ಬೆಳೆಹಾನಿ ಕ್ಷೇತ್ರ ಸಮೀಕ್ಷೆ ಪಾರದರ್ಶಕವಾಗಿರಲಿ ಭೋಜದಲ್ಲಿ ನದಿ ದಡದ ಬೆಳೆ ಹಾನಿ ಸಮೀಕ್ಷೆ ವೇಳೆ ಜೈ ಕಿಸಾನ್ ರೈತ ಸಂಘಟನೆ ರಾಜ್ಯಾಧ್ಯಕ್ಷ ರಮೇಶ ಪಾಟೀಲ ಆಗ್ರಹ
ನಿಪ್ಪಾಣಿ: ಎರಡು ವಾರಗಳಿಂದ ಸುರಿದ ಮಳೆಯಿಂದಾಗಿ ದೂದಗಂಗಾ ಹಾಗೂ ವೇದಗಂಗಾ ನದಿ ದಡದ ಕಬ್ಬು ಶೇಂಗಾ ಮೆಣಸು ಸೇರಿದಂತೆ ನೂರಾರು ಹೆಕ್ಟರ್ ಕ್ಷೇತ್ರ ಜಲಾವೃತಗೊಂಡಿದ್ದು ಸಂಪೂರ್ಣ ಬೆಳೆ ಹಾನಿಯಾಗಿದ್ದು ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಇಂತಹ ರೈತರ ಬೆಳೆ ಸಮೀಕ್ಷೆಯನ್ನು ಸರ್ಕಾರ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓ ಪಾರದರ್ಶಕ ಬೆಳೆ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ ಕಬ್ಬಿಗೆ ಒಂದು ಲಕ್ಷ ರೂಪಾಯಿ ಹಾಗೂ ಇನ್ನುಳಿದ ಬೆಳೆಗಳಿಗೆ ಐವತ್ತು ಸಾವಿರ ರೂಪಾಯಿ ಬೆಳೆ ಪರಿಹಾರ ನೀಡಬೇಕೆಂದು ಜೈ ಕಿಸಾನ್ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ. ರಮೇಶ ಪಾಟೀಲ ಒತ್ತಾಯಿಸಿದರು.

ನಿಪ್ಪಾಣಿ ತಾಲ್ಲೂಕಿನ ಭೋಜ ಗ್ರಾಮದಲ್ಲಿಯೇ ನದಿ ದಡದ ಕ್ಷೇತ್ರಗಳ ಬೆಳೆಹಾನಿಗೊಳಗಾದ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳಿಂದ ನಿರಂತರ ಪ್ರವಾಹ ಪೀಡಿತ ರೈತರಿಗೆ ಸಮರ್ಪಕವಾಗಿ ಬೆಳೆಯಾನಿ ಪರಿಹಾರ ದೊರೆಯುತ್ತಿಲ್ಲ. ಬೆಳೆ ಸಮೀಕ್ಷೆಯ ವೇಳೆಗೆ ಕಬ್ಬು ಬೆಳೆ ಸಂಪೂರ್ಣ ಜಲಾವ್ರತಗೊಂಡ ಕ್ಷೇತ್ರಕಷ್ಟೇ ಪರಿಹಾರ ನೀಡಲಾಗುತ್ತಿದೆ. ಶೇಕಡಾ 70ರಷ್ಟು ಬೆಳೆ ಮುಳುಗಡೆಯಾದರೂ ಪರಿಹಾರ ನೀಡುತ್ತಿಲ್ಲ. ಹೀಗಾಗಿ ರೈತರು ಬೀದಿಗೆ ಬಂದಿದ್ದಾರೆ. ಎಂದು ಆರೋಪಿಸಿದರು.

ಇದೇ ವೇಳೆ ಕಾರ್ಯದರ್ಶಿ ಶೀತಲ್ ಬಾಗೆ, ನಿರ್ದೇಶಕ ಶಿವಗೊಂಡ ಪಾಟೀಲ್ ಮಾತನಾಡಿದರು. ಪಿಕೆಪಿಎಸ್ ಅಧ್ಯಕ್ಷ ಡಾಕ್ಟರ್ ಸುದರ್ಶನ್ ಮುರಾಬಟ್ಟೆ ರೈತ ಸಂಘಟನೆ ನಿರ್ದೇಶಕರಾದ ಧನ್ಯಕುಮಾರ ಚೌಗುಲೆ, ಜಿತೇಂದ್ರ ಟಾಕಳೆ, ಡಾ. ಅಪ್ಪಾಸಾಹೇಬ ಭೋಸಲೇ, ರತನ ಟಾರೆ, ಹನುಮಂತ್ ಉಪ್ಪಾರ, ರವೀಂದ್ರ ಸಂಕಪಾಳ,ಗ್ರಾಮ ಪಂಚಾಯತ್ ಸದಸ್ಯ ಅಭಿನಂದನ ಪಾಟೀಲ, ಸುರೇಂದ್ರ ಮಾನೆ, ಶಶಿಕಾಂತ್ ಕಡೋಲೆ, ಪ್ರಥ್ವಿರಾಜ ಕುಪ್ಪಾನಟ್ಟೆ, ಸೇರಿ ಭೋಜ, ಭೋಜವಾಡಿ, ಕಾರದಗಾ ಪರಿಸರದ ರೈತರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




