Ad imageAd image

ಆರನೇ ಬಾರಿ ಕಪ್ ಗೆಲ್ಲುವತ್ತ ಸಿಎಸ್‌ಕೆ ಚಿತ್ತ

Bharath Vaibhav
ಆರನೇ ಬಾರಿ ಕಪ್ ಗೆಲ್ಲುವತ್ತ ಸಿಎಸ್‌ಕೆ ಚಿತ್ತ
WhatsApp Group Join Now
Telegram Group Join Now

ಎಂ.ಎಸ್. ಧೋನಿ ನಾಯಕತ್ವದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಚೆನ್ನೆöÊ ಸೂಪರ್ ಕಿಂಗ್ಸ್ ಈಗಾಗಲೇ ಐಪಿಎಲ್ ಪಂದ್ಯಾವಳಯಲ್ಲಿ ೫ ಟ್ರೋಫಿಗಳನ್ನು ಗೆದ್ದಿದೆ.
ಕಾಲ ಬದಲಾದಂತೆ ಈಗಿನ ಸಂಪೂರ್ಣ ಹೊಸ ಆಟಗಾರರಿಂದ ಕೂಡಿರುವ ಸಿಎಸ್‌ಕೆ ಈಗಲೂ ಉತ್ತಮ ತಂಡವಾಗಿದೆ. ಆದರೆ ಬ್ಯಾಟಿಂಗ್ ಬಲದಲ್ಲಿ ಬಹುತೇಕ ಹೊಸಬರನ್ನು ನೆಚ್ಚಿಕೊಂಡಿದೆ.
ಆರನೇ ಬಾರಿ ಪ್ರಶಸ್ತಿ ಗೆಲ್ಲಬೇಕೆಂಬ ಇರಾದೆ ಇಟ್ಟುಕೊಂಡು ಕಣಕ್ಕೆ ಇಳಿಯಲಿರುವ ಸಿಎಸ್‌ಕೆ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಆಯುಷ್ ಮಾತ್ರೆ, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೇವಿಸ್ ಹಾಗೂ ಪ್ರಶಾಂತ್ ವೀರ ಹೊಸ ಬ್ಯಾಟುಗಾರರಾಗಿದ್ದಾರೆ.
ಸಂಜು ಸ್ಯಾಮ್ಸನ್, ಶಿವಂ ದುಬೈ ರೂಪದಲ್ಲಿ ಅನುಭವಿ ಬ್ಯಾಟರುಗಳನ್ನು ಕೂಡ ತಂಡ ಹೊಂದಿದೆ. ಎಂ.ಎಸ್. ಧೋನಿ ಈಗಲೂ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಆಡುತ್ತಿದ್ದಾರೆ. ಆದರೆ ವಯಸ್ಸಾದಂತೆ ಧೋನಿ ಬಳಿ ಸಹಜವಾಗಿಯೇ ಮೊದಲಿನ ಚುರುಕುತನ ಕಾಣುತ್ತಿಲ್ಲ. ಆದರೂ ತಂಡಕ್ಕೆ ಅವರ ಕ್ರಿಕೆಟ್ ಅನುಭವ ನೆರವಿಗೆ ಬರಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!