ನವದೆಹಲಿ: ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ ಬಾಲ್ ಲೋಕದ ದಂತಕಥೆ.. ಹೆಸರು ಕೇಳಿದ್ರೆ ಸಾಕು ಅಸಂಖ್ಯಾತ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಫುಟ್‌ಬಾಲ್ ಕ್ರೀಡೆಯ ಇತಿಹಾಸದಲ್ಲಿ 930 ಗೋಲು ದಾಖಲಿಸಿದ ಏಕೈಕ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಕೇವಲ ಪೋರ್ಚುಗಲ್ (Portugal) ಮಾತ್ರವಲ್ಲದೇ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ದೈತ್ಯ ಫುಟ್ಬಾಲ್ ಆಟಗಾರ.
ಇದೀಗ ಇದೇ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಮ್ಮೆ ಸುದ್ದಿಯಾಗಿದ್ದು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು ಅವರು ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರಾಡ್ರಿಗಸ್ ಅವರೊಂದಿಗೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.
ಈ ಕುರಿತಾದ ಫೋಟೋಗಳನ್ನು ಜಾರ್ಜಿನಾ ರಾಡ್ರಿಗಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಕೂಡ ಟ್ಯಾಗ್ ಮಾಡಲಾಗಿದೆ.
ಈ ಇಬ್ಬರೂ ಸಹ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಬಹಳ ದಿನಗಳಿಂದ ಒಟ್ಟೊಟ್ಟಿಗೆ ಸುತ್ತಾಡುತ್ತಿರುವ ಕುರಿತು ಸುದ್ದಿಯಾಗಿದ್ದರು. ಹೌದು ಕ್ರಿಸ್ಟಿಯಾನೊ ರೊನಾಲ್ಡೊ-ಜಾರ್ಜಿನಾ ರಾಡ್ರಿಗಸ್ ಜೋಡಿ ಬಹುತೇಕ ಒಂದು ದಶಕದಿಂದ ಡೇಟಿಂಗ್ ಮಾಡುತ್ತಿದ್ದು, ಈಗಾಗಲೇ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ.




