ಬೆಂಗಳೂರು : ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಪಟಾಕಿ ಹಚ್ಚಿ ಸಂಭ್ರಮಿಸಲು ಕಾತುರರಾಗಿದ್ದಾರೆ. ಈ ವೇಳೆ ನಿಷೇಧಿತ ಪಟಾಕಿ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಹಸಿರು ಪಟಾಕಿಗಳನ್ನು ಮಾರಲು ಮಾತ್ರ ಅವಕಾಶ ಕಲ್ಪಿಸಿದ್ದು, ನಿಷೇಧಿತ ಪಟಾಕಿಗಳ ಮಾರಾಟದ ಮೇಲೆ ಹದ್ದಿನ ಕಣ್ಣನ್ನು ಇಡಲಾಗಿದೆ.
ಬೆಂಗಳೂರಲ್ಲಿ ಪಟಾಕಿ ಮಾರಾಟದ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಸರ್ಕಾರ ಪರಿಸರಸ್ನೇಹಿ ಹಬ್ಬ ಆಚರಿಸಲು ಕರೆ ನೀಡಿದ್ದು, ಕೇವಲ ಹಸಿರು ಪಟಾಕಿ ಬಳಸಲು ಕರೆ ನೀಡಲಾಗಿದೆ.
ಬೆಂಗಳೂರಲ್ಲಿ 72 ಸ್ಥಳಗಳಲ್ಲಿ ಸ್ಥಾಪನೆಯಾಗಿರೋ ಪಟಾಕಿ ಮಳಿಗೆಗಳ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
ಈಗಾಗಲೇ 14 ಪ್ರಾದೇಶಿಕ ಮಂಡಳಿ ಅಧಿಕಾರಿಗಳು ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಲಿದ್ದಾರೆ. ನಿಷೇಧಿತ ಪಟಾಕಿಗಳಮಾರಾಟ ಕಂಡು ಬಂದರೆ ಅಂತಹ ಪಟಾಕಿ ಅಂಗಡಿ ಮಾಲೀಕರಿಗೆ ದಂಡ ಹಾಗೂ ಕ್ರಿಮಿನಲ್ ಕೇಸ್ ಹಾಕಲು ಮುಂದಾಗಿದ್ದಾರೆ.
ಪಟಾಕಿ ಸಿಡಿಯುವ ವೇಳೆ ವೇಳೆ ಬರೋ ಸೌಂಡು 125 ಡೆಸಿಬಲ್ ಮೀರಬಾರದು. ಒಂದು ವೇಳೆ ನಿಯಮಗಳು ಉಲ್ಲಂಘನೆ ಆದ್ರೆ ಅದನ್ನು ನಿಷೇಧಿತ ಪಟಾಕಿ ಅಂತ ಗುರ್ತಿಸಲಾಗುತ್ತದೆ. ಇಂತಹ ಪಟಾಕಿ ಮಾರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.




