ ಮನೆ ಇರುವ ಸ್ಥಳದ ಮಾಹಿತಿ ಸೇರಿಸಬೇಕು ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಪಿಎಸ್ಐ ವೆಂಕಟೇಶ ಮಾಡಗೇರಿ, ಕ್ರೈಮ್ ಪಿಎಸ್ಐ ಛತ್ತಪ್ಪ ರಾಠೋಡ, ಸಿಬ್ಬಂದಿ ಗಳಾದ ಮಂಜುನಾಥ ,ವೀರಭದ್ರಪ್ಪ , ಅನಿಲ್ ಕುಮಾರ್, ಹಾಗೂ ಚಾಲಕರ ಅಧ್ಯಕ್ಷ ರಾದ ಅಬ್ದುಲ್ ರಜಾಕ್ ,ಹಸನ್ ಹಳೇಪೇಟೆ ,ಹನುಮಂತ, ನಾಗರಾಜ, ಮೈಬುಬೂ, ಕೃಷ್ಣ, ರಮೇಶ ಮೇಗಳಪೇಟೆ, ಶಿವಯ್ಯ ತಾತ, ಶಬೀರ್ ಅಲಿ, ಮಜೀದ್,ಮೌಲಾಸಾಬ, ನಾಗರಾಜ್, ಗುಂಡುಸಾಬ, ಸಾವ೯ಜನಿಕರು ಉಪಸ್ಥಿತರಿದ್ದರು..
ವರದಿ:- ಮಂಜುನಾಥಕುಂಬಾರ